ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಡಾ.ಗೋವಿಂದ ಹೆಗಡೆ ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ. ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ ಕಾವ್ಯ ಇದೆ’ ಅನಿಸುವಂತೆ ಮಾಡಿದ್ದು ನೆನಪಿದೆ. ಅದಾಗಿ ೩-೪ ತಿಂಗಳಲ್ಲಿ ಧನ್ನೂರ ಜೆ ಡಿ ಯವರು ಆರಂಭಿಸಿದ ‘ಕವಿಬಳಗ’ದಲ್ಲಿ ಕಾವ್ಯದ ಚಟುವಟಿಕೆಗಳು ಎಡೆಬಿಡದೇ ನಡೆದವು.ಆ ಮೂಲಕ ಪರಿಚಿತರಾದ ರೇಖಾ ಆಗೀಗ ವೈಯಕ್ತಿಕವಾಗಿಯೂ ಸಂಪರ್ಕಿಸುತ್ತ , ತಮ್ಮ ಕೋಮಲ ಕವಿತೆಗಳಿಂದ, ಸೌಜನ್ಯಯುತ ಮಾತು- ನಡೆಯಿಂದ ಆತ್ಮೀಯರೇ ಆದರು.ಈ ಗುಂಪಿನಲ್ಲಿ ಪ್ರತಿವಾರ ಗಜಲ್ ಬರೆಯುವ ಸ್ಪರ್ಧೆಯನ್ನು ನಾನು ೭-೮ ತಿಂಗಳ ಕಾಲ ನಿರ್ವಹಿಸಿದಾಗ ಪ್ರತಿ ಸಲವೂ ಬರೆಯುತ್ತ ಬಂದ ರೇಖಾ ಆ ಕುರಿತು ಸಲಹೆ ಸೂಚನೆ ಕೇಳುತ್ತ , ತಿದ್ದುತ್ತ …ವೃತ್ತಿಯಿಂದ ಶಿಕ್ಷಕಿಯಾದರೂ ಇಲ್ಲಿ ‘ವಿದ್ಯಾರ್ಥಿನಿ’ಯೇ ಆದರು! ನಮ್ಮ ಈ ಗಜಲ್ ಉಪಕ್ರಮದ ಮೊದಲೂ ಆಮೇಲೂ ರೇಖಾ ಕವಿತೆ, ಭಾವಗೀತೆಗಳನ್ನು ಬರೆದಿದ್ದಿದೆ. ಆದರೆ ಗಜಲ್ ಬರಹ ಅವರ ಕೃಷಿಗೆ ಒಂದು ನಿಖರತೆಯನ್ನೂ ಸಂಗ್ರಹವಾಗಿ ಸಮುಚಿತ ಪದಗಳಲ್ಲಿ ಹೇಳುವ ಶಕ್ತಿಯನ್ನೂ ತಂದಿತೆಂದು ನನ್ನ ಅನಿಸಿಕೆ. ಅವರ ಕಾವ್ಯ ತೊರೆ ಆಳ ಅಗಲಗಳನ್ನು ಪಡೆದು ಗಜಲ್ ನದಿಯಾಗಿ ಹರಿದ ಫಲ ಈ ಸಂಕಲನ. ಇನ್ನು ಗಜಲ್‌ಗಳತ್ತ ಹೊರಳಿದರೆ- ಗಜಲ್ ತನ್ನದೇ ಆದ ಚೌಕಟ್ಟುಳ್ಳ, ಆ ಕಾರಣಕ್ಕಾಗೇ ವಿಶಿಷ್ಟವೆನಿಸುವ ಕಾವ್ಯಪ್ರಕಾರ. ಪಾರ್ಸಿಯಲ್ಲಿ ಹುಟ್ಟಿ ನಮ್ಮ ದೇಶದಲ್ಲಿ ಉರ್ದುವಿನಲ್ಲಿ ಬೆಳೆದ ಗಜಲ್‌ಗೆ ೭-೮ ಶತಮಾನಗಳ ಇತಿಹಾಸವಿದೆ.ಆದರೆ ಕನ್ನಡ ಗಜಲ್ ಮೊಳೆದಿದ್ದು ಇತ್ತೀಚೆಗೇ. ಗಜಲ್ ದ್ವಿಪದಿಗಳಲ್ಲಿ ಮಂಡಿತವಾಗುವ ಕಾವ್ಯ ಪ್ರಕಾರ.ಈ ದ್ವಿಪದಿಗಳಿಗೆ ‘ಷೇರ್/ಬೈತ್ ‘ಎಂದು ಹೆಸರು.ಪ್ರತಿ ಸಾಲು ‘ಮಿಸ್ರ’.