ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ ಸಂಬಂಧಗಳ ಬಿಡುಗಡೆಗೆ ಪ್ರಾರ್ಥಿಸಿದ್ದು. ಈ ಸಂಜೆ, ಹೊರಗೆ ಮಳೆಯ ಸೂಚನೆಒಳಗೆ ತಡೆಯಲಾರದಷ್ಟು ವಿಪರೀತ ಸೆಖೆ.ಜೋರಾಗಿ ಬಾಗಿಲು ಬಡಿದ ಸದ್ದು.ತೆರೆದರೆ ಹೊರಗೆ, ಯಾರೂ ಗೊತ್ತಾಗದ ಗಾಳಿಯಲೆ ಚಿಲಕ ಅಲ್ಲಾಡುತ್ತಿದೆ, ಮೆಟ್ಟಿಲಿಳಿದ ಅಸ್ಪಷ್ಟ ಸದ್ದುನೀನು ಈವರೆಗೂ ನಡೆಸಿ ಕೊಡದ ಮಾತೇ ಬಂದುಮತ್ತೆ ಬಂದ ದಾರಿಯಲೇ ಮರಳಿರಬೇಕು,ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ. ಈ ಸರಿ ರಾತ್ರಿಯಲ್ಲಿ ಶುಭ್ರ ಆಕಾಶ ನೋಡುತ್ತತಾರಸಿಯಲ್ಲಿ ಅಂಗಾತ ಮಲಗಿ ನಕ್ಷತ್ರವೆಣಿಸುತ್ತಜೊತೆಗೇ ನಿನ್ನಲ್ಲೇ ಉಳಿದ ಮಾತ ನೆನೆಯುತ್ತಾಅವಕಾಶದಲ್ಲಿ ಎಷ್ಟೊಂದು ತಾರೆ ನೀಹಾರಿಕೆಗಳುಕ್ಷೀರ ಪಥದ ನಡುವೆ ಎಣಿಕೆಗೂ ಸಿಗದ ಲೋಕಗಳುಭ್ರಮೆ ವಿಭ್ರಮೆ ಸಂಕಟಗಳಿಗೆಲ್ಲ ಸಮಾಧಾನದ ಮಾತುಹೇಳುತ್ತಿವೆಯೇನೋ ಎಂಬಂತೆ ಸ್ಪೋಟಿಸುತ್ತಲೇಒಂದರ ಹಿಂದೊಂದು ಉರಿಯುತ್ತ ಬೀಳುತ್ತಲಿಹವು. ಈ ಎಲ್ಲ ಸಂಕೀರ್ಣ ಪ್ರತಿಮೆ ರೂಪಕಗಳ ನಡುವೆಬಿಟ್ಟೂ ಬಿಡದೆ ಕಾಡುತ್ತಿದೆ ನಿನ್ನ ಮಾತಿನ ನೆನಪುಧೋ ಎಂದು ಸುರಿಯದಿದ್ದರೂ ಹಿತ ಹನಿಯ ಸೇಕಒಡಲೊಳಗೇ ಉಳಿದು ಹೂತು ಹೋಗಬಾರದ ಮಾತುಮತ್ತೆ ಮತ್ತೆ ನಮ್ಮಿಬ್ಬರೊಳಗೇ ಗಿರಕಿ ಹೊಡೆಯುತ್ತಲೇಕಾಡುತ್ತಿದೆ ಅನವರತ ಸಂಭ್ರಮವ ಎಳೆದು ತಂದು.ಹೌದು, ಸಾವಿನ ನಂತರವಾದರೂ ಮತ್ತೆ ಕೂಡಬೇಕು! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಏಕೆ ಹೀಗೆ? ನೀ.ಶ್ರೀಶೈಲ ಹುಲ್ಲೂರು ಅಧರದಲಿರುವ ಲಾಲಿ ರಂಗುಪದರು ಪದರಾಗೆರಗುತಿಹುದುಮರುಗುತಿರುವ ಮನದ ಮತಿಯುಅತಿಯ ಮೀರಿ ಕೊರಗುತಿಹುದು ಕಣ್ಣಲಿಟ್ಟ ಒಲವ ಬಾಣಎದೆಯನಿರಿದು ನರಳುತಿಹುದುಕಳೆದಿರುವ ಕಾಲ ಸಾಲುಪದವ ಕಿತ್ತು ಕೊರಗುತಿಹುದು ಆಗಸದ ಸೊಗಸ ಮೋಡನಕ್ಕು ತಾನೆ ಅಳುತಲಿಹುದುಚಕ್ರವಾಕ ಹೆದೆಯ ಮೆಟ್ಟಿಮುದವನಪ್ಪಿ ನಗುತಲಿಹುದು ಇರುವ ಸುಖದ ಕೊರಳ ಮುರಿದುದು:ಖ ಕೇಕೆಗೈಯುತಿಹುದುದಾರಿ ನಡೆವ ಧೀರನೆದೆಗೆಒದ್ದು ಹಾಸಗೈಯುತಿಹುದು ಮನುಜರಾಳದೊಡಲ ಬಗೆದಕರುಳೆ ಸಿಳ್ಳೆಯೂದುತಿಹುದುಭವದಿ ತೇಲುತಿರುವ ಘಟದಉಸಿರ ಗುಳ್ಳೆಯೊಡೆಯುತಿಹುದು ಏಕೆ ಹೀಗೆ ದೇವ ಭಾವ ?ತನ್ನ ತಾನೆ ತುಳಿಯುತಿಹುದುನರರ ನಡುವೆ ನರಕ ತೂರಿಮರುಕವಿರದೆ ಅಳಿಯುತಿಹುದು *******

