ಕಣ್ಮರೆ

ಕವಿತೆ

ಕಣ್ಮರೆ

ಲಕ್ಷ್ಮೀ ಮಾನಸ

blue sea waves under white sky during daytime

ತೆರೆಗಳು
ಉಕ್ಕಿ ಉಕ್ಕಿ ಬರುತಿರಲು,
ಕಡಲ ಒಡಲ
ಸೇರುತಲಿವೆ
ಮಣ್ಣಿನ ಮೇಲೆ
ಬರೆದ ಅಕ್ಕರಗಳು…

ಕಡಲ ಹನಿಗಳ
ಮಡಿಲಲ್ಲಿ ತೇಲುವ
ಮಣ್ಣಿನ ಕಣಗಳು
ಹೇಳಲಿಲ್ಲವೇ….?
ಅಲೆಯ ರಭಸದಲ್ಲಿ
ಅಕ್ಕರಗಳು,
ಕೊಚ್ಚಿಹೋಗುವವೆಂದು……?
ಮರಳಿ ಮರಳಿನಲ್ಲಿ
ಮೂಡುವುದಿಲ್ಲವೆಂದು…?

ಮರೆಯಾಗುವುದು
ಎಂದರಿತರೂ,
ಮರಳಿ ಮರಳಿ
ಮನವಿಂದು,
ಮರಳಿನ ಮೇಲೆ
ಬರೆಯುತಲಿದೆ
ಕಡಲತೀರದ ಮರೆಯಲ್ಲಿ …..

*************

Leave a Reply

Back To Top