ಮುಂಗಾರಿನ ಮುಸ್ಸಂಜೆ

ಕವಿತೆ

ಮುಂಗಾರಿನ ಮುಸ್ಸಂಜೆ

ಡಾ. ನಿರ್ಮಲಾ ಬಟ್ಟಲ

Lightning Strikes

ಮುಂಗಾರಿನ ಮೂರು
ಸಂಜೆಯಲಿ ಸುರಿದು
ಜಿಟಿ ಜಿಟಿ ಮಳೆಗೆ ಮೌನ ಮುರಿದ
ಕಪ್ಪೆಗಳೆಲ್ಲಾ ಕೆರಳಿ
ಹಳೆಯ ರಾಗದಲ್ಲೆ ಅರಚುತ್ತಿವೆ
ಅವುಗಳಿಗಿಗ ರಸಿಕತೆ ಸಮಯ….!!

ಪುಟ್ಟ ಮರಿಗಳ ಹೊಟ್ಟೆಗಾಗಿ ಹುಳಹುಪ್ಪಟೆಳ ಹೆಕ್ಕಿಹೆಕ್ಕಿ
ಹೈರಾಣಾದ ಹಕ್ಕಿಗೀಗ
ಜೋಗುಳ ಗಾನ ಮರೆತಿದೆ
ಅದಕಿಗ ನಾಳೆಯ ಚಿಂತೆ ಹೊದ್ದು ಮಲಗುವ ನಿದ್ದೆ ಸಮಯ…..!!

ಒಲೆ ಮುಂದೆ ಬೆಂದು
ನಿಂದನೆಗೆ ಕುದ್ದು
ತಿರಸ್ಕಾರಕ್ಕೆ ಕೊರಗಿದ ಅವಳಿಗೆ
ಹೊರ ಬಿಳಲಾರದಂತೆ
ಎದೆಯ ಸಂಕಟಗಳನು ಸೆರಗಿನಲ್ಲಿ ಗಂಟುಹಾಕುವ ಸಮಯ…..!!

ಊರಾಚೆಯ ಒಂಟಿ ಮನೆಯಲಿ
ಬಾರದವರಿಗಾಗಿ ಕಾಯುತ
ಮರೆತುಹೋದ ವಿರಹಗೀತೆ
ಗುನುಗುತ್ತಾ ಜಾರಿದ ಹರೆಯದ
ಸೆರಗು ತೀಡುತ ಕನ್ನಡಿಯ
ಮುಂದೆ ನೆರೆಗೆರೆ ಎಣಿಸುತಿರುವ ಅವಳಿಗೆ ಬಾಗಿಲಮುಂದೆ
ದೀಪ ಹಚ್ಚಿಡುವ ಸಮಯ….!!

ಮುಂಗಾರಿನ ಭಾರದ ಮೊಡವಿಗ
ಹನಿಯೊಡೆದು ಹಗುರಾಗಿದೆ ಮಳ್ಳನಂತೆ ಆಗಸದಂಗಳಕೆ
ಇಣುಕಿದ ಚಂದಿರ ಬೆಳಕಚೆಲ್ಲಿ ಕಾರಹುಣ್ಣಿಮೆಯ ರುಜುವಾತು ಮಾಡುವ ಸಮಯ….!!

************************

10 thoughts on “ಮುಂಗಾರಿನ ಮುಸ್ಸಂಜೆ

  1. ಬಹಳ ಅರ್ಥಪೂರ್ಣ ಕವಿತೆ…. ನಿರ್ಮಲಾ ಮೇಡಂ….ಸಂಕಟಗಳ ಸೆರಗಿನಲ್ಲಿ ಗಂಟು ಕಟ್ಟಿ ಕೊಳ್ಳುವ ಅವಳಿಗೂ….ದುಮ್ಮಾನದ ಮೋಡ ಸರಿದು ಬೆಳಕು ಸಿಗಲಿ

Leave a Reply

Back To Top