ಅನಿಸಿಕೆ

ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ

Photo Of Woman Covering Her Face

ಐಶ್ವರ್ಯ

ತನ್ನ ಮೂರು ವರ್ಷದ ಹೆಣ್ಣು ಮಗುಗೆ ಮನೆಯಿಂದಾಚೆ ಕಳಿಸ್ಬೆಕಾದ್ರೆ ಒಬ್ಬ ತಾಯಿ ಹಾಕಿದ್ದ ಕಾಲ್ ಗೆಜ್ಜೆ, ಕೈಬಳೆ, ಹೂವೆಲ್ಲ ತೆಗೆದು ಗಂಡ್ಮಕ್ಕಳ ತರ ತಲೆಗೆ ಎಣ್ಣೆ ಹಾಕಿ ಕ್ರಾಪ್ ಬಾಚಿ ಹುಡ್ಗುರ ಬಟ್ಟೆ ಹಾಕಿದ್ದು ನೋಡಿ ನಾನ್ ಅನ್ಕೊಂಡೆ ಅವರಿಗೆ ಪಾಪ ಗಂಡ್ಮಗು ಅಂದ್ರೆ ಇಷ್ಟ ಅನ್ಸತ್ತೆ ಅವರಿಗೆ ಗಂಡು ಮಗು ಇಲ್ಲ ಅನ್ಕೊಳ್ತಿದ್ದ ಹಂಗೆನೆ ಮನೆಯಿಂದ ಆಚೆ ಅಳುತ್ತ ಅವರ ಮಗ ಬಂದು ನನ್ ಬಟ್ಟೆ ಯಾಕೆ ಅವಳಿಗೆ ಹಾಕಿದೆ ಅಂಥ ಹಠ ಮಾಡೋದು ನೊಡಿ ಕೂತುಹಲ ಸ್ವಲ್ಪ ಜಾಸ್ತಿನೆ ಆಯ್ತು. ಆದ್ರೆ ಆ ತಾಯಿ ಹೇಳಿದ್ದು ಕೇಳಿ ಒಂದು ಕ್ಷಣ ಮೈ, ಮನಸೆಲ್ಲ ನಿಸ್ತೇಜವಾಗಿ ಹೋಯ್ತು. ಹೆಣ್ಣು ಅಂತ ಹೆಮ್ಮೆ ಪಡೋಕು ಆಗ್ದೆ ಇರುವಷ್ಟು ಹೀನಾಯ ಪರಿಸ್ಥಿತಿಲಿ ಬದುಕ್ತಿದಿವಾ ಅನ್ನಸ್ತು. ಮಗನ್ನ ಸಮಾಧಾನ ಮಾಡ್ತ ಆ ತಾಯಿ ಹೇಳಿದ್ದು ಒಂದೇ ಮಾತು ನಂಗೂ ಅವಳಿಗೆ ಹೆಣ್ಣಿನ ಬಟ್ಟೆ ಹಾಕಿ ಗೆಜ್ಜೆ ಬಳೆ ಹಾಕಿ ನೋಡೋಕೆ ಇಷ್ಟ ಆದ್ರೆ ಅವಳು ಅದೆಲ್ಲ ಹಾಕಿದ್ನ ನೋಡಿ ಅವಳು ಹೆಣ್ಣು ಅಂತ ಗೊತ್ತಾದ್ರೆ ಚಿಕ್ಕ ಮಗು ಅಂತಾನೂ ನೋಡ್ದೆ ಎಲ್ಲಿ ನಾಯಿಗಳ ತರ ಅವಳನ್ನ ಕಿತ್ತಾಡ್ಕೊಂಡು ಹಂಚ್ಕೊಳ್ತಾರೊ ಅನ್ನೊ ಭಯ ಅಂದ್ರು. ಹುಟ್ಟಿಂದ ಹೂಳೊವರೆಗು ಹೆಣ್ಣು ಹುಣ್ಣಾಗದೆ ಬದುಕೋದೆ ಜೀವಮಾನದ ದೊಡ್ಡ ಸಾಧನೆ ಅನ್ನಸ್ತಿದೆ ಇತ್ತಿಚೆಗೆ….
ಇವತ್ತು ಪ್ರಿಯಾಂಕ, ಅವತ್ತು ನಿರ್ಭಯ, ಮೊನ್ನೆ ಮಧು, ಮತ್ತೆ ನಾಳೆ..? ನಮ್ಮಗಳಲ್ಲೆ ಇನ್ಯಾರದ್ದೊ ಮನೆಯ ಹೆಣ್ಣು.ಇದೇ ತರ ಚಿಕ್ಕ ಮಕ್ಕಳು, ಮುದುಕಿಯರು, ಮಾನಸಿಕ ಅಸ್ವಸ್ಥರು ಅನ್ನೊದನ್ನು ನೋಡದೆ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳ ಮೇಲೆ ನಿಮ್ಮ ಕಾಮ ತೃಷೆನ ತೀರಿಸ್ಕೊಳ್ತ ಹೋದ್ರೆ ನಾಳೆ ರೋಡಲ್ಲಿ ಅಡ್ಡಾಡೊ ಹೆಣ್ಣು ನಾಯಿನೂ ನಿಮ್ಮಗಳ ಹತ್ರ ಸುಳಿಯಲ್ಲ.

