ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು ತಿಳಿಯದೆ.. ಹೋಗಲಿ ಬಿಡಿ ಮುಟ್ಟಬೇಡವೆಂದಮೇಲೆ ಮುಟ್ಟುವ ಹಠವೇಕೋ ಮುಟ್ಟಿದ ತಕ್ಷಣ ಸಮತೆ ಕನಸು ನನಸಾಗುವದೇ..! ಮುಟ್ಟಿನ ಮಡುವಿನಲ್ಲಿ ಈಜಾಡಿ ಧರೆಗೆ ಬಿದ್ದ ಕ್ಷಣದಿಂದಲೆ ಶ್ರೇಷ್ಠರೆನಿಸಿಕೊಂಡ ಅವರೇ ತುಂಬಿರಲಿ ದೇವಸ್ಥಾನದೋಳಗೆ. ಆ ಗುಡಿಗಳಲ್ಲಿ ಅರ್ಚಕರ ಆಟದ ಬೋಂಬೆಯಾದ ಶಿಲೆಗಳು ಸನ್ನೆ ಮಾಡುತಿವೆ ನಮಗೆ.. ಹೋಗು ಬರದಿದ್ದರೆ ನಷ್ಟವೇನಿಲ್ಲ.. ನಿನ್ನ ದೇಹವೇ ದೇಗುಲವಾಗಿಸಿಕೋ.. ನನ್ನನ್ನು ಅಲ್ಲೆ ಪ್ರತಿಸ್ಟಾಪಿಸು..ಎಂದು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರೂ ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು.. ********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಕಾವ್ಯಯಾನ Read Post »

