ಅವ್ಯಕ್ತಳ ಅಂಗಳದಿಂದ

ಅವ್ಯಕ್ತ

ಅವ್ಯಕ್ತ ಅವರ ಹೊಸ ಅಂಕಣದ ಮೊದಲ ಕಂತು ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪ್ರಕಟವಾಗಲಿದ್ದು, ತದನಂತರ ಪ್ರತಿ ತಿಂಗಳ ಎರಡನೆ ಮತ್ತು ನಾಲ್ಕನೆ ಬುದವಾರ ಪ್ರಕಟವಾಗಲಿದೆ. ಈಅಂಕಣದ ವಿಶೇಷವೆಂದರೆಬರಹಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಸ್ವತ: ಮಕ್ಕಳೆ ರಚಿಸಲಿರುವುದು. ಈವಾರ ಅಂಕಣಗಾರರೇ ತಮ್ಮ ಆಶಯವನ್ನುತಮ್ಮ ಮುಂದೆ ತೆರೆದಿಡುತ್ತಿದ್ದಾರೆ

ಮಕ್ಕಳು ಮುಂದಿನ ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು
ಎಜುಕೇಶನ್ ಎಂಬುದನ್ನು, ಬರೀ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವರ‍್ಥ ಜೀವನ ನಡೆಸುವುದು…ಅಥವಾ

ಎಜುಕೇಶನ್ ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರ ನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತ್ಯಾದಿ.

ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೆ, ಎರಡನೆಯ ತರದವರು ಬೆರಳೆಣಿಕೆಯಷ್ಟು.

“ನಾವು ಕಲಿತ ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ…”
ಈ ನಿಟ್ಟಿನಲ್ಲಿ ನಾನು ಹಲವಾರು ವರ್ಷಗಳಿಂದ ನನ್ನ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದೇನೆ. ಮಕ್ಕಳ ಮನಸ್ಸನ್ನು ಅರಿತು, ಅವರ ತೊಂದರೆಗಳನ್ನು ಪರಿಶೀಲಿಸಿ, ಸರಿ-ತಪ್ಪುಗಳನ್ನು ಬದಿಗೊತ್ತಿ, ಅವರಿಗೆ ಅರಿವಾಗುವ ರೀತಿಯಲ್ಲಿ ತಿಳಿಹೇಳುವುದು, ನನ್ನ ಜೀವನದ ದಿನನಿತ್ಯದ ಒಂದು ಭಾಗ.
ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ…. ಎಂದಾದರೂ ಯಾರಾದರೂ ಈ ಅನುಭವಗಳನ್ನು ಬಳಸಿಕೊಂಡು, ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು…
ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿ “ಅವ್ಯಕ್ತಳ ಅಂಗಳದಿಂದ” ಎಂಬ ಹೆಸರಿನ ಅಂಕಣದ ಮೂಲಕ ಪ್ರಕಟಿಸುತ್ತಿದೆ ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.

ನಾವೆಲ್ಲರೂ ಒಟ್ಟಾಗಿ ಅದನ್ನು ಚಂದಗೊಳಿಸುವ… ಬೆಳೆಸುವ…

One thought on “ಅವ್ಯಕ್ತಳ ಅಂಗಳದಿಂದ

Leave a Reply

Back To Top