ಕಾವ್ಯಯಾನ Read Post »

ಕಾವ್ಯಯಾನ

ಆವಿಷ್ಕಾರ

ಆವಿಷ್ಕಾರ ಡಾ.ಅಜಿತ್ ಹರೀಶಿ ಗುಪ್ತಗಾಮಿನಿ ರಕುತಹೃದಯದೊಡಲಿಂದ ಚಿಮ್ಮುತಕೋಟಿ ಜೀವಕಣಗಳಿಗುಣಿಸುತಜೀವಿತವ ಪೊರೆಯುವುದುಎಷ್ಟು ಸಹಸ್ರಕಾಲದ ನಡೆಯುಹೀಗೆ ಅರಿವಾದಂತೆಹೊಸ ಕಾಯಕಲ್ಪ ಜೀವನಕ್ಕೆ…! ಪರಮಾಣುಗಳಲಿ ಅದುಮಿಟ್ಟಬಹಳ ಬಲವಾದ ಸ್ಫೋಟಅಣ್ವಸ್ತ್ರಗಳೊಳಗೆ ಬಿಗಿದಿಟ್ಟುಲಕ್ಷ ಜೀವಗಳ ಮರಣಪಟ್ಟಿರಣಕಹಳೆ ಊದುವ ಮೊದಲೇಯುದ್ಧ ನಡೆಸುವ ರಣನೀತಿಅಸ್ತ್ರಗಳು‌ ಅಣುವಾದಂತೆಬೃಹತ್ ದ್ವೇಷ ಜಗಕ್ಕೆ…! ಧರಣಿ ಹೂಡದ ಧರೆಯ ಮೇಲೆಹಸಿರುಟ್ಟು ನಿಂತ ಸಸ್ಯಶ್ಯಾಮಲೆಕಾಡು, ನಾಡಿಗೆ ಜೀವಂತ ದೇವರೇಇವು ಜೀವಿಸುತ್ತವೆ, ಎಂಬ ವಿಜ್ಞಾನಈ  ತಿಳಿವು ಬಂದಂತೆಮುನ್ನಡೆಯಾಯಿತು ವಿನಾಶಕ್ಕೆ..! **********

ಆವಿಷ್ಕಾರ Read Post »

ಕಾವ್ಯಯಾನ

ನಿರೀಕ್ಷೆ

ನಿರೀಕ್ಷೆ ಉಷಾ ಸಿ.ಎನ್ ಅಂದು ಭಾನುವಾರ ಕನ್ನಡಿಯ ಮುಂದೆ ನಿಂದು ನೀ ಮೆಚ್ಚುವ ಬಣ್ಣವ ಧರಿಸಿದ್ದೆ ಅದಕೊಪ್ಪುವ ಬಿಂದಿ ಬಳೆಗಳ ತೊಟ್ಟು ನೀಳ ಕೇಶವ ಹೆಣೆದು ಮಲ್ಲಿಗೆಯ ಮುಡಿದಿದ್ದೆ ನಗೆ ಚೆಲ್ಲುವ ತುಟಿಗಳಿಗೆ ಕೆಂಪು ಬಣ್ಣ ಲೇಪಿಸಿ ನಿನ್ನ ಕಣ್ಣುಗಳ ನೆನೆದು ನನ್ನ ಕಣ್ಣಿಗೆ ಕಾಡಿಗೆ ಬಳಿದಿದ್ದೆ ಅನುಗಾಲ  ನಿನ್ನತ್ತ ಬರಲು ತವಕಿಸುವ ಕಾಲುಗಳಿಗೆ  ಗೆಜ್ಜೆ ತೊಟ್ಟಿದ್ದೆ ಕಂಗಳಲಿ ಮಿಂಚಿಟ್ಟು, ತುಟಿಗಳಲಿ ನಗೆಯಿಟ್ಟು ನಿನ್ನ ದಾರಿಯ ಕಾದಿದ್ದೆ. ನೀ ಬಾರದೆ  ನಿರೀಕ್ಷೆಗಳು  ನೀರ ಮೇಲಣ ಗುಳ್ಳೆಗಳಾದವು ಕನಸುಗಳು ಕನಸುಗಳಾಗಿಯೆ ಉಳಿದವು. *********