ಕಾವ್ಯಯಾನ

ಚಲಿಸುವ ಮುಳ್ಳು

ಚಲಿಸುವ ಮುಳ್ಳು ಚಂದ್ರಪ್ರಭ ಬಿ. ಚಲಿಸುವ ಮುಳ್ಳು ಆಗಲೇ ನಿನಗೆ ಐವತ್ತಾತs ! ಅವ ತಮಾಷೆಗಿಳಿದ.. ಹ್ಞೂಂ.. ನಿನಗ ಅರವತ್ತಾಗುವಾಗ ನನಗಿನ್ನೆಷ್ಟಾಗಬೇಕು? ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು ‘ಹೆರಳಿಗೆ ಹೂ ಮುಡದರೆ ನೀ ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ.. ಒಗ್ಗರಣೆ ಹೊತ್ತಕೊಂಡೀತೆಂದು ಉರಿ ಸಣ್ಣ ಮಾಡುತ್ತ ಹೇಳಿದೆ ‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ.. ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’ ಮುತುವರ್ಜಿಯಿಂದ ಅವ ಕೇಳಿದ ‘ಇಲ್ಲ ನಾಡಿದ್ದು ಭೇಟಿಯಾಗಿ ವಿಚಾರಿಸುವೆ ನಾಳೆ ದೀಪು ಶಾಲೇಲಿ ಪಾಲಕರ ಸಭೆಗೆ ಹೋಗಲಿಕ್ಕುಂಟು’ ‘ಇಳಿ ಸಂಜೆ ಪೇಟೆಗೆ ಹೋಗಿ ಇದನ್ನೆಲ್ಲ ತರಲಿಕ್ಕಿದೆ ಮನೇಲಿರಿ.. ಬೈಕ್ ಮೇಲೆ ತಾಸಿನಲ್ಲಿ ಹೋಗಿ ಬಂದೇವು’ ನನ್ನ ಮಾತು.. ‘ಹಾಗೇ ಐಸ್ ಕ್ರೀಂ ಪಾರ್ಲರ್ ಗೆ ಹೋಗೋಣ ಆ ಹಸಿರು ಸೀರೇಲಿ ನೀ ಚಂದ ಕಾಣುವಿ ಅದನ್ನೇ ಉಟ್ಟುಕೊ…’ ನಾನಾಗಲೇ ಬೂದು ಬಣ್ಣದ ಚೂಡೀದಾರ ಎತ್ತಿಟ್ಟಿದ್ದೆ! ದಿನಸಿ ಅಂಗಡಿಯಲ್ಲಿ ಸಾಮಾನಿನ ಲಿಸ್ಟ್ ಕೊಟ್ಟು ಪಾರ್ಲರಿಗೆ ಹೋಗಿ ಕುಳಿತೆವು ಹುಡುಗ ಒಂದೇ ಉಸಿರಲ್ಲಿ ಐಸ್ ಕ್ರೀಂ ಲಿಸ್ಟ್ ಒಪ್ಪಿಸಿದ ಆತನ ಮುಗ್ಧತೆ ಕಂಡು ಗಲಗಲನೆ ನಕ್ಕು ಬಿಟ್ಟೆ ‘ಹೀಂಗ ನಕ್ಕರ ನೀ ಚಂದ ಕಾಣಸ್ತೀ ನೋಡು’ ಅವ ಅಕ್ಕರೆಯಿಂದ ನುಡಿದ.. ‘ಈ ಸ್ಟ್ರಾಬೆರಿ.. ಕುಲ್ಫೀ ಐಸ್ ಕ್ರೀಂ ಶಶಿದು ಫೇವರಿಟ್ ಕಡೀ ಪೇಪರ ನಾಳೆ ಮುಗೀತದಲ್ಲ.. ನಾಡದು ಬರಬಹುದು ಊರಿಗೆ..’ ನಾ ಹೇಳಿದೆ.. ಫೋನಿನ ಮೇಲೆ ಫೋನು ಬರುತ್ತಲೇ ಇತ್ತು ಅವಗೆ ‘ಯಾರು ಒಂದೇ ಸಮ ಮಾಡ್ತಿರೂದು.. ಏನಂತ?’ ‘ಏನಿಲ್ಲ, ಕಲಾಭವನದಾಗ ಸಂಗೀತ ಸಂಜೆ ಐತಲ್ಲ ಲಗೂ ಬಾ ಅಂದ ಸೋಮು’ ಸಾಮಾನು ಸಮೇತ ನನ್ನ ಮನೆ ತಲುಪಿಸಿ ಅವ ಮತ್ತೊಂದು ರೌಂಡ್ ಹೊರ ಹೊರಟ ‘ ಅವ್ವ ಈ ಲೆಕ್ಕ ನನಗ ತಿಳೀವಲ್ತು ಸ್ವಲ್ಪ ಬಾ ಇಲ್ಲೆ’ ದೀಪು ದನಿ… ‘ಬಂದೆ ಇರು ಮಗಾ.. ಅಜ್ಜಿಗೆ ಮಾತ್ರೆ ಕೊಡೂದಷ್ಟ ಬಾಕಿ’ ಮಗೂ ಲೆಕ್ಕ ಕೇಳಿದ ತಕ್ಷಣ ನೆನಪಾಯ್ತು ನಾಳಿನ ವರ್ಕಶಾಪ್ ಗೆ ನನಗೆ ಪಿಪಿಟಿ ತಯಾರಿ ಮಾಡಲಿಕ್ಕಿತ್ತು! ಜೊತೆಗೆ ಪ್ರಾತ್ಯಕ್ಷಿಕೆ ಮಾದರಿ.. ‘ಆಫೀಸಿಗೆ ಹೋಗ್ತ ಅಪ್ಪನಿಗೆ ನಿನ್ನ ಬಿಟ್ಟ ಹೋಗಾಕ ಹೇಳವ್ವಾ.. ಇವೆಲ್ಲಾ ಹೊತಕೊಂಡ ಯಾವಾಗ ಹೋಗ್ತಿ ನೀ’ ದೀಪು ಮಾತು ತನ್ನನ್ನು ಮೀರಿಸಿ ನಾ ಓಡುತ್ತಿರುವೆನೆಂದು ಮುನಿಸಿಕೊಂಡಿದೆಯೊ ಎಂಬಂತೆ ನಿಂತು ಬಿಟ್ಟಿದ್ದ ಗಡಿಯಾರಕ್ಕೆ ಸೆಲ್ಲು ಬದಲಾಯಿಸಿದೆ ಮುಳ್ಳು ಚಲಿಸತೊಡಗಿತು… ***********

