ಗಜಲ್

ಗಜಲ್

ಎ.ಹೇಮಗಂಗಾ

Mirror Fragments on Gray Surface With The Reflection Of A Person"s Arm

ನಿನ್ನ ಕಟುನುಡಿಗಳ ಸಹಿಸಿ ನಿಲ್ಲಬಲ್ಲ ಧೈರ್ಯವಿದೆ ನನ್ನಲ್ಲಿ
ನಿನ್ನ ವಂಚನೆಗಳ ಪ್ರತಿಭಟಿಸಬಲ್ಲ ಧೈರ್ಯವಿದೆ ನನ್ನಲ್ಲಿ

ಮೊಗದಲ್ಲಿ ತೋರಿಕೆಯ ನಗು ವಿಷಪೂರಿತ ಮನಸು
ನೆಲ ಕುಸಿದರೂ ಮೇಲೇಳಬಲ್ಲ ಧೈರ್ಯವಿದೆ ನನ್ನಲ್ಲಿ

ಮೂಲೆ ಸೇರಿ ನೋವುಗಳ ನೆನೆದು ಬಿಕ್ಕಳಿಸಿ ಅಳಲಾರೆ
ಸಂಕಷ್ಟದ ಕಡಲ ಈಜಿ ದಡ ಸೇರಬಲ್ಲ ಧೈರ್ಯವಿದೆ ನನ್ನಲ್ಲಿ

ತಪ್ಪುಗಳು ನಿನ್ನವಾದರೂ ನಿತ್ಯ ದೂಷಿಸಿ ನರಳಿಸಿದೆ
ದೃಢ ಸಂಕಲ್ಪದಿ ಗಟ್ಟಿಯಾಗಬಲ್ಲ ಧೈರ್ಯವಿದೆ ನನ್ನಲ್ಲಿ

ಹೆಣ್ಣು ಅಬಲೆ ಎಂಬುದು ಇನ್ನಾದರೂ ಹುಸಿಯಾಗಬೇಕಿದೆ
ತುಳಿದರೂ ಗರಿಕೆಯಂತೆ ನೆಟ್ಟಗಾಗಬಲ್ಲ ಧೈರ್ಯವಿದೆ ನನ್ನಲ್ಲಿ

*************

4 thoughts on “ಗಜಲ್

  1. ಹೇಮಗಂಗಾ ಅವರೆ ಗಜಲ್ ಸೊಗಸಾಗಿದೆ, ಮಹಿಳೆ ಅಬಲೆ ಅಲ್ಲ ಸಬಲೆ ಎಂಬ ದ್ವನಿ ನೀಡುವ ಗಜಲ್ ಚನ್ನಾಗಿದೆ

  2. ಹೆಣ್ಣನ್ನು ನೋವುಗಳಿಂದ ಪುಟಿದೇಳಿಸಬಲ್ಲ ಗಝಲ್ ಚೆನ್ನಾಗಿದೆ ಮೇಡಂ…

    1. ಅದ್ಭುತ ಸುಂದರ ಗಜಲ್, ಹೇಮಗಂಗಾ ಮೇಡಂ ರವರದು ಹೆಣ್ಣು ಎಂದು ಅಬಲೆಯಲ್ಲ ಸಬಲೆ ಎನ್ನುವುದನ್ನು ಸೊಗಸಾಗಿ ಗಜಲ್ ಮೂಲಕ ತಿಳಿಸಿದ್ದಾರೆ,, ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ.

Leave a Reply

Back To Top