ಮೊದಲ ‘ಷೇರ್’ ಮತ್ಲಾ. ಕೊನೆಯದು ಮಕ್ತಾ. ಗಜಲ್‌ಗಳಲ್ಲಿ ಐದರಿಂದ ಇಪ್ಪತ್ತೈದು ಷೇರ್‌ಗಳಿರುವುದುಂಟು. ಸಾಮಾನ್ಯವಾಗಿ ೭ ಬರೆಯುವ ರೂಢಿ. ಇನ್ನು ಗಜಲ್‌ನ ಮುಖ್ಯ ಅಂಗಗಳಾದ ‘ರದೀಫ್’ ಮತ್ತು ‘ಕಾಪಿಯಾ’ಗಳ ಬಗ್ಗೆ ತಿಳಿಯೋಣ. ಷೇರ್‌ನ ಕೊನೆಯಲ್ಲಿ ಪುನರಾವರ್ತನೆಯಾಗುವ ಪದ ಅಥವಾ ಪದಗುಚ್ಛ ಇದ್ದರೆ ಅದು ‘ರದೀಫ್’.ಈ ರದೀಫ್‌ನ ಹಿಂದಿನ ಪದ ಅಂತ್ಯಪ್ರಾಸವುಳ್ಳ ಪದ ‘ಕಾಪಿಯಾ’. ರದೀಫ್ ಇಲ್ಲದ ಗಜಲ್‌ಗಳಿವೆ. ಆಗ ಕಾಪಿಯಾವೇ ಸಾಲಿನ ಕೊನೆಯ ಪದ. ರದೀಫ್ ಇದ್ದಾಗ ಅದು, ಕಾಪಿಯಾದೊಡನೆ ಇಲ್ಲವೇ ಕಾಪಿಯಾ ಮಾತ್ರ ಮೊದಲ ಷೇರ್‌ನ ( ಮತ್ಲಾದ) ಎರಡೂ ಸಾಲುಗಳಲ್ಲಿ, ಅನಂತರದ ಷೇರ್‌ಗಳ ಎರಡನೇ ಸಾಲಿನಲ್ಲಿ ಬರಬೇಕು.ಇದು ನಿಯಮ. ಇದರಿಂದ ಗಜಲ್‌ನ ಚೆಲುವು ಹೆಚ್ಚುತ್ತದೆ. ಕೇಳುವಾಗ ಒಂದು ರಮಣೀಯತೆ ತಾನಾಗಿ ಒದಗುತ್ತದೆ.ಗಜಲ್ ಮುಷಾಯಿರಾ‌ಗಳಲ್ಲಿ ಹಾಡಲ್ಪಡುವ ಕೇಳುಗಬ್ಬವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಮುಖ್ಯವಾದ ಅಂಶವೆಂದರೆ ರದೀಫ್ ಇಲ್ಲದೇ ಗಜಲ್ ಇರಬಹುದು. ಆದರೆ ಕಾಪಿಯಾ ಇಲ್ಲದೇ ಗಜಲ್ ಇಲ್ಲ . ಬಹೆರ್ ( ವೃತ್ತ / ಛಂದಸ್ಸು)ಗಜಲ್‌ನ ಬಹು ಮುಖ್ಯ ಅಂಗವೇ ಆದರೂ ಕನ್ನಡ ಗಜಲ್ ಆ ಬಗ್ಗೆ ಬಹಳ ಲಕ್ಷ್ಯ ವಹಿಸಿದಂತಿಲ್ಲ. ಯಾವುದೇ ಗಜಲ್‌ನಲ್ಲಿ ಅದರ ಸಾಲುಗಳ ಉದ್ದ ಸುಮಾರಾಗಿ ಸಮಾನವಿದ್ದರೆ ಸಾಕು ಎಂಬಲ್ಲಿಗೇ ನಾವು ತೃಪ್ತರಾದಂತಿದೆ. ಹೀಗೆ ಗಜಲ್ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರೂ ಸಾಕಷ್ಟು ವೈವಿಧ್ಯಕ್ಕೂ ಇಲ್ಲಿ ಅವಕಾಶವಿದೆ.ಎಲ್ಲ ಷೇರ್‌ಗಳನ್ನೂ ಮತ್ಲಾ ಆಗಿಸುವ , ಮೊದಲ ಎರಡು ಷೇರ್‌ಗಳನ್ನು ಮತ್ಲಾ ಆಗಿಸುವ, ರದೀಫ್‌ನಲ್ಲಿ ವೈವಿಧ್ಯ ತರುವ, ರದೀಫ್ ಇಲ್ಲದೆಯೂ ಬರೆಯುವ…ವಿವಿಧ ಸಾಧ್ಯತೆಗಳಿವೆ. ಇವಿಷ್ಟು ಗಜಲ್‌ನ ಹೊರ ಆವರಣದ ಮಾತಾಯಿತು.ಇನ್ನು ಅದರ ವಸ್ತು- ವಿಷಯಗಳಿಗೆ ಬಂದರೆ, ಆರಂಭದಲ್ಲಿ ಗಜಲ್ ಹೆಣ್ಣಿನ ಕುರಿತಾದ, ಅನುರಾಗ, ವಿರಹಗಳ ಕುರಿತಿನ ಕಾವ್ಯವೇ ಆಗಿತ್ತು, ನಿಜ.