ಗಜಲ್
ಜಬೀವುಲ್ಲಾ ಎಮ್. ಅಸದ್
ಕತ್ತಲಲಿ ಬೆಳಕು ಪರವಶದಿ ನರ್ತಿಸಿದಂತಿದೆ ಸೂಫಿ
ಆಲಯದಿ ಬಯಲು ಧ್ಯಾನದಿ ಕುಣಿದಂತಿದೆ ಸೂಫಿ
ಮೌನ ರಾಗಕ್ಕೆ ಯಾವ ಹೋಲಿಕೆ ನೀಡಲಿ ಹೇಳು
ಪ್ರೇಮದ ಹಾಡಿಗೆ ವೇದನೆ ಮಿಡಿದಂತಿದೆ ಸೂಫಿ
ಕಾಡಿಗೆಯ ಅಂಚಲಿ ಕಂಬನಿ ಜಿನುಗಿ ಮಾತಾಗಿದೆ
ಖಾಲಿ ಹೃದಯದ ಬಟ್ಟಲು ತುಂಬಿದಂತಿದೆ ಸೂಫಿ
ಮನದ ವಿರಹದ ಸುಖಕೆ ಲೋಕದಿ ಕೊನೆ ಎಲ್ಲಿ
ನೋವು ಸಹ ತಬ್ಬಿ ನಿನ್ನ ನಗುವಾದಂತಿದೆ ಸೂಫಿ
ಅಲ್ಲಾಹನ ಮರ್ಜಿಗೆ ಶಿರಬಾಗಿ ಶರನಾಗು ಅಸದ್
ಬಾಳಿನರಿವೆ ಕಳಚಿ ಸಾವು ಬೆತ್ತಲಾದಂತಿದೆ ಸೂಫಿ
************************
Nice one..