ರೈತ ಗಜಲ್
ತುಳಿದುಬಿಡು ಬಿರುಕಿನಲ್ಲಿ ಬದುಕು ಇರಬಹುದೇನೋ ನೋಡಿ ಬರುವೆ
ಬಿತ್ತಿದ ಬೀಜಗಳು ಅರೆಜೀವ ಹಿಡಿದಿರಬಹುದೇನೋ ನೋಡಿ ಬರುವೆ
ಉಲ್ಲಾಸದಿ ಹಿರಿಹಿರಿ ಹಿಗ್ಗಿಸಿದ ಅದೇ ನೆಲ ಬಾಯ್ಬಿರಿದು ಎದೆ ಕೊರೆದಿದೆ
ಬೇರುಗಳ ಮುನಿಸಿಗೆ ಕಾರಣ ಏನಿರಬಹುದೇನೋ ನೋಡಿ ಬರುವೆ
ಆಸೆಯ ಮೇಲೆ ತಣ್ಣೀರು ಎರಚಬೇಡ ವಿಧಿಯೇ ಸುಕ್ಕುಗಟ್ಟಿದ ಜೀವವಿದು
ಕಣ್ಣೀರ ಹನಿ ಹನಿಸಿದರೆ ಹಸಿರು ಮರುಹುಟ್ಟಬಹುದೇನೋ ನೋಡಿ ಬರುವೆ
ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ
ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ
ಕಾಯುವವನೇ ಕೊಲ್ಲಬೇಕೆಂದು ನಿಂತರೆ ಹುಲ್ಲುಕಡ್ಡಿಗೂ ಉಳಿವಿಲ್ಲ ‘ಅಮರ’
ಕುಳಿತು ಮೋಜು ನೋಡುವ ಕೊಲೆಗಾರ ಹೇಗಿದ್ದಾನೇನೋ ನೋಡಿ ಬರುವೆ
********************************
ಅಮರೇಶ ಎಂಕೆ