ಅಪ್ಪನ ದಿನ
ನಡೆದಾಡುವ ದೇವರು
ಶಂಕರಾನಂದ ಹೆಬ್ಬಾಳ
ಅಹರ್ನಿಶಿ ದುಡಿದ ತ್ಯಾಗ ಮೂರ್ತಿ
ನೂರು ಸ್ವಪ್ನಗಳ ಹೊತ್ತು
ಬದುಕು ಸಾಗಿಸಿದ ಪುರುಷ
ಹಗಲಿರುಳು ಕಾರ್ಮಿಕನಂತೆ
ಬೆವರಿಳಿಸಿ ಹರಕು ಅಂಗಿಗೆ
ತೇಪೆ ಹಾಕುತ ಅಪ್ಪ ನಗುತ್ತಿದ್ದಾನೆ …..!!
ಸತಿಸುತರ ಆಸೆ ಅಭಿಷ್ಟಗಳನು
ಇಡೇರಿಸಿ ಸಾಗುವ ಬ್ಯಾಂಕ್ ಇವನು
ಆರ್ಥಿಕ ಮುಗ್ಗಟ್ಟಿಲ್ಲೂ ಹಣಕ್ಕೆ
ಕೊರತೆ ಇಲ್ಲದಂತಾಗಿಸಿದವನು
ಕಿಸೆಯಲ್ಲಿ ಹಣವಿಲ್ಲದಿದ್ದರೂ
ಸಂತಸದಲ್ಲಿದ್ದಾನೆ…..!!
ರೈಲು ಡಬ್ಬಿಯ ಸಂಸಾರವನು
ಎಳೆದು ಸಾಗಿಸುವ ಕರುಣಾಮಯಿ
ತನ್ನ ನೋವು ನಲಿವನ್ನು ಮಕ್ಕಳ
ಸುಖದಲ್ಲಿ ಕಂಡವನು
ರೋಗದ ಗೂಡಾದ ಮಾತಾಪಿತೃಗಳನು
ಸಾಕಿಸಲಹುತ್ತಿದ್ದಾನೆ…..!!
ತನ್ನ ತಲೆನೋವು ಲೆಕ್ಕಿಸದೆ ಮಕ್ಕಳು
ಕಾಡಿಸಿ ಪೀಡಿಸಿದರು ನಗುವನು
ಸಾಲದಲ್ಲಿಮಕ್ಕಳಿಗೆ ವಿಧ್ಯಾಭ್ಯಾಸ
ಕೊಡಿಸಿದ ಧೀಮಂತ
ಮನದೊಳಗೆ ಕೊರಗಿದರು
ಮಕ್ಕಳಿಗಾಗಿ ಮರುಗುವ
ಮಹಾಮೂರ್ತಿಯಾಗಿದ್ದಾನೆ….!!
ತಿಂಗಳಿನ ಪಗಾರವಿಲ್ಲದ
ದಿನಗೂಲಿ ನೌಕನಿವನು
ಹತ್ತಿಪ್ಪತ್ತು ರೂಪಾಯಿಯಲ್ಲಿ
ಉದರವನ್ನು ಹೊರೆದು
ನಮ್ಮ ಪಾಲಿನ ನಡೆದಾಡುವ
ದೇವನಾಗಿದ್ದಾನೆ…..!!
**********************