ಚಲಿಸುವ ಮುಳ್ಳು Read Post »

ಕಾವ್ಯಯಾನ

ಕಣ್ಣ ಕನ್ನಡಿ

ಕಣ್ಣ ಕನ್ನಡಿ ಶಾಂತಾ ಜೆ ಅಳದಂಗಡಿ ಕಣ್ಣಕನ್ನಡಿ ಹಸಿರ ಉಸಿರು ಅದುಮಿ ಹಿಡಿದು ತಂಪು ತಂಗಾಳಿ ಏಕಿಲ್ಲ ವೆಂದರೆ ಏನಹೇಳಲಿ ಉತ್ತರ? ಗೈದತಪ್ಪಿಗೆ ಬದುಕಾಗಿದೆ ತತ್ತರ ಕೊಳಕ ಕೊಳಗವ ಚೆಲ್ಲಬಿಟ್ಟು ಶುದ್ಧಪರಿಮಳ ಇಲ್ಲವೆಂದರೆ ಯಾರು ಕೊಡುವರು ಉತ್ತರ? ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ ಬದಿಗೆಕರೆದು ಕಳ್ಳತನದಲಿ ಲಂಚನೀಡಿ ಕೆಲಸ ಮಾಡಿಸಿ ದುಡ್ಡಿನಾಸೆಯ ತೋರಿ ಕೆಡಿಸಿ ರಾಜಕಾರ್ಯವ ನಿಂದಿಸಿದರೆ ಯಾರು ಕೊಡುವರು ಉತ್ತರ ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ ಮಾನ್ಯ ನೆಂಬ ಪದವಿ ಸಿಗುವುದೆ? ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ ಕಹಿಯನೀಡಿ ಸಿಹಿಯ ಬಯಸಲು ಸಿಗದು ಎಂದಿಗು ಮಧುರತೆ ಪರರ ಹಿತವನು ಬಯಸೆ ಮನದಲಿ ಖುಶಿಯು ದೊರೆವುದು ಬಾಳಲಿ ಕಣ್ಣಕನ್ನಡಿ ಸಟೆಯನಾಡದು ದಯೆಯ ದರ್ಪಣ ಒಡೆಯಬಾರದು ಒಗ್ಗಟ್ಟಿನಬಲ ಕುಸಿಯಬಾರದು. *********

ಕಣ್ಣ ಕನ್ನಡಿ Read Post »

ಕಾವ್ಯಯಾನ

ಕಾವ್ಯಯಾನ

ತಾಮ್ರದ ಕೊಡ ಸಂಜಯ ಮಹಾಜನ ತಾಮ್ರದ ಕೊಡ ಭಾರವಾದವೋ ತಾಮ್ರದ ಕೊಡ ತಲೆಯ ಮೇಲೆ ಭಾರದಾದವೋ ತಾಮ್ರದಕೊಡ ಕಾಣದಾದವೋ ನುರು ವರುಷ ಹೊಳಪು ತಾಳಿತಾದರೂ ತಲೆಯಮೇಲೆ ಹೊತ್ತು ಭಾರ ತಾಳದಾದವೋ ತಾಮ್ರದಕೊಡ ಕಾಣದಾದವೋ ಆರೋಗ್ಯ ವೃದ್ಧಿಸಿದರೂ ತಾಂಮ್ರದ ಕೊಡ ವೃದ್ಧಿಯಾಗಲಾರವೋ ತಾಮ್ರದಕೊಡ ಕಾಣದಾದವೋ ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ ಕೊಡದ ತಳಕೆ ಬಿದ್ದ ತೂತು ತುಂಬದಾದವೋ ತಾಮ್ರದಕೊಡ ಕಾಣದಾದವೋ ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ ತಾಮ್ರದಕೊಡ ಕಾಣದಾದವೋ ತವರಿನಿಂದ ಉಡುಗೊರೆಯಾಗಿ ಬಂದಿತಾದರೂ ತವರ ಸಿರಿಯ ನೆನಪು ಮಾಸದಾದವೋ ತಾಮ್ರದಕೊಡ ಕಾಣದಾದವೋ ಶುಭ ಸಮಾರಂಭದಲ್ಲಿ ಅಲ್ಪ ಬಳಕೆಯಾರೂ ಶುಭಾರಂಭಗಳಲ್ಲಿ ಮೊದಲಾದವೋ ತಾಮ್ರದಕೊಡ ಕಾಣದಾದವೋ ವರುಷಗಳ ಹಿಂದೆ ಮೌಲ್ಯ ಕಡಿಮೆಯಾಗಿದ್ದರೂ ವರುಷ ವರುಷ ಉರುಳಿದರೂ ಮೌಲ್ಯ ಕಳೆದುಕೋಳ್ಳದಾದವೋ ತಾಮ್ರದಕೊಡ ಕಾಣದಾದವೋ ***********

