ವರ್ತಮಾನ

ಕವಿತೆ

ವರ್ತಮಾನ

A view of a seascape, Pacific ocean, waves and foams and splash in Malibu, California.  royalty free stock photo

ರೇಶ್ಮಾಗುಳೇದಗುಡ್ಡಾಕರ್

ಗಾಂಧಿಯೇ ಮೊದಲ ಕವಿತೆ

ಮನದ ಉದ್ವೇಗ ಕ್ಕೆ ಬೇಕು
ಒಲವು ,ಛಲವು
ಇವುಗಳ
ಸೆಳವಿಗೆ ಖುಷಿ ಇರುವದು
ಅಶ್ರುತರ್ಪಣ
ಧರೆಗುರುಳುವದು

ಯಾವ ಸಾಗರಕೂ ಹೊಲಿಕೆಯಾಗದ
ಬದುಕಿನ ಅಲೆಗಳ ಓಟ …..
ಮೆಲ್ಲನೆ ದಡಕ್ಕೆ ಮುತ್ತಿಡುವವು
ಕೆಲವೊಮ್ಮೆ ಕೊಚ್ವಿಕೊಂಡ್ಯೊಯುವವು
ದಡವನ್ನೇ ….

ಏನು ಆಟವಿದು ?
ಕಾಣದ ಕೈ ಸೂತ್ರವದು
ತಲ್ಲಣ ತಂಪಾಗಿ ,
ಸುಧೆ ವಿಷವಾಗಿ ಕೆರಳಿ
ಮುರಿದು ಬೀಳುವುದು
ಕನಸಿನ ಮನೆ

ವರವೊ,ಬರವೂ ತಿಳಿಯದ
ಕಾಲವಿದು
ಮತ್ತೆ ಸಿಲುಕುವದು
ಉದ್ವೇಗದ
ಚಕ್ರ ವೇಗ ಪಡೆದು ಓಡುವುದು
ಸ್ವಾರ್ಥ ಸೆಳವಿಗೆ ಸೆರೆಯಾಗಿ

ದಿನಗಳು ಉರುಳಿದಂತೆ
ಮಣ್ಣಲ್ಲಿ ಮಣ್ಣಾಗಿ
ನಿರ್ಮಿಸಿದ ಮೂಕ
ಅವಶೇಷಗಳು ಹುಡುಕುವವು
ಸ್ನೇಹ ,ಪ್ರೀತಿಗಾಗಿ ಹಂಬಲಿಸುತ

***************************************

Leave a Reply

Back To Top