ಹಾಯ್ಕುಗಳು
ಎ. ಹೇಮಗಂಗಾ
- ಕರಗುವೆನು
ಹಿಮಬಿಂದುವಿನಂತೆ
ನಿನ್ನ ಪ್ರೀತಿಗೆ - ತೂತು ಬಿದ್ದಿದೆ
ದಾಂಪತ್ಯವೆಂಬ ದೋಣಿ
ಮುಚ್ಚಲಾಗದು - ಉದ್ಧರಿಸಿದ
ಜಗವ ಹೆಂಡತಿಗೆ
ಬದ್ಧನಾಗದೇ - ಮೂಡಿದ ರವಿ
ಕತ್ತಲ ಪರದೆಯ
ಸೀಳಿ ಬಂದಂತೆ - ಹೂಳಬೇಕಿದೆ
ಗೋರಿಯಲ್ಲಿ ಭೂತದ
ನೆನಪುಗಳ - ಕೊರಳ ತುಂಬಾ
ಮುತ್ತಿನ ಮಾಲೆ ನಲ್ಲ
ತುಟಿಯೊತ್ತಿದ್ದು - ಕವಲುದಾರಿ
ಪಯಣಕೆ ಕಾಣದು
ಕೊನೆ ಎಂದಿಗೂ - ಬೆಂಕಿಯ ಸುತ್ತ
ಸುತ್ತುವ ಪತಂಗಕ್ಕೆ
ಮತಿಭ್ರಮಣೆ - ಅಂತರಾಳದ
ಮೌನದಲ್ಲೂ ಮಾತಿದೆ
ಅರಿಯಬೇಕು - ನಿತ್ಯ ಕಾಡುವ
ಕವಿತೆಯಾದೆ ಸ್ಮೃತಿ
ಪಟಲದಲ್ಲಿಎ
*************************
ಚಂದದ ಹೈಕುಗಳು ಜೀ ಮೇಡಂ