ಅಪರಾಜಿತೆ

ಕವಿತೆ

ಅಪರಾಜಿತೆ

ರೇಶ್ಮಾಗುಳೇದಗುಡ್ಡಾಕರ್

Shallow Focus Photography of Yellow String Light

ಕತ್ತಿಗಿಂತಲು ಹರಿತ
ಮಾತಿನ ಮೊನಚು
ತಿರಸ್ಕರಿಸಿದ ನೋಟ
ಹೃದಯವ ಕೊಚ್ಚಿಹಾಕಲು ಸಮಯವೇ
ಬೇಡ ! ಎನ್ನುತ್ತಿದೆ .

ಬಯಲ ದೀಪದಂತಹ
ಬದುಕಿಗೆ ಗಾಳಿಗೆ ತೋರಿ
ಬಂದ ಮಾತುಗಳು
ಎದೆಯಲ್ಲೇ ಮುತ್ತಾಗಿ
ಕನಸುಗಳ ಕಾಲಿಗೆ ಚುಚ್ಚುವವು
ಮುಳ್ಳು ಗಳಿಗಿಂತ ಆಳವಾಗಿ……

ಒಡಲ ಬೆಂಕಿ ಹೊತ್ತು
ಕಡಲಿಗೆ ಹೊಕ್ಕರು ಆರದು !
ಬಣ್ಣದ ಬಯಕೆಯ
ಅಲೆಗೆ ಮನದ ಗೋಡೆಯ
ಹೂ ಗಳು ಅರಳಿ ನಗುತಿಹವು ….!!!
ಮಮತೆ ಇಲ್ಲದ ಮರಭೂಮಿಯಲ್ಲು
ಕಂಗೂಳಿಸಿತಿಹವು ….!!!

ತೆರೆಯಲು ಹವಣಿಸಿದೆ
ಸಂತಸದ ಕದವ ಕಾಲ ಅನುಮತಿಯ
ಬೇಡಿ ಜೀವ .
ನಡೆದ ಹಾದಿಯೇಲ್ಲಾ ಗೋಡೆಗಳು
ಎದ್ದರು ಆಸರೆ ಯ ಬೆಳಕಿನ ಕಿರಣವ ಕಾಣಲು
ಛಲಬಿದೆ ಕಿಟಕಿ ಮಾಡಿತು ಭಾವ ….

ಕಂಕುಳಲ್ಲಿ ಒಂದು ,ಕೈಲ್ಲೊಂದು
ಹೀಡಿದು ಗಮ್ಯದ ದತ್ತ ನೋಟ ಹರಿಸುತ್ತಾ
ಸಾಗುವದು ಮನವು ಲೆಕ್ಕವಿಲ್ಲದಷ್ಟು
ಬಿಟ್ಟು ಸಾಗಿದ ಮಧುರ ನೆನಪುಗಳ ನೆರಳಲ್ಲಿ ……!!
ಕಳೆದ್ದನ್ನು ಪಡೆಯುವ ಬಯಕೆಯಲಿ ……
ಸಾಗುವದು ಮುಗ್ದ ಜೀವಗಳ ಅಪ್ಪಿ ಹಿಡಿದು
ಹರಿದ ಸೆರಗ ಹೊದ್ದುಕೊಂಡು ……

************

One thought on “ಅಪರಾಜಿತೆ

  1. ಭರವಸೆಯೇ ಬದುಕಿಗೆ ಬೆಳಕು.. ಕವನದ ಆಶಯ ಚೆನ್ನಾಗಿದೆ. ಶುಭವಾಗಲಿ

Leave a Reply

Back To Top