ರೈತ ಗಜಲ್

Outlook Photo Gallery : A farmer looks in the sky in hope of rain at  Dhamkheda village in Vidisha, Madhya Pradesh. More than 37 districts of the  state being declared as drought

ತುತ್ತು ಅನ್ನಕ್ಕಾಗಿ ನೆತ್ತರವ ಹರಿಸುವನು ನೇಗಿಲಯೋಗಿ
ತನ್ನ ಜೀವವ ಮುಡಿಪಿಟ್ಟು ದುಡಿಯುವನು ನೇಗಿಲಯೋಗಿ

ನೇಸರನ ಕಿರಣ ಆಚೆ ಹೊಮ್ಮುವ ಮೊದಲು ಹೊರಡುವನು
ನೇಗಿಲವ ಕಟ್ಟಿ ಹೊಲದಲಿ ಊಳುವನು ನೇಗಿಲಯೋಗಿ

ಧನಿಕನ ದುರಾಸೆಗೆ ಮುಗ್ಧ ರೈತ ಬಲಿಯಾಗುತಿಹನು
ಹಗಲಿರುಳೆನ್ನದೆ ಆಹಾರಕ್ಕಾಗಿ ಬಿತ್ತುವನು ನೇಗಿಲಯೋಗಿ

ರೈತನ ಹೆಸರಲಿ ಪೇಟೆಯಲಿ ದುಡಿವರು ಕೋಟಿ
ಹಿಡಿ ಹಿಟ್ಟು ತಿನ್ನದೆ‌ ಕಷ್ಟ ಪಡುವನು ನೇಗಿಲಯೋಗಿ

ನೂರಾರು ಕೀಟಗಳು ಬೆಳೆಯ ಹಾಳು ಮಾಡುತಿವೆ
ಕಣ್ಣ ರೆಪ್ಪೆ ಆರದಂತೆ‌ ಬಿಕ್ಕಿಬಿಕ್ಕಿ ಅತ್ತವನು ನೇಗಿಲಯೋಗಿ

ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕಿದೆ ‘ಜೀವಕವಿ’
ಬೆಳೆಗೆ ತಕ್ಕ ಬೆಲೆ ಕೊಟ್ಟರೆ ತುಸು ನಗುವನು ನೇಗಿಲಯೋಗಿ

*******************************

ರಾಹುಲ ಮರಳಿ

2 thoughts on “

  1. ರೈತನ ಈಗಿನ ಪರಿಸ್ಥಿತಿಯನ್ನು ನಿಮ್ಮ ಗಜಲ್ ಮೂಲಕ
    ಬಹಳ ಚೆನ್ನಾಗಿ ಹೇಳಿದ್ದೀರಿ ರಾಹುಲ್ ಮರಳಿಯವರೆ.
    ಮುಂದಿನ ಕೆಲಸ ಸರ್ಕಾರದ್ದು……,!

Leave a Reply

Back To Top