ನಿರೀಕ್ಷೆ Read Post »

ಕಾವ್ಯಯಾನ

ಚೆಲ್ಲಿ ಹೋಯಿತು ಉಸಿರು

ಚೆಲ್ಲಿ ಹೋಯಿತು ಉಸಿರು ( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ವಿಜಯಶ್ರೀ ಹಾಲಾಡಿ ಚೆಲ್ಲಿಹೋಯಿತು ಉಸಿರು…( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ಗಾಳಿಗೆ ಗಂಧ ತುಂಬುತ್ತಿದ್ದಬಾಗಾಳು ಮರವನ್ನುಈ ಬೆಳಗು ಕಡಿಯಲಾಗಿದೆಮರದ ಮಾಂಸ ರಕ್ತ ಚರ್ಮಚೆಲ್ಲಾಡಿದ ಬೀದಿಯೊಳಗೆಇದೀಗ ತಾನೇ ನಡೆದುಬಂದೆನೆಲದಲ್ಲಿ ಜಜ್ಜಿಹೋದ ಹೂಮೊಗ್ಗು ಎಲೆಗಳ ಕಂಬನಿಕುಡಿಯುತ್ತಾ… ಹಕ್ಕಿ ಕೊರಳಿಗೆ ಕಷಾಯಕುಡಿಸಿದ ಸಂಗಾತಿ ಮರಮಣ್ಣಿನಾಳದ ಕಸುವುಗಳನಕ್ಷತ್ರಗಳಿಗೆ ಅಂಟಿಸಿದಅವಧೂತ ಮರಜೀವಜಂತುಗಳಿಗೆ ಜೀವಜಲಮೊಗೆದ ತಾಯಿಮರಬದುಕಿತ್ತು ಇಲ್ಲೇ ಕಣ್ಣೆದುರಲ್ಲೇಮಾತು ಮೀರಿದಬುದ್ಧಕಾರುಣ್ಯದಂತೆಮಮತೆ ತೋಳುಗಳಂತೆ… ಚೆಲ್ಲಿಹೋಯಿತು ಉಸಿರುಸಾವು ಹೆಪ್ಪುಗಟ್ಟಿದಂತೆ!****** ಬಾಗಾಳು ಮರ– ಬಕುಲದ ಮರ. ಪಶ್ಚಿಮಘಟ್ಟದ ಸಸ್ಯ. ನವಿರು ಪರಿಮಳದ ಹೂಗಳನ್ನು ಬಿಡುತ್ತದೆ. ಕಾಡಿನ ನಾಶದಿಂದಾಗಿ ಈ ಮರದ ಸಂಖ್ಯೆ ಕ್ಷೀಣಿಸಿದೆ.ಸು.ರಂ.ಎಕ್ಕುಂಡಿಯವರ ಒಂದು ಕವನಸಂಕಲನದ ಹೆಸರು: ಬಕುಲದ ಹೂಗಳು.**ವಿಜಯಶ್ರೀ ಹಾಲಾಡಿ *

ಚೆಲ್ಲಿ ಹೋಯಿತು ಉಸಿರು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ ಎಲ್ಲಿ ಹೋದೆ|| ಸಗಣಿ ಬಳೆದ ಅಂಗೈಗೆ ಮದರಂಗಿ ಬಣ್ಣದ ಕಾಂತಿ|ಬೆವರ ಗಂಧ ತುಂಬಿದ ಉಡಿಯನು ಗಾಯಗೊಳಿಸಿ ಎಲ್ಲಿ ಹೋದೆ|| ಜತಿಗೆ ಸುಡುವ ಬಿಸಿಲಲಿ ಸಾಚಿ ಮೈ ಸುಟ್ಟು ಮಾಯವಾದೆ|ಕಾಳಿನ ಕೊರಳಿಗೆ ನುಶಿಗಳ ಮಾಲೆ ಪೋಣಿಸಿ ಎಲ್ಲಿ ಹೋದೆ|| *******