ಆದರೆ ಈಗ ಅದರ ವ್ಯಾಪ್ತಿ ಹಿಗ್ಗಿದ್ದು ವೈವಿಧ್ಯಮಯ ವಸ್ತು, ಆಶಯಗಳ ಗಜಲ್‌ಗಳು ನಮ್ಮೆದುರಿಗಿವೆ. ನಾನು ಇಲ್ಲಿ ತುಂಬ ಮೇಲು ಮೇಲಿನ ವಿವರಗಳನ್ನು ಮಾತ್ರ ನೀಡಿದ್ದು ಹೆಚ್ಚಿನ ಮಾಹಿತಿಗೆ ಶಾಂತರಸರ ‘ ಗಜಲ್ ಮತ್ತು ಬಿಡಿ ದ್ವಿಪದಿ’ , ಚಿದಾನಂದ ಸಾಲಿಯವರು ಸಂಪಾದಿಸಿದ ‘ಕನ್ನಡ ಗಜಲ್’, ಬಸವಪ್ರಭು ಮತ್ತು ಇತರರು ಸಂಕಲಿಸಿದ ‘ಬಿಸಿಲ ಹೂ’ ಈ ಗ್ರಂಥಗಳನ್ನು ಪರಾಮರ್ಶಿಸಬಹುದು. ಈ ಪ್ರಾಥಮಿಕ ಮಾಹಿತಿಗಳಿಂದ ರೇಖಾರ ಗಜಲ್‌ಗಳತ್ತ ತಿರುಗಿದರೆ – ಈ ಸಂಕಲನದಲ್ಲಿ ೬೨ ಗಜಲ್‌ಗಳಿದ್ದು ರದೀಫ್‌ಸಹಿತ ಮತ್ತು ರದೀಫ್‌ರಹಿತ ಎರಡೂ ವರ್ಗಕ್ಕೆ ಸೇರಿವೆ. ಈ ಗಜಲ್‌ಗಳನ್ನು ಓದಿದಾಗ ಕೋಮಲವಾದ, ಅಪ್ಪಟ ಹೆಣ್ಣು ಅಂತಃಕರಣವೊಂದು ಒಳ- ಹೊರಗುಗಳನ್ನು ನೋಡುತ್ತ,ನೋಡಿಕೊಳ್ಳುತ್ತ ಆಡುವ ಮೆಲುಮಾತುಗಳ ಜೊತೆ ನಮ್ಮ ಪಯಣ ನಡೆದಂತೆ ಅನಿಸುತ್ತದೆ.ಏರುದನಿಯ ಚೀರುದನಿಯ ಸಂತೆಮಾತುಗಳಿಗೇ ನಾವು ಒಗ್ಗಿ ಹೋಗಿದ್ದರೆ ಈ ಸಾಲುಗಳು ಫಕ್ಕನೇ ತಮ್ಮನ್ನು ಬಿಟ್ಟುಕೊಡದೇ ಹೋಗಬಹುದು.ಬದಲಿಗೆ ಇವುಗಳ ಪಿಸುದನಿಗೆ ನೀವು ಎದೆ ತೆರೆದರೆ ಅಲ್ಲಿನ ಪುಟ್ಟ ಪುಟ್ಟ ಖುಷಿಗಳ, ನಗು-ಅಳು-ತಲ್ಲಣಗಳ ಆಪ್ತಲೋಕ ನಿಮ್ಮನ್ನು ಬರಮಾಡಿಕೊಂಡೀತು. ‘ ನಿನ್ನ ಮಾತುಗಳು ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದುಕೊಂಡೆ ……… ನಿನ್ನ ದಾಟಬಾರದೆಂದು ನನ್ನ ಚಲನೆಗಳಿಗೆ ಗಡಿ ಹಾಕಿಕೊಂಡೆ ‘ ( ಗಜಲ್-೩೭) ಈ ಮಾತುಗಳು ಕಟ್ಟಿಕೊಡುವ ಚಿತ್ರವನ್ನು ಗಮನಿಸಿ.ಹೆಣ್ಣಿನ ‘ಸ್ಥಿತಿ’ಯನ್ನು ಉದ್ವೇಗವಿಲ್ಲದೆ ಆದರೆ ದಿಟ್ಟದನಿಯಲ್ಲಿ , ದಟ್ಟ ವಿಷಾದದಲ್ಲಿ ಕಟ್ಟಿಕೊಡುತ್ತವೆ ಈ ಸಾಲುಗಳು. ‘ ಬಿತ್ತಿದ ಪ್ರೇಮಬೀಜಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿವೆ ಹಸಿರೊಡಲ ಬಾಚಿ ನುಂಗುವ ಬೆಂಕಿಮಳೆಗೆ ಕೊನೆಯಿಲ್ಲ’ (ಗಜಲ್-೩೮) ‘ ನಾಟಕವಾಡಲು ತರಬೇತಿ ಬೇಡ,ಇಲ್ಲ ರಂಗಮಂಟಪದ ಹಂಗು ಜಗದ ಜಗಲಿಯಲಿ ನಿತ್ಯ ಸುಳ್ಳಿನಾಟಗಳು, ಮೊದಲು ಹೀಗಿರಲಿಲ್ಲ’ (ಗಜಲ್-೧೧) ಎಂದು ವಿಷಾದದಲ್ಲೇ ಗಮನಿಸುವ ರೇಖಾ ಇವುಗಳ ನಡುವೆಯೇ ಎದೆದೀಪ ಹಚ್ಚಿ ಕುಡಿಯೊಡೆವ ನಗುವಿಗೆ ಕಾಯುವ, ಇಂಬಾಗುವ ಹಂಬಲಕ್ಕೆ ದನಿಯಾಗಿದ್ದಾರೆ. ‘ ನಸುಕಲಿ ಸಹನೆಯಿಂದ ಮುತ್ತುಕಟ್ಟಿದ ಇಬ್ಬನಿ ಸಾಲು ಕುಡಿಯೊಡೆದ ಚಿಗುರೆಲೆ ಬಾಳಲಿ ಐಸಿರಿಯ ತಂತು’ (ಗಜಲ್-೨೫) ‘ ಆಯುಧಗಳಿಗಿಂತ ರೋಗಗ್ರಸ್ತ ಮನಕೆ ಔಷಧಿ ಬೇಕೀಗ ರಕ್ಕಸ ಬೆರಳುಗಳಲಿ ಹೂವರಳಿದ ಬಗೆಯೊಂದ ಹೇಳು ಬಾ’ (ಗಜಲ್-೪೮) ಕತ್ತು ಹಿಸುಕಲು ಬರುವ ನೂರೆಂಟು ಘಾತುಕ ಶಕ್ತಿಗಳ ಎದುರು ಬದುಕನ್ನು ಪೊರೆಯುವ, ಜೀವಕಾರುಣ್ಯವನ್ನು ಎತ್ತಿಹಿಡಿಯುವ ಅಚಲ ಶ್ರದ್ಧೆ ರೇಖಾರ ಗಜಲ್‌ಗಳ ಉದ್ದಕ್ಕೂ ಕಾಣುತ್ತದೆ. ‘ ಕುಸಿಯಬೇಡ ಬದಲಾಗಿ ಹಾರಿಬಿಡು ಎತ್ತರವು ದಕ್ಕೀತು’ಎಂಬ ನಿರೀಕ್ಷೆ, ಆಶಯ ಅವರ ಗಜಲ್‌ಗಳ ಮೂಲಮಂತ್ರವಾಗಿದೆ. ಸಂಗೀತವನ್ನೂ ಕಲಿತಿರುವ, ಸೊಗಸಾಗಿ ಹಾಡುವ ರೇಖಾ ಸಾಕಷ್ಟು ಲಲಿತವಾದ ಗಜಲ್‌ಗಳನ್ನು ರಚಿಸಿದ್ದಾರೆ.ಮುಖ್ಯವಾದ ಮಾತೆಂದರೆ ಗಜಲ್‌ನ ಮೂಲ ನಿಯಮಗಳನ್ನು ಅನುಸರಿಸಿದ, ಸ್ಥೂಲವಾಗಿ ಬಹೆರ್‌ಯುಕ್ತವಾದ ಬರಹ ಇದು.ಗಜಲ್‌ನ ನಿಯಮಗಳನ್ನು ಮುರಿದು ಮನಸೋ ಇಚ್ಛೆ ಬರೆಯುವ ‘ಪ್ರತಿಭಾ ಸಂಪನ್ನ’ರಿಗೆ, ‘ನನ್ನದೊಂದು ರೀತಿಯ ಸ್ವಚ್ಛಂದ ಗಜಲ್‌ಗಳು’ ಎನ್ನುವವರಿಗೆ ನಿಯಮಗಳ ಒಳಗೇ ರಚಿತವಾದ ಈ ಗಜಲ್‍ಗಳು ತಣ್ಣಗಿನ ಉತ್ತರವಾಗಿವೆ. ಗಜಲ್‌ಬರಹದಲ್ಲಿ ರೇಖಾರ ಹೆಜ್ಜೆಗುರುತುಗಳನ್ನು ಗಮನಿಸುತ್ತ ಬಂದ ನನಗೆ ಅವರ ಈ ಪ್ರಗತಿ ಸಂತಸ ತಂದಿದೆ.ಈ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರವೂ ಲಭಿಸಿರುವುದು ಖುಷಿಯನ್ನು ಇಮ್ಮಡಿಸಿದೆ. ರೇಖಾರ ಕಾವ್ಯಪಯಣಕ್ಕೆ ಇನ್ನಷ್ಟು ವಿಸ್ತಾರ, ತಿರುವಿನ ವೈವಿಧ್ಯ, ಚೆಲುವುಗಳು ಒದಗಿ ಬರಲಿ. ‘ ಬದುಕು ಕಟ್ಟುವ ಕಲೆಯ ಕನಸುಗಳಿಗೆ ಕಲಿಸಬೇಕು ಕತ್ತಲೆಯ ಅಟ್ಟುವ ಕಲೆಯ ಮನಸುಗಳಿಗೆ ಕಲಿಸಬೇಕು’ ಎಂಬ ಅವರ ಹಂಬಲ,ಬೆಳಕಿನತ್ತಣ ಪಯಣ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, ಬಡವರ ಹೊಟ್ಟೆಯ ಸಂಕಟದುರಿಯ ಪಂಜು ಅಬ್ಬಾ! ಕವಿಯ ಕಲ್ಪನೆಗೆ ಕವಿ ಕಲ್ಪನೆಯೇ ಸಾಟಿ . ಒಂದೊಂದು ವಿವರವೂ ಓದುಗನಲ್ಲಿ ಸುಪ್ತವಾಗಿರುವ ಯಾವುದೋ ಒಂದು ಭಾವನೆಯನ್ನು ಕೆಣಕುತ್ತದೆ ಅವನನ್ನೇ ಕಾವ್ಯದ ಅಂಗವನ್ನಾಗಿ ಮಾಡುತ್ತದೆ .