ಅನುವಾದ ಸಂಗಾತಿ
ಗಝಲ್
ಮೂಲ..ಜಾವೇದ ಅಖ್ತರ್
ಅನುವಾದ: ನೋರಾ
ಅಮ್ಮ ಏನೇ ಹೇಳಲಿ ಸತ್ಯ ಹೇಳುತಿದ್ದಳು ನನಗೆ ನಂಬಿಕೆಗಳಿದ್ದವು…
ಆಗ ಬಾಲ್ಯದ ನನ್ನ ದಿನಗಳು ಚಂದ್ರನ ಮೇಲೆ ಅಪ್ಸರೆಯರಿದ್ದರು…
ಈ ದಿನವೊಂದಿದೆ ಈಗ ನಮ್ಮವರೇ ನಮ್ಮ ಸಂಬಂಧಗಳ ಕಡಿಯುತ್ತಿದ್ದಾರೆ
ಆ ದಿನವೊಂದಿತ್ತು ಆಗ ಗಿಡದ ಟೊಂಗೆಗಳೇ ನಮ್ಮಭಾರ ಸಹಿಸುತ್ತಿದ್ದವು…
ಈ ದಿನವೊಂದಿದೆ ಈಗ ರಸ್ತೆಗಳೆಲ್ಲಾ ಮುನಿದುಕೊಂಡಂತಿವೆ
ಆ ದಿನವೊಂದಿತ್ತು ಆಗ ಬನ್ನಿ ಆಡೋಣ ಎಂದೆಲ್ಲಾ ಓಣಿಗಳು ಕರೆಯುತ್ತಿದ್ದವು…
ಈ ದಿನವೊಂದಿದೆ ಈಗ ಎದ್ದ ರಾತ್ರಿಗಳು ಗೋಡೆಗಳ ದಿಟ್ಟಿಸುತ್ತಿವೆ
ಆ ದಿನವೊಂದಿತ್ತು ಆಗ ಸಂಜೆಯ ರೆಪ್ಪೆಗಳೂ ಸಹ ಭಾರವಾಗಿರುತ್ತಿದ್ದವು….
ಈ ದಿನವೊಂದಿದೆ ಈಗ ತಲೆಯಲ್ಲಿ ಚಾಲಾಕಿತನದ ಮಾತುಗಳಿವೆ
ಆ ದಿನವೊಂದಿತ್ತು ಆಗ ಹೃದಯದಲ್ಲಿ ಮುಗ್ಧತನದ ಮಾತುಗಳಿರುತ್ತಿದ್ದವು…
ಈ ದಿನವೊಂದಿದೆ ಈಗ ಲಕ್ಷಗಟ್ಟಲೆ ನೋವುಗಳು ಕಣ್ಮುಂದೆ ಕಂಬನಿಗೆ ಬರಗಾಲ
ಆ ದಿನವೊಂದಿತ್ತು ಆಗ ಚಿಕ್ಕ ಮಾತಿಗೆ ನದಿಗಳು ಹರಿಯುತ್ತಿದ್ದವು…
ಈ ಒಂದು ಮನೆ ಈಗ ಈ ಮನೆಯಲ್ಲಿ ಸಿಂಗರಿಸಲ್ಪಟ್ಟ ಸಾಮಾನುಗಳಿವೆ
ಆ ಒಂದು ಮನೆ ಆಗ ಆ ಮನೆಯಲ್ಲಿ ವಯಸ್ಸಾದ ನನ್ನಜ್ಜಿ ಇರುತ್ತಿದ್ದಳು.
**************