ಗಝಲ್ Read Post »

ಕಾವ್ಯಯಾನ

ಗರಿ ಹುಟ್ಟುವ ಗಳಿಗೆ

ಗರಿ ಹುಟ್ಟುವ ಗಳಿಗೆ ಫಾಲ್ಗುಣ ಗೌಡ ಅಚವೆ ರಾತ್ರಿಯಿಡೀ ಹೊಯ್ದ ಮಳೆಗೆಹದಗೊಂಡ ಹರೆಯದ ಬೆದೆಗೆಮುದನೀಡಿದ ನರಳುವಿಕೆಯಲ್ಲಿಇನ್ನೂ ಎದ್ದಿಲ್ಲ ಇಳೆ ಬೇಸಿಗೆಗೆ ಧಿಕ್ಕಾರ ಕೂಗಿದಮರಜಿರಲೆಗಳ ಅನಿರ್ದಿಷ್ಟಾವಧಿಯನಿರಸನ ಅಂತ್ಯವಾಗಿದೆಹಣ್ಣಿನರಸ ನೀಡಲು ಮೋಡಗಳುಧರೆಗಿಳಿದಿವೆ. ಮತ್ತೆ ಮತ್ತೆ ಬೀಳುವ ಮಳೆಅವಳ ನೆನಪುಗಳ ಚಿಗುರಿಸಿಬದುಕುವ ಆಸೆ ಮೂಡಿಸಿದೆಹುಲ್ಲು ಕಡ್ಡಿಗೆ ಜೀವ ಬಂದಂತೆ! ಹೊಯ್ಯುವ ಜುಮುರು ಮಳೆಗೆಅದುರುವ ಮರದ ಎಲೆಗಳುಮೋಡಗಳಿಗೆ ಸಂತಸದ ಸಂದೇಶರವಾನಿಸಿವೆ. ಧರೆಗಿಳಿದ ಮಳೆಗೆ ಬೆರಗಾದ ಕಪ್ಪೆಗಳುಕೂಗಿ ಕೂಗಿ ಕೂಗಿಖುಷಿಗೊಂಡು ಬೆದೆಗೊಂಡಿವೆ. ಹೊಳೆ ಹಳ್ಳಗಳಲ್ಲಿಯ ಮರಿಗಪ್ಪೆಗಳುಬಾಲ ಕಳಚಿ ಮೂಡಿ ಬಂದರೆಕ್ಕೆಗಳ ಕಂಡುಛಂಗನೆ ಕುಣಿದು ಕುಪ್ಪಳಿಸಿವೆ. ಭೂರಮೆಯ ಉಬ್ಬು ತಗ್ಗಿನ ಮೇಲೆಹೊದೆದ ಮಂಜು ಮುಸುಕನು ಸರಿಸಿತುಂಟ ಮೋಡ ಪುಳಕಗೊಂಡಿದ್ದಾನೆ ಮುಸುಕಿ.ಹದ ಹಸಿರ ಮೈಯಿಂದಹೊರಟ ಗಾಳಿ ಗಂಧನಿನ್ನ ಮೈಯಗಂಧ ನೆನಪಿಸಿತು. ಹೊಸ ಹರೆಯದ ಇಳೆಗೆಈಗ ಗರಿ ಹುಟ್ಟುವ ಗಳಿಗೆ!! ********

ಗರಿ ಹುಟ್ಟುವ ಗಳಿಗೆ Read Post »

ಕಾವ್ಯಯಾನ

ಸ್ವಾರ್ಥಿಯಾಗುತಿದ್ದೇನೆ.