ಪದ್ಯ ವಿಡೀ ಕುರುಡು ಕಾಂಚಾಣದ ಗೆಜ್ಜೆಯ ಕುಣಿತದ ಸದ್ದು ಓದುಗನ ಕಿವಿಗಳಲ್ಲಿ ಅನುರಣಿಸುತ್ತಿರುತ್ತದೆ ಮತ್ತು ಪದ್ಯ ಗೆಲ್ಲುವುದು ಅಲ್ಲೇ .ಹಣದ ಝಣಝಣ ಮನೆಗಳ ಮಹಡಿಗಳಲ್ಲಿ ನಾಟ್ಯ ವಾಡುತ್ತದೆ ಗುಡಿಗಳಲ್ಲಿ ಗಣಗಣಿಸುತ್ತದೆ ಮತ್ತುಅಂಗಡಿಗಳಲ್ಲಿಯೂ ಅದರದೇ ಕಾರುಬಾರು ಎಂದು ವರ್ಣಿಸುತ್ತಾ ಕವಿ ಕಟ್ಟಕಡೆಯಲ್ಲಿ ಎಂದು ಹಣ ಗೆಲ್ಲಲಾಗುವುದಿಲ್ಲ ಎಷ್ಟು ದಿನ ಕುಣಿದೀತು? ಒಂದಲ್ಲ ಒಂದು ದಿನ ಅಂಗಾತವಾಗಿ ಬೀಳಲೇಬೇಕು. ಆಗ ಅದನ್ನು ಮೇಲೆತ್ತಲು ಮಾನವೀಯತೆಯೇ ಬರಬೇಕು ಎಂದು ಸೂಚ್ಯವಾಗಿ ತಿಳಿಸುತ್ತಾರೆ . ಇಷ್ಟು ದಿನಗಳಾದರೂ ಈ ಕವನದ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದು ಕುರುಡು ಕಾಂಚಾಣಕ್ಕೂ ಕವಿ ಭಾವಕ್ಕೂ ಇರುವ ಸಂಬಂಧದ ದ್ಯೋತಕವೇ? ಕುರುಡು ಕಾಂಚಾಣಾ ಕುಣಿಯುತಲಿತ್ತು | ಕಾಲಿಗೆ ಬಿದ್ದವರ ತುಳಿಯುತಲಿತ್ತೋ || ಕುರುಡು ಕಾಂಚಾಣಾ || ಬಾಣಂತಿಯೆಲುಬ ಸಾ- ಬಾಣದ ಬಿಳುಪಿನಾ ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ; ಸಣ್ಣ ಕಂದಮ್ಮಗಳ ಕಣ್ಣೀನ ಕವಡಿಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ; ಬಡವರ ಒಡಲಿನ ಬಡಬಾsನಲದಲ್ಲಿ ಸುಡು ಸುಡು ಪಂಜು ಕೈಯೊಳಗಿತ್ತೋ; ಕಂಬನಿ ಕುಡಿಯುವ ಹುಂಬ ಬಾಯಿಲೆ ಮೈ- ದುಂಬಿದಂತುಧೋ ಉಧೋ ಎನ್ನುತಲಿತ್ತೋ; ಕೂಲಿ ಕುಂಬಳಿಯವರ ಪಾಲಿನ ಮೈದೊಗಲ ಧೂಳಿಯ ಭಂಡಾರ ಹಣೆಯೊಳಗಿತ್ತೋ; ಗುಡಿಯೊಳಗೆ ಗಣಣ, ಮಾ ಹಡಿಯೊಳಗೆ ತನನ, ಅಂ- ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ; ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ, ಹೆಗಲಲಿ ಎತ್ತೋ. ಅಂಬಿಕಾತನಯದತ್ತ… *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪತ್ನಿಯ ದುಗುಡ ಮಾಲತಿ ಹೆಗಡೆ ಕತ್ತು ಚಾಚಿಕಣ್ಣು ಹಾಯುವವರೆಗೂ ನೋಡಿದರೂ ನೀ ಬರಲಿಲ್ಲ ಹೊರೆಗೆಲಸಗಳು ಮುಗಿದು ಕತ್ತಲಾವರಿಸಿದರೂ ನೀ ಬರಲಿಲ್ಲ ಸಂಜೆಗೊಂದಿಷ್ಟು ದೂರದ ಸಮುದ್ರತೀರದಲಿ ವಿಹರಿಸಬೇಕಿತ್ತು ಆಟ ಪಾಟಗಳೆಲ್ಲ ಮುಗಿಸಿ ಮಕ್ಕಳು ಮಲಗಿದರೂ ನೀ ಬರಲಿಲ್ಲ ಕಂಬನಿದುಂಬಿ ನಾಳೆಯಡುಗೆಗೆ ಖಾಲಿ ಡಬ್ಬಿಗಳ ತಡಕಾಡುತ್ತಿರುವೆ ಅಳಿದುಳಿದಿದ್ದರಲ್ಲೇ ಮಾಡಿದ ಅಡುಗೆ ಆರಿದರೂ ನೀ ಬರಲಿಲ್ಲ ಸಾಲ ಕೊಟ್ಟವರಿಗೆ ಅವಮಾನ ನುಂಗುತ್ತ ತಾರಮ್ಮಯ್ಯ ಆಡಿಸಿದೆ ನೀಲ ನಭದಿ ಚಂದಿರ ನನ್ನನ್ನು ಅಣಕಿಸಿದರೂ ನೀ ಬರಲಿಲ್ಲ ಮದಿರೆಗೆ ಮರುಳಾದವನಿಗೆ ಮಡದಿಯ ನೆನಪು ಕಿಸೆ ಬರಿದಾದಾಗ ಮೈಮುದುಡಿ, ಕಣ್ಣಿಂಗಿ, ಮನಸು ನುಗ್ಗಾದರೂ ನೀ ಬರಲಿಲ್ಲ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರಳು ಬಿಗಿದ ಪ್ರೀತಿ ತುಳಸಿ ಭಟ್ (ಸಿಂಧು ಭಾರ್ಗವ್ ಬೆಂಗಳೂರು) ಮರಳ ಮೇಲೆ ಗೆರೆಯ ಗೀಚಿ ನಿನ್ನ ಹೆಸರ ಬರೆದೆನು ಬಳಿಗೆ ಬಂದು ಏನು ಎಂದು ನೋಡಬಾರದೇ? ಪ್ರೀತಿಯೀಗ ಮೊಳಕೆಯೊಡೆದು ರಕುತದಲ್ಲಿ ಬೆರೆತಿದೆ ಸನಿಹ ನಿಂತು ಮೊಗವ ನೋಡಿ ಕೇಳಬಾರದೇ? ಎತ್ತ ಹೋದೆ ಬರುವೆ ಎಂದು ಮತ್ತೆ ಕಾಣದೂರಿಗೆ ಸಂಜೆ ಸೂರ್ಯ ಅಳುತ ಕರಗಿ ಕಡಲ ಸೇರಿದೆ ಅಲೆಗಲೆಲ್ಲ ಕೆಂಪುಗಟ್ಟಿ ನೊಂದು ಮೂಕವಾಗಿವೆ ಬಂಡೆ ಮೇಲೆ ಬಡಿದು ಬಡಿದು ಹಿಂದೆ ತಿರುಗಿವೆ ನಿನ್ನ ನೆರಳ ಹೋಲುವಂತ ಪಿಂಡ ರೂಪುಗೊಂಡಿದೆ ಹೆಸರು ಇಡಲು ನೀನು ಇಂದು ಬರಲೆ ಬೇಕಿದೆ ಕಾದು ಕುಳಿತೆ ತಿಳಿಗಾಳಿಯೊಂದು ಸುರುಳಿ ಸುತ್ತಿಕೊಂಡಿತು ಕೊರಳು ಬಿಗಿದು ಪ್ರೀತಿ ಹೆಸರ ಉಸಿರು ಕಟ್ಟಿಸಿತು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಹುರುಪೇ ಇಲ್ಲದೆ ಬಣ್ಣಗಳ ಬಳಿದೇನು ಲಾಭ ಎದೆಯೇ ಇಲ್ಲದ ಹಾಡುಗಳ ಬರೆದೇನು ಲಾಭ ಹೊತ್ತಿದರೆ ಹೊತ್ತು ಬೆಳಗು ಮಿಂಚಂತೆ ಸಿಡಿಲಂತೆ ಬರೀ ಹೊಟ್ಟಿನ ಹೊಗೆಯಾದರೆ ಆಗಿದ್ದೇನು ಲಾಭ ವಿರೋಧಿಗಳ ಎದುರಿಸು ವಾದ, ಕರ್ಮಭೂಮಿಕೆಯಲ್ಲಿ ಅಣಕು ಬೊಂಬೆಗಳ ಸುಡುತ್ತ ಬಂತೇನು ಲಾಭ ಕುಡಿದರೆ ಕುಡಿಯಬೇಕು ಇಡೀ ಮಧು ಶಾಲೆಯನ್ನು ಸೆರೆಮುಕ್ಕ ಸೆರೆಯ ತುಟಿಗೆರೆದೇನು ಲಾಭ ಹೊತ್ತು ಹೊತ್ತಿಸು ಉರಿ ಬೆಳಗಿಸು ಹೋರು ಎಣ್ಣೆ ಬತ್ತಿ ಹಣತೆಯ ದೂರಿದರೇನು ಲಾಭ ಆಳಕ್ಕಿಳಿ ಬಗೆ ಬರೆ ಹಾಡು ಎದೆಯಲುಗುವಂತೆ ಬರೀ ನೀರ್ಗುಳ್ಳೆ ಊದುತ್ತ ಸವೆದೇನು ಲಾಭ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಎಲ್ಲ ಜಂಜಡಗಳ ಮರೆಸುವ ಮಾಯೆಯಿದೆ ನಿನ್ನ ನಗುವಿನಲ್ಲಿ ಎಲ್ಲ ಒತ್ತಡಗಳ ಶೂನ್ಯವಾಗಿಸುವ ಕಲೆಯಿದೆ ನಿನ್ನ ನಗುವಿನಲ್ಲಿ ನನಗೆಂದೇ ದೈವ ಬುವಿಗೆ ಕಳಿಸಿದ ಕೊಡುಗೆ ನೀನು ಮಗುವೇ… ಎಲ್ಲ ಚಿಂತೆಗಳ ಇಲ್ಲವಾಗಿಸುವ ಮೋಡಿಯಿದೆ ನಿನ್ನ ನಗುವಿನಲ್ಲಿ ಕಾಲದ ಪರಿವೆಯಿಲ್ಲದೇ ಕಾದೆ ಬರಿದಾದ ಮಡಿಲು ತುಂಬಲೆಂದು ಎಲ್ಲೆಡೆಯೂ ಮುದ ಹರಡುವ ಮುಗ್ಧತೆಯಿದೆ ನಿನ್ನ ನಗುವಿನಲ್ಲಿ ಹೆಣ್ತನಕೆ ಹಿರಿಮೆ ತಂದ ತಾಯ್ತನದ ಭಾಗ್ಯ ನನ್ನದಾಗಿದೆ ಇಂದು ಅಶಾಂತಿಯ ತೊಡೆವ ಶಾಂತಿಯ ನೆಲೆಯಿದೆ ನಿನ್ನ ನಗುವಿನಲ್ಲಿ ಕಿವಿಗಳ ತಣಿಸುತಿವೆ ನಿನ್ನ ಮೃದು ಮಧುರ ತೊದಲು ನುಡಿಗಳು ಬಳಲಿದ ಜೀವಕೆ ಬಲ ನೀಡುವ ಚೈತನ್ಯವಿದೆ ನಿನ್ನ ನಗುವಿನಲ್ಲಿ ಇನ್ನೆಂದೂ ನಾ ಏಕಾಂಗಿಯಲ್ಲ ನಿನ್ನೊಡನಾಟ ನಲಿವು ತಂದಿರಲು ಸಂಕಷ್ಟಗಳ ಇರುಳು ಕಳೆದು ಬೆಳಕು ಮೂಡಿದೆ ನಿನ್ನ ನಗುವಿನಲ್ಲಿ ಸಿರಿಸಂಪತ್ತೆಲ್ಲವೂ ಗೌಣವಾಗಿದೆ ಅಮೂಲ್ಯ ನಿಧಿಯೇ ನೀನಾಗಿರೆ ಆ ಸ್ವರ್ಗವನೇ ಧರೆಗಿಳಿಸಿದ ಚಮತ್ಕಾರವಿದೆ ನಿನ್ನ ನಗುವಿನಲ್ಲಿ *************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೇ ರಾಮ್ ಡಿ.ಎಸ್.ರಾಮಸ್ವಾಮಿ ಅವತ್ತು ಆ ದುರುಳನ ಗುಂಡಿಗೆಹೇ ರಾಂ ಎನ್ನುತ್ತಲೇ ಗುಂಡಿಗೆಯಿತ್ತವನನ್ನೂಅನುಮಾನಿಸಿ ಅವಮಾನಿಸಿದವರುಮತ್ತೀಗ ವಿಝೃಂಭಣೆಯ ತುರೀಯದಲ್ಲಿಗತದ ನೋವುಗಳನ್ನರಿಯದೇ ಬರಿದೇಸ್ವಚ್ಛತೆಯ ಮಾತ ಭಜನೆ ಮಾಡುತ್ತಿದ್ದಾರೆ, ಪೊರಕೆ ಹಿಡಿದಂತೆ ಆ ಅವರ ಭಂಗಿಕುಡಿಸಿ ಅಮಲೇರಿಸುವ ಮಾತುನಾಳೆಗಿರಲಿ ಇವತ್ತಿಗೇ ನಕಲಿ ಸಾಬೀತಾಗಿನಿಜಕ್ಕೂ ಕೊಳೆ ತೆಗೆಯ ಹೊರಟವರೆಲ್ಲರಿಗೂಆಘಾತ, ಸಂವಿಧಾನದ ವಿಧಿಗೂ ವಿಧ ವಿಧದಮರು ಜೋಡಣೆಯ ವ್ಯಾಖ್ಯಾನ ಗಾಂಧಿ ಎಂದರೆ ಅವನೊಬ್ಬನೇ ತಾತಈ ದೇಶಕ್ಕಷ್ಟೇ ಅಲ್ಲ, ಅವನು ವಿಶ್ವ ವಿಖ್ಯಾತ.