ಕವಿತೆ
ಬಯಲಾಗುವುದೇ ಜೀವನ?
ಡಾ.ಶಿವಕುಮಾರ್ ಮಾಲಿಪಾಟೀಲ
ಉಣ್ಣಲು ಏನು ಇಲ್ಲದ ಸ್ಥಿತಿಯಿಂದ
ಉಂಡರೆ ಜೀರ್ಣಿಸಲು ಸಾದ್ಯವಾಗದ ಸ್ಥಿತಿಗೆ, ರೋಗಗಳಿಗೆ ಗುಳಿಗೆ ನುಂಗುವ ಸ್ಥಿತಿಗೆ ಬಂದು ನಿಲ್ಲುತಾ
ಗಡಿಯಾರವೇ ಇಲ್ಲದೆ ದುಡಿದು
ನೂರಾರು ಗಡಿಯಾರ ಖರೀದಿಸಿ ಯಾವುದಕ್ಕೂ ಸಮಯವೇ ಇಲ್ಲದ ಸ್ಥಿತಿಗೆ ಬಂದು ನಿಲ್ಲುತಾ
ಉಡಲು ಬಟ್ಟೆ ಇಲ್ಲದ ಸ್ಥಿತಿಯಿಂದ
ಯಾವ ಬಟ್ಟೆ ಹಾಕಬೇಕೆಂಬ ಗೊಂದಲಕ್ಕೆ ಬಂದು ನಿಲ್ಲುತಾ
ನಡೆಯುವುದು ,ಓಡುವುದನ್ನು,
ಈಜಾಡುವುದನ್ನು ಕಲಿತು
ಸಂಸಾರ ಸಾಗರದಲ್ಲಿ ಮುಳುಗುತಾ
ದೆವ್ವದ ಕನಸಿಗೆ ಹೆದರಿ ,ಸಾವಿರಾರು ಹಗಲುಗನಸು ಕಂಡು ಕನಸುಗಳೇ ಬೀಳದಂತೆ ಒತ್ತಡದಲ್ಲಿ ಬದುಕುತಾ
ಬಳಪದಲಿ ಗೀಚಾಡಿ ,ದುಂಡಾಕ್ಷರ ಬರೆಯುವುದನ್ನು ಕಲಿತು ರುಜು ,ಹಸ್ತಾಕ್ಷರ ಗೀಚಾಡುತಾ
ಜಾತಿ ಧರ್ಮ ಗೊತ್ತಿಲ್ಲದಂತೆ ಬೆಳೆದು
ಯಾವುದೂ ಒಂದು ಜಾತಿ ಧರ್ಮಕ್ಕೆ ಅಂಟಿಕೊಳ್ಳುತಾ
ಏನು ಅರಿಯದ ಸ್ಥಿತಿಯಿಂದ
ಎಲ್ಲಾ ಅರಿತು ಅಸಹಾಯಕತೆ ಬಂದು ನಿಲ್ಲುತಾ
ತೊದಲು ನುಡಿಗಳನ್ನಾಡುತ ಮಾತಾಡುವುದನ್ನು ,ಹಾಡುವುದನ್ನು,ಪ್ರತಿಭಟಿಸುವುದನ್ನು ಕಲಿತು ಮೌನವಾಗುತಾ
ಶೂನ್ಯದಿ ಆರಂಭಿಸಿ ,ಭೂವಿಯೆಲ್ಲ ಸುತ್ತಿ ,ಘನ ಜ್ಞಾನ ಸಂಪತ್ತು ಗಳಿಸಿ ಮತ್ತೆ ಶೂನ್ಯವಾಗುತಾ
ಬಯಲಿಗೆ ಹೆದರಿ ಭವ ಬಂಧನದಲ್ಲಿ ಬಿದ್ದು ಅರಮನೆ ಕಟ್ಟಿಸಿ ಮತ್ತೆ ಬಯಲಾಗುವುದೇ ಅಲ್ಲವೇ
ಜೀವನ ?????
*******************
ತುಂಬಾ ಧನ್ಯವಾದಗಳು..
ಕವಿತೆ ಉತ್ತಮವಾದ ಚಿಂತನೆಯನ್ನು ಒಳಗೊಂಡಿದೆ..
ಕವಿತೆ ಉತ್ತಮವಾದ ಚಿಂತನೆಯನ್ನು ಒಳಗೊಂಡಿದೆ..
Superb
ಕವಿತೆ ಓದಲು ಆಪ್ಯತೆ ಎನಿಸುತ್ತದೆ.
ತುಂಭಾ ತುಂಬಾ ಚನ್ನಾಗಿದೆ
Very very good
Fantastic