ದೇವರಿಗೆಲ್ಲ ಹರಕೆ ಹೊತ್ತು, ಮಕ್ಕಳನ್ನ ಪಡೆದು ಅವರನ್ನ ಮುದ್ದಾಗಿ ಸಾಕಿ ಇನ್ಯಾವನ್ದೊ ತೀಟೆಗೆ ಬಲಿ ಕೊಡುವ ಬದಲು, ಇದೆಲ್ಲ ನೋಡ್ತಿದ್ರೆ ಮೊದಲಿದ್ದ ಭ್ರೂಣ ಲಿಂಗ ಪತ್ತೆ ಆವಿಷ್ಕಾರವೇ ಚೆಂದವಿತ್ತು ಮೊದಲೆ ಹೆಣ್ಣು ಅಂತ ತಿಳ್ಕೊಂಡು ಹುಟ್ಟಿಗೆ ಕಾರಣರಾದವರ ಕೈಕಲ್ಲಿ ಸಾಯೋದೆ ನೆಮ್ಮದಿ. ಮೊದಲೆಲ್ಲ ಮನೆ ತುಂಬಾ ಮಕ್ಳಿರ್ತಿದ್ರು, ಬರ್ತಾ ಬರ್ತಾ ಭ್ರೂಣ ಲಿಂಗ ಪತ್ತೆ ನಿಷೇಧದಿಂದ ಗಂಡೊ ಹೆಣ್ಣೊ ಮನೆಗೊಂದು ಅನ್ನೊ ಹಾಗಾಯ್ತು ಆದ್ರೆ ಇವಾಗಿರೊ ಕಾಲಮಾನ ನೋಡಿದ್ರೆ ಹೆಣ್ಣು ಬಂಜೆಯಾಗೇ ಉಳಿದ್ರು ಪರವಾಗಿಲ್ಲ ಮತ್ತೊಂದು ಹೆಣ್ಣು ಹುಟ್ಟೊದೆ ಬೇಡ ಅನ್ಸ್ತಿದೆ…..

