ಕವಿತೆ
ಕಣ್ಗವಿತೆ
ವೈ ಜಿ ಅಶೋಕ್ ಕುಮಾರ್

ಕಣ್ಣರಳಿಸಿ ಕಣ್ಣೊರಳಿಸಿ ಕಣ್ಣರಸಿಹ ಕಣ್ಣೇ
ಕಣ್ ಕಾಡಿದ ಕಣ್ ಬೇಡಿದ
ಕಣ್ಣೋದಿದ ಕಣ್ಣೇ…
ಕಣ್ಣಿರುಳಿನ ಕಣ್ಬೆಳಕಿನ
ಕಣ್ ಕಾಣದ ಹೆಣ್ಣೇ
ಕಣ್ಣಗಲಿಸಿ ಕಣ್ ಮಿಟುಕಿಸಿ
ಕಣ್ ಸೆಳೆದ ಮೀನೆ…
ಕಣ್ಣಾಚೆಗೆ ಕಣ್ಣೀಚೆಗೆ
ಕಣ್ ನೋಟದವರೆಗೆ
ಕಣ್ ಕುಕ್ಕಿತು ಕಣ್ಸೆಳೆಯಿತು
ಕಣ್ ಕಾಮನ ಕರೆಗೆ…
ಕಣ್ಣಿದ್ದರೂ ಕುರುಡಾಯಿತು
ಕಣ್ ಕಾಣದು ಹುಣ್ಣು
ಕಣ್ ಕಾಣದೆ ಕಣ್ಣಾದರು
ಕಣ್ಣೊಳಗಿನ ಕಣ್ಣು …
ಕಣ್ಣೀರಿಗೆ ಕಣ್ ಕರಗಿತು
ಕಣ್ಣೊಳಗಿನ ಕನಸು
ಕಣ್ ಕೇಳಿತು ಪ್ರತಿ ಜನಮಕೂ
ಕಣ್ಣಾಗಿಯೇ ಸೃಜಿಸು…
**********************
ತುಂಬಾ ಸುಂದರವಾಗಿ ದೆ ಸರ್
ಸೊಗಸಾಗಿದೆ ಸರ್
Amazing