ಕವಿತೆ
ನಮ್ಮೊಳಗೆ
ಡಾ.ನಿರ್ಮಲಾ ಬಟ್ಟಲ
ನೀನು ಪದ
ನಾನುಪ್ರೇರಣೆ
ಕವಿತೆ ಹುಟ್ಟಿತು
ನಮ್ಮೋಳಗೆ….!
ನೀನು ಕವಿ
ನಾ ಭಾವಜೀವಿ
ಸ್ನೇಹ ಮೊಳೆಯಿತು
ನಮ್ಮೊಳಗೆ….!
ನೀನು ಜೀವ
ನಾನು ಭಾವ
ರಸಿಕತೆ ಹೊಮ್ಮಿತು
ನಮ್ಮೊಳಗೆ….!
ನೀನು ಪದ್ಯ
ನಾ ಗದ್ಯ
ಸಾಹಿತ್ಯ ಪಡಲೊಡೆಯಿತು
ನಮ್ಮೊಳಗೆ….!
ನೀನು ಮಾತು
ನಾನು ಮೌನ
ಗೋಷ್ಠಿ ( ಸಭೆ) ಸೇರಿತು
ನಮ್ಮೋಳಗೆ…..!
ನೀನು ಷಟ್ಪದಿ
ನಾನು ತ್ರಿಪದಿ
ಛಂದಸ್ಸು ಹುಟ್ಟಿತು
ನಮ್ಮೊಳಗೆ….!
ನೀನು ಚಿಂತನ
ನಾನು ಮಂಥನ
ವೈಚಾರಿಕತೆ
ಹುಟ್ಟಿತು
ನಮ್ಮೊಳಗೆ….
*************************
ಚೆನ್ನಾಗಿದೆ ಕವನ
ನಿಮ್ಮ ಅಕ್ಷರ ಪ್ರೀತಿಗೆ ಧನ್ಯವಾದಗಳು
ಕವಿತೆ ಚೆನ್ನಾಗಿದೆ ರಿ
ಧನ್ಯವಾದಗಳು
ಯಮುನಾ
ಕವಿತೆ ತುಂಬಾ ಚೆನ್ನಾಗಿದೆ
Beautiful
ಕವಿತೆ ಚನ್ನಾಗಿದೆ.
ಚೆಂದದ ಕವಿತೆ ಮೇಡಂ….ಕವಿ ನೀನು ಓದುಗ ನಾನು ಕವಿತೆ ನಮ್ಮೊಳಗೆ…. ಇಷ್ಟ ಆಯ್ತು