ಹೆಣ್ಣಿನ ಉಬ್ಬು ತಗ್ಗಾದ ಮಾಂಸದ ಮುದ್ದೆಯ ದೇಹವಿರೋದೆ ನಿಮ್ಗಳಿಗೆ ಜನ್ಮ ಕೋಡೊಕೆ ಹಾಲಿಣಿಸಿ ಬೆಳೆಸೋಕೆ ಆದ್ರೆ ನೀವುಗಳು ಹೆಣ್ಣಿನ ಅದೇ ಎರಡು ಅಂಗಗಳಿಗೆ ಆಸೆ ಪಟ್ಟು ಅತ್ಯಾಚಾರ ಕೊಲೆ ಮಾಡ್ತಿರ, ಅಲ್ಲ ನಂಗೆ ಒಂದು ವಿಷಯ ಅರ್ಥ ಆಗ್ತಿಲ್ಲ ಕಂಡವರ ಮನೆ ಹೆಣ್ಮಕ್ಕಳ ಎದೆ ಸೀಳು ಕಂಡು ಕಣ್ಮುಚ್ಚದೆನೆ ಎದೆ ಕಡೆ ನೋಡೋವಾಗ ನಿಮ್ಗೆ ಹಾಲುಣಿಸಿ ಬೆಳೆಸಿದ ನಿಮ್ಮ ಅಮ್ಮ ನೆನಪಾಗಲ್ವ? ಬೀದಿಲಿ ಹೋಗೊ ಹೆಣ್ಣನ್ನ ಬೆತ್ತಲೆ ಮಾಡಿ ಹಿಗ್ಗಿ ಹಿಂಸಿಸುವಾಗ ಅವಳ ಅಣ್ಣ ಅನ್ನೊ ಕೂಗು ನಿಮ್ಗೆ ಕೇಳ್ಸಲ್ವ? … ಅಥವಾ ಅವಳಲ್ಲಿ ನಿಮ್ಮ ಅಕ್ಕ ತಂಗಿಯರು ಕಾಣಲ್ವ?..ದೇಹದ ಬಿಡಿ ಭಾಗಗಳ ಕಲಿಯೊ ವಯಸ್ಸಿನ ಮಕ್ಕಳ ಮೈ ಮೇಲೆಲ್ಲಾ ಮೃಗಗಳ ತರ ಬೀಳ್ತಿರಲ್ವ ಇದೇನ ನಿಮ್ಮ ಗಂಡಸ್ತನ?….ಥೂ… ಇಂಥವರನ್ನೆಲ್ಲ ಮೃಗಗಳಿಗೆ ಹೋಲ್ಸಿದ್ರೆ ಪಾಪ ಅವಕ್ಕೂ ಅವಮಾನ ಆಗಬಹುದು. ಮಕ್ಕಳಿಂದ ಹಿಡಿದು ಮುದುಕಿಯರ ಮೇಲೆಲ್ಲಾ ಗಂಡಸ್ತನ ತೊರ್ಸೊ ಗಂಡ್ಸು ಸಮಾಜದಲ್ಲಿ ಗಂಡ್ಸು ಅಂತ ಅನ್ಸ್ಕೊಳೋದು ನಾಮಾಕಾವಸ್ಥೆಗಷ್ಟೆ….

ಯಾರದ್ದೊ ಮನೆಯ ಹೆಣ್ಮಕ್ಳಿಗೆ ಹಿಂಗಾಗಿ, ಬೆಂಕಿಲಿ ಸುಟ್ಟು, ಕರಕಲಾದರೂ ಕೊನೆಗೆ ನಾವ್ ಮಾತ್ರ ಸುಡೋದು ಸತ್ತ ಆ ಜೀವಾನ ಜೊತೆಗೊಂದು ಕ್ಯಾಂಡಲ್ ನ.‌ ಕ್ಯಾಂಡಲ್ ಸುಟ್ಟು ಶಾಂತಿ ಕೋರುವ ಬದಲು ಸುಟ್ಟವನನ್ನೆ ಸುಟ್ಟರೆ ಬದಲಾಗಬಹುದೆನೊ ಮುಂದೆ ಕಾಲ. ಅತ್ಯಾಚಾರಕ್ಕೊಳಗಾದ ಹೆಣ್ಣು ನ್ಯಾಯ ಕೇಳಿದ್ರೆ ನ್ಯಾಯ ಕೊಡೊ ಕಾನೂನುಗಳೇ ಮತ್ತೆ ಮತ್ತೆ ಪ್ರಶ್ನೆ ಮಾಡಿ ಮತ್ತಷ್ಟು ಮಾನಸಿಕವಾಗಿ ಅತ್ಯಾಚಾರ ಮಾಡ್ತವೆ. ಆದ ಬಸಿರಿಗೊಂದಿಷ್ಟು ಸಾಂತ್ವಾನ ನೀಡಿ ಕೈ ತೊಳ್ಕೊತಾವೆ. ಇನ್ನು ಸ್ವಲ್ಪ ಮುಂದುವರೆದ್ರೆ ನಾಲ್ಕೈದು ವರ್ಷ ಜೈಲು ಒಂದಿಷ್ಟು ದುಡ್ಡು ಅಂತ ಹಾಕ್ತಾರೆ. ಮತ್ತೈದು ವರ್ಷದಲ್ಲಿ ಅಂಥದ್ದೆ ಕೃತ್ಯಗಳು ನಡಿತಾನೇ ಇರತ್ತೆ. ಈಗಲಾದರೂ ಕಾನೂನುಗಳು ಬದಲಾಗದಿದ್ದರೆ ಮುಂದೊಂದು ದಿನ ಜನರ ಮನಸ್ಸಲ್ಲಿ ರಾಷ್ಟ ಧ್ವಜ ಕೇವಲ ಒಂದು ಬಟ್ಟೆಯಾಗಿ, ಕೋರ್ಟಗಳು ಕಟ್ಟಡಗಳಾಗಿ, ಸಂವಿಧಾನಗಳು ಬರೀ ಪುಸ್ತಕಗಳಾಗಿ ಉಳ್ಕೊಳೊದ್ರಲ್ಲಿ ಸಂಶಯವೇ ಇಲ್ಲ……