ಕಾವ್ಯಯಾನ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಗಝಲ್ ಎ.ಹೇಮಗಂಗಾ ಪ್ರೇಮಿಗಳ ದಿನವೇಕೆ ? ನಾವಿಬ್ಬರೂ ಪ್ರೇಮಿಸದ ದಿನವೇ ಇಲ್ಲ ಪ್ರೀತಿಯ ಅಭಿವ್ಯಕ್ತಿಯೇಕೆ ? ಉತ್ಕಟವಾಗಿ ಪ್ರೀತಿಸದ ದಿನವೇ ಇಲ್ಲ ಸಪ್ತಪದಿಯಲಿ ಒಂದಾದ ನಮಗೆ ಬಾಳು ದೈವ ನೀಡಿದ ಕೊಡುಗೆ ಬೇರೆ ಉಡುಗೊರೆಯೇಕೆ? ಮುತ್ತಿನ ವಿನಿಮಯವಿರದ ದಿನವೇ ಇಲ್ಲ ನಿನ್ನೊಲವ ಸಾಗರದಿ ಎಲ್ಲ ಮರೆತು ಮುಳುಗಿಹೋಗಿರುವೆ ಹೊನ್ನಿನ ತೋಳಬಂದಿಯೇಕೆ? ತೋಳ್ಸೆರೆಯಿರದ ದಿನವೇ ಇಲ್ಲ ಮಧುಶಾಲೆಯ ಬಾಗಿಲು ಕರೆದರೂ ನೀನತ್ತ ಇನ್ನು ಸುಳಿಯಲಾರೆ ಮಧುಪಾನದ ಅಮಲೇಕೆ? ಪ್ರೀತಿ ನಶೆಯಿರದ ದಿನವೇ ಇಲ್ಲ ಪವಿತ್ರ ಬಂಧನದಿ ಬೆಸೆದುಹೋಗಿರೆ ಅಂತರವೆಲ್ಲಿ ನಮ್ಮ ನಡುವೆ? ಕಾಣದ ಸಗ್ಗದ ಮಾತೇಕೆ? ಮಿಲನ ಸುಖವಿರದ ದಿನವೇ ಇಲ್ಲ *****************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಅಧರಂ-ಮಧುರಂ ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು! (ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. ) ರಾಮಸ್ವಾಮಿ ಡಿ.ಎಸ್. ತುಟಿ ಜೇನು ಮೊಗ ಜೇನುಕಣ್ಣ ನೋಟವೆ ಜೇನು, ನಗೆ ಜೇನುಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನುನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಕೊಳಲುಲಿಯಲಿ ಜೇನು, ಪಾದಧೂಳಿಯಲಿ ಜೇನುಕೈ ಕಾಲುಗಳಲ್ಲೆಲ್ಲ ಎನಿತು ಸಿಹಿಯುನಾಟ್ಯದಲಿ ಸಿಹಿ ನೀನು, ನಿನ್ನ ಸಖ್ಯವೇ ಸಿಹಿ ಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಹಾಡಲ್ಲಿ ಮಾಧುರ್ಯ, ಕುಡಿವಲ್ಲಿ ಚಾತುರ್ಯಉಣುವುದು ರಸಗವಳ, ಮಲಗಿದರೆ ತಿಳಿನಿದ್ರೆಕಾಯಕ್ಕೆ ತಕ್ಕ ಪರಿವೇಷ ನಿನ್ನೊಲವುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕಾರ್ಯಗಳೇಸು