ಅನುಭವ
ನಂದ ಗೋಕುಲ
ಮಾಲಾ ಕಮಲಾಪುರ್
ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಯಾಗಿ ಕೆಲಸ ನಿರ್ವಹಿಸುವಾಗ ನಡೆದ ಘಟನೆ. ಒಂದು ದಿನಾ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗು ತರಗತಿಯಲ್ಲಿಯೇ ಮೊದಲು ಆಕಿಗೆ ಕಲಿಕೆಯಲ್ಲಿ ಆಸಕ್ತಿ. ಮನೆಯಲ್ಲಿ ತಾಯಿ ಸಹ ಕೂಲಿ ನಾಲಿಮಾಡಿ ಓದಿಸುತ್ತಿದ್ದಳು ತಂದೆಗೆ ಇದಾವ ಪರಿವೇ ಇಲ್ಲದೆ ಸದಾ ಕುಡಿದುಕೊಂಡು ಮನೆಗೆ ಬಂದು ಹೆಂಡತಿ ಮಗುವಿಗೆ ಹೊಡೆದು ಬಡೆದು ಮನೆ ಬಿಟ್ಟು ಹೋಗುವದು ಇದೆಲ್ಲದರ ನಡುವೆ ಮಗು ಗುಡಿಸಿಲಿನಲ್ಲಿ ಓದುವುದು ರಜೆಯದಿನ ಹೊಲದಲ್ಲಿ ತಾಯಿಗೆ ಸಹಾಯ ಮಾಡೋದು ಎಲ್ಲೋ ಹೋಗಿ ನೀರು ತರುವದು ಹೀಗೆ ಎಲ್ಲದರಲ್ಲೂ ತನ್ನದೇ ಛಾಪು ಮೂಡಿಸಿ ಸೈ ಅನಿಸಿಕೊಂಡ ಮಗು.
ದಿನಾಲೂ ಶಾಲೆಗೆ ಬರುವಾಗ ಕಣ್ಣು ಒರೆಸುತ್ತಾ ಓಡೋಡಿ ಪ್ರಾರ್ಥನೆ ಸಮಯಕ್ಕೆ ಬರುತ್ತಿದ್ದಳು. ಆದರೆ ಒಂದು ದಿನ ಮಾತ್ರ ಶಾಲೆಗೆ ಒಂದು ತಾಸು ತಡವಾಗಿ ಬಂದು ಹೊರಗಡೆಯೇ ಅಳುತ್ತ ನಿಂತಿದ್ದು ನೋಡಿ ನಾನು ಒಳಗೆ ಕರೆದೆ ಏನಾಯಿತು ಯಾಕೆ ಅಳುತ್ತಿರುವೆ ಬಾ ತರಗತಿ ಯೊಳ್ಗೆ ಅಂದೆ. ಅದಕ್ಕೆ ಆ ಮಗು ಹೆದರುತ್ತ ಗಾಬರಿಯಾಗಿ ಬಲಕೈಯನ್ನು ತನ್ನ ಡ್ರೆಸ್ನಲ್ಲಿ ಮುಚ್ಚಿಕೊಂಡು ಅಳುತ್ತ ನಾನು ಮನೆಗೆ ಹೋಗಿ ಬರುವೆ ಅಂದಳು. ಕೈನಡುಗತ್ತ ಬೆವರುತ್ತ ಹೇಳಿದಳು ಏನು ಇದೆ? ನಿನ್ನ ಕೈಯಲ್ಲಿ ಅಂದೆ. ಅದಕ ಆ ಮಗು ಸ್ಕರ್ಟ್ನಲ್ಲಿ ಮುಚ್ಚಿದ ಕೈ ತೆಗೆದು ಸರಾಯಿ ಬಾಟಲಿ ತೋರಿಸಿ ಇದು ನಮ್ಮ ಅಪ್ಪ ತೆಗೆದುಕೊಂಡು ಬರಲು ನಂಗೆ ಹೇಳಿದ. ನಾನು ತರೋಲ್ಲ ಅಂದರೆ ನಂಗೆ ಮೈಯಲ್ಲ ಬರೇ ಬೀಳುವಂತೆ ಹೊಡಿದಿರುವ ಅಂದಳು ಅದಕ್ಕೆ ನನಗೆ ಶಾಲೆಗೆ ಬರುವುದು ತಡ ವಾಯಿತು ಮೇಡಂ ಅಂದಾಗ ನನ್ನ ಕಣ್ಣಿಂದ ನೀರು ಜಾರಿತು. ಅಯ್ಯೋ ಎಂಥ ತಂದೆ ಮಗಳು ಅನ್ನುವದನ್ನು ಮರೆತು ತನ್ನ ಹುಚ್ಚು ವ್ಯಸನಕ್ಕೆ ಏನೆಲ್ಲಾ ಮಾಡುತ್ತಾರಲ್ಲ ಅನಿಸಿತು.
ಎಲ್ಲಿಯವರೆಗೆ ದುಶ್ಟಟದ ವ್ಯಸನಿಗಳು ಅದರಿಂದ ದೂರವಾಗುವುದಿಲ್ಲವೋ ಅಲ್ಲಿಯವರೆಗೂ ಇಂಥ ಹೆಣ್ಣು ಮಕ್ಕಳ ಗೋಳು ತಪ್ಪಿದ್ದಲ್ಲ. ಅದಕ್ಕೆ ಹೇಳೋದು ಮನೆಯಲ್ಲಿ ಸಂಸ್ಕಾರ ಕೊಡುವ ತಂದೆ ತಾಯಿ ಮೊದಲು ಸರಿ ಇರಬೇಕು ಆಗ ಮನೆಯ ಮಕ್ಕಳು ಅದನ್ನೇ ನೋಡಿ ಅನುಸರಿಸುವರು.
ಮನೆಯಲ್ಲಿ ಸುಂದರ ವಾತಾವರಣ ಇದ್ದರೆ ಅಲ್ಲಿ ಸುಖ ನೆಮ್ಮದಿ ಶಾಂತಿ ಕಾಣಲು ಸಾದ್ದ್ಯ ಮನೆ ನಂದ ಗೋಕುಲವಾದರೆ ಮಕ್ಕಳ ಭವಿಷ್ಯ ಅದೆಷ್ಟು ಚಂದ.
ಮನೆಯೊಂದು ನಂದ ಗೋಕುಲವಾದರೆ ಅಲ್ಲಿರುವ ಸುಂದರ ಮೊಗ್ಗುಗಳನೋಟ ಅದೆಷ್ಟು ಚಂದ. ಆ ಮೊಗ್ಗುಗಳಿಗೆ ಚಿವಟಿಹಾಕದೆ ಅರಳುತ್ತಿರುವ ಹೂವು ಆಗುವುದನ್ನು ನೋಡೋಣ ಆ ಹೂವು ಜ್ಞಾನ ವೆಂಬ ಪರಿಮಳ ಬೀರಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುವುದಲ್ಲವೇ..
*********************************