ಸ್ವಾರ್ಥಿಯಾಗುತಿದ್ದೇನೆ. ಜ್ಯೋತಿ ಡಿ.ಬೊಮ್ಮಾ ಆಗ ಬದುಕುತಿದ್ದೆ ಜೀವದುಂಬಿ ,ನಟಿಸುತ್ತಿರಲಿಲ್ಲಈಗಲೂ ಬದುಕುತಿದ್ದೆನೆ , ನಟಿಸುತ್ತ ಆಗ ಮಾತಾಡುತಿದ್ದೆ ಮನಸ್ಸು ಬಿಚ್ಚಿನಿರ್ಗಳವಾಗಿಈಗಲೂ ಮಾತಾಡುತ್ತೆನೆ ಅಳೆದು ತೂಗಿಒಂದೊಂದೆ ಆಗ ಪ್ರೀತಿಸುತಿದ್ದೆ ಎಲ್ಲರನ್ನೂ ನಿಸ್ವಾರ್ಥದಿಂದಈಗಲೂ ಪ್ರೀತಿಸುತ್ತೆನೆ ಅಥವಾ ಪ್ರೀತಿಸುವಂತೆನಾಟಕವಾಡುತ್ತೆನೆ ಆಗ ಸ್ಪಂದಿಸುತಿದ್ದೆ ಥಟ್ಟನೆ ,ಯಾವಪ್ರತಿಫಲಾಪೇಕ್ಷೆ ಇಲ್ಲದೆ..ಈಗ ಅವರಿಂದಾಗುವ ಲಾಭ ನಷ್ಟ ಗಳುಅವಲಂಬಿಸಿರುತ್ತದೆ ನನ್ನ ಸಹಾಯಹಸ್ತ ಆಗ ನಗುತಿದ್ದೆ ನಿಷ್ಕಲ್ಮಷವಾಗಿ ಮನದುಂಬಿಈಗಲೂ ನಗುತ್ತೆನೆ ಹಿಂದೆಮುಂದೆ ಕೊಂಚ ತುಟಿಯರಳಿಸಿ ಆಗ ಹಾತೊರೆಯುತಿತ್ತು ಮನಸ್ಸುಎಲ್ಲರೊಳಗೊಂದಾಗಿ ಬೆರೆಯಲು ನಲಿಯಲುಈಗ ಹುದುಗುತ್ತೆನೆ ಒಂಟಿತನದ ಚಿಪ್ಪಿನಲ್ಲಿನನ್ನನ್ನು ನಾನು ನಿರ್ಬಂಧಿಸಿಕೊಂಡು ಈಗ ಅವರು ಇವರು ಎಲ್ಲರೂ ಮುಖವಾಡಗಳೆತಮಗರಿವಿಲ್ಲದೆ ದಿನವೂ ನಟಿಸುವ ಪಾತ್ರಧಾರಿಗಳು ಈಗೀಗ ಸ್ವಾರ್ಥಿಯಾಗುತ್ತಿರುವೆ ನನಗರಿವಿಲ್ಲದೆಇಲ್ಲ ಇಲ್ಲ ..ಸ್ವಾರ್ಥಿಯಾಗುವಂತೆ ಪ್ರೇರೇಪಿಸುವಸಮಾಜದಲ್ಲಿ ನಾನಿದ್ದೆನೆ. *********

ಸ್ವಾರ್ಥಿಯಾಗುತಿದ್ದೇನೆ. Read Post »

ಕಾವ್ಯಯಾನ, ಟಂಕಾ

ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು ಮೂಲ ರಚನೆ – ವೈದೇಹಿ ಗಣೇಶ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ವೃತ್ತಿ -ಪ್ರವೃತ್ತಿಜೀವನದ ಬಂಡಿಗೆಚಕ್ರಗಳಂತೆವೃತ್ತಿಗೊ ನಿವೃತ್ತತೆಪ್ರವೃತ್ತಿ ಸಾರ್ಥಕತೆ Profession – dispositionTwo wheels of chariotCalled the lifeRetirement ceases oneAccomplishment graces the other. ಬೇವು ಬಾಗಿತುಸಂಪಿಗೆಯಾಸರೆಗೆ,ಪ್ರಕೃತಿ ಸಾರಿಹೇಳಿತು, ಒಲವಿಗೆಗುಣ ಗಣತಿ ಬೇಕೇ? Bitter neem lentRecourse to fragrant magnoliaThe nature proclaimsFor the endearmentNot to census the virtues ಕರ್ಮದ ಆಟಕಾಲ ಕಲಿಸೋ ಪಾಠಸುಕರ್ಮಗಳಅರಿತು ನಡೆದರೆಗೆದ್ದೆ ಜೀವನದಾಟ Game of deeds areLessons taught by time;If persue the pathWith noble deedsVictory of life is there ಗಾಢದ ಮೌನನಿರಂತರ ಭಾವನಅಲೆ ಚಾಲನಸುಧೆಗಾಗಿ ಮಂಥನಇದೇ ಅನಂತ ಧ್ಯಾನ Intense silence,Incessant emotionsAdvances as waves ;Churn for gist sets ;That ‘s endless rumination ಹೆಪ್ಪು ಗಟ್ಟಿದತುಮುಲ ಗಳೆಲ್ಲವುನೋವ ಬೇಗೆಗೆಹನಿ ಹನಿ ಸುತ್ತಿವೆಕಣ್ಣೀರಧಾರೆಯಾಗಿ Deep frozen,Turmoils of the beingSpout tears;Drop by drop ,For the sultry agony **********

ಅನುವಾದಿತ ಟಂಕಾಗಳು Read Post »

You cannot copy content of this page