ಬೋಂಗು ಬಿಡುವವರಿಗೆ ಸತ್ಯ ಬೇಕಿರುವುದಿಲ್ಲಅವರದೇನಿದ್ದರೂ ಮನ ರಂಜನೆಯದೇ ಗುರಿಚಪ್ಪಾಳೆಗೆ ಖುಷಿಪಡುವವರಿಗೆ ಬೌದ್ಧಿಕತೆಯಅಗತ್ಯಕ್ಕಿಂತಲೂ ದಿರಿಸಿನದೇ ಸದಾ ಧ್ಯಾನ ತುಂಡುಡುಗೆಯ ಈ ಬಾಪು ಗರೀಬನೇನಲ್ಲಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚಪದವಿಗೆಂದು ವಿದೇಶಕ್ಕೆ ಹಾರಿದ್ದರೂ ಅವನಗಮನವಿದ್ದದ್ದೇ ಅಸಮಾನತೆಯ ಹದ್ದಿನ ಮೇಲೆರಗಿ ಸಾಧಿಸಿದ ವಿಜಯಕ್ಕೆ ಹರತಾಳ ಬಂಡವಾಳಸತ್ಯಕ್ಕೆ ಆಗ್ರಹಿಸುವುದಷ್ಟೇ ನಿಯತ ಕಾಯಕ ಹುತಾತ್ಮನಾಗುವನು ಈ ದೇಶದ ಸಿಪಾಯಿಪರದೇಶಕ್ಕವನು ಯಾವತ್ತಿಗೂ ಬದ್ಧ ವೈರಿಈ ಇಂಥ ಗಾಂಧಿಗೇ ಶತೃವೆನ್ನುವವನುಪರದೇಶಿಯಲ್ಲದೇ ದೇಶೀಯ ಹೇಗಾದಾನುಅಂದರೆ ಮತ್ತೆ ಬಿಚ್ಚುತ್ತಾರೆ ಅಂತೆ ಕಂತೆಯ ಕತೆಯಲ್ಲಷ್ಟೇ ಶ್ರೀ ರಾಮನದೂ ಕಲ್ಪನೆಯ ರಾಜ್ಯ!! ***********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ ಆತಂಕದಿ ತಲ್ಲಣಿಸುತಿರೆ ಎದೆಗೆದೆಯ ಬೆಸೆದು ತುಟಿಗೆ ತುಟಿ ಜಡಿದು ನನ್ನನ್ನೇ ಲೂಟಿ ಮಾಡಲು ಬೇಗ ಬಾ ಇರುಳ ದಾರಿಯಲಿ ಸುರಿದೊಲವ ಬೆಳಕ ತೊರೆದು ಹೋಗದಿರು ಕಡುವಿರಹ ಸುಡುತಲಿರೆ ‘ರುಕ್ಮಿಣಿ’ಯ ಒಂಟಿಹೆಜ್ಜೆಗೂ ನಿತ್ರಾಣ ಹೆಗಲಿಗ್ಹೆಗಲ ಜೋಡಿಸಿ ಕಾಲ ಸರಿಸಲು ಬೇಗ ಬಾ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ ನೆನಪಮಡುವಲಿ ಮಿಂದಂತೆ ಅದೊಂದು ಹಾಡು ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’ ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು ************

ಕಾವ್ಯಯಾನ Read Post »

You cannot copy content of this page

Scroll to Top