ಹೊಸಬರ ಎರಡುಕವಿತೆಗಳು

ಕವಿತೆ

ವೈಷ್ಣವಿ ವಿನಯ್

ತಾಯಿ

ಪ್ರತಿ ಹೆಣ್ಣಿನಲ್ಲೂ ಮಾತೃತ್ವ
ಪ್ರೀತಿ ಇರುವುದು
ಕಷ್ಟಗಳನ್ನು ಮರೆತು
ಮಕ್ಕಳ ಸುಖ ಕಾಣುವಳು!!!

ಕರುಳಿನ ಬಳ್ಳಿಯ ಸೃಷ್ಟಿಕರ್ತೆ ಅಮ್ಮ
ಕಲ್ಪವೃಕ್ಷವಾಗಿ ನಿಂದಿಹಳು ಅಮ್ಮ
ಹೊತ್ತು ಹೆತ್ತ ತಾಯಿಯನ್ನು
ಎಂದೆಂದು ಸ್ಮರಿಸಬೇಕು!!!

ಅಳುವ ಕಂದನ ಕೊರಳಿನ ಧ್ವನಿಯಲ್ಲಿ
ಮಧುರ ನುಡಿಯ ಸಿಂಚನದಲ್ಲಿ
ಜೋಗುಳ ಹಾಡಿದ
ತ್ಯಾಗ ಮೂರ್ತಿ “ಅಮ್ಮ”!!!

*******************************

ನಗು

Faceless woman with pill in teeth and nose piercing

ನಗುತಿರು ನೀನು
ನಗಿಸುತಿರುವೆ ನಾನು
ಆರೋಗ್ಯದ ಗುಟ್ಟು ನಗು
ಅಲಂಕಾರ ಎಷ್ಟಿದ್ದರೇನು
ನಗುತ ನಗಿಸುತ ಬಾಳೋಣ!!!

ಚೆಲುವೆಯ ಮುಗ್ದ ನಗುವಿಗೆ
ನಗಲು ಬೇಕಿಲ್ಲ ಕಾರಣ
ನಗು ತುಂಬಿರಲಿ ಹೂವಿನ ಸುಗಂಧದಂತೆ
ಅರಳಿದ ಗುಲಾಬಿ ಹೂವಿನಂತೆ
ನಗುವೇ ನಿಮ್ಮ ಮೊಗದ ಆಭರಣವಾಗಲಿ
ಸದಾ ನಗುವನ್ನು ಸ್ವಾಗತಿಸಲು
ಜಗವು ಕಾಯುತ್ತಿದೆ ನಿಮ್ಮ ಈ ನಗುವಿಗೆ

*********************************

14 thoughts on “ಹೊಸಬರ ಎರಡುಕವಿತೆಗಳು

  1. ಅರ್ಥಪೂರ್ಣ ಸಾಲುಗಳು. ಬಹಳ ಒಳ್ಳೆಯ ಆಲೋಚನೆಗಳು. ಬರೆಯುತ್ತಲೇ ಇರಿ.

Leave a Reply

Back To Top