ಅರಬ್ ನಂತಹ ದೇಶಗಳಲ್ಲಿ ಅತ್ಯಾಚಾರವಿರಲಿ ಪರ ಪುರುಷನ ಹೆಂಡತಿಯನ್ನು ಕೂಡ ಕಣ್ಣೆತ್ತಿ ನೋಡುವಂತಿಲ್ಲ.
ಅದ್ಯಾವುದೊ ಹಮ್ಮುರಬಿ ರಾಜ ಅಂತೆ ಅವರ ನ್ಯಾಯವೇ ಸರಿ ಇತ್ತು. ಕಳ್ಳತನ ಮಾಡಿದ್ರೆ ಕೈ, ನೋಡಿದ್ರೆ ಕಣ್ಣು ಕಿಳೋದು, ಕೈಯಿಗೆ ಕೈಯಿ ಅನ್ನುವಂತೆ. ಜೀವಕ್ಕೆ ಜೀವ ಕೊಟ್ಟಾಗಲೇ ಜೀವದ ಬೆಲೆ ತಿಳಿಯೋದು.
ಹೆಲ್ಮೆಟ್ ಹಾಕಿಲ್ಲ ಅಂದ್ರೆ ಗಲ್ಲಿಗಳಲ್ಲಿ ನಿಂತು ಪೈನ್ ಹಾಕೊ ಸರ್ಕಾರ, ಅತ್ಯಾಚಾರ ಮಾಡಿದವರನ್ನ ನಡು ರೋಡಲ್ಲಿ ನಿಲ್ಸಿ ಗಲ್ಲಿಗೇರಿಸಿದ್ರೆ ಇಂಥ ಕೃತ್ಯಗಳು ಕಡಿಮೆಯಾಗಬಹುದು. ಅದ್ರೆ ಇಂಥ ಕಾನೂನುಗಳು ಬರೋದಿಕ್ಕೆ ಮತ್ತೆ ಹಮ್ಮುರಬಿಯಂತ ರಾಜನೇ ಹುಟ್ಟಿ ಬರಬೇಕೆನೋ?….

ಹೆಣ್ಣೆಂದರೆ ನಿಮ್ಮ ಕಾಮ ತೃಷೆ ತೀರಿಸುವ ಮಷೀನಲ್ಲ, ನಿಮ್ಗೆ ಜನ್ಮ ನೀಡೋ ತಾಯಿ, ನಿಮಗಾಗಿಯೇ ಜನ್ಮ ಪಡೆದ ಹೆಂಡತಿ, ನಿಮ್ಮಿಂದ ಜನ್ಮ ಪಡೆದ ಮಗಳು, ನಿಮ್ಮೊಟ್ಟಿಗೆ ಜನ್ಮ ಪಡೆದ ಅಕ್ಕ ತಂಗಿ, ಅವಳನ್ನು ಬದುಕಲು ಬಿಡಿ ನಿಮ್ಮೊಳಗೊಬ್ಬಳಾಗಿ ಅವಳೊಂದು ಹೆಣ್ಣಾಗಿ. ಮೊದಲೇ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ, ಅದ್ರಲ್ಲಿ ನೀವು ಇರೊ ಬರೊ ಹೆಣ್ಮಕ್ಕಳನ್ನ ಹೀಗೆ ಮಾಡ್ತಿದ್ರೆ, ನೀವು ಈಗೆಲ್ಲ ತಮಾಷೆಗೆ ಸಿಂಗಲ್ ಸಿಂಗಲ್ ಅಂತ ಹೆಳ್ಕೊಂಡು ಅಡ್ಡಾಡೋದು ನಿಜವಾಗೋ ಕಾಲ ತುಂಬಾ ದೂರ ಉಳಿದಿಲ್ಲ……ಒಂಟಿ ಹೆಣ್ಣು ಯಾವತ್ತು ನಿಮ್ಮ ಅವಕಾಶಕ್ಕೆ ಸಿಕ್ಕ ಹಣ್ಣಲ್ಲ ನಿಮ್ಮ ಜವಾಬ್ದಾರಿಯ ಅಕ್ಕ ತಂಗಿಯರು ನಿಮ್ಮ ಮನೆಯ ಹೆಣ್ಣು ಮಕ್ಕಳಂತೆಯೇ ಅವರು….


Leave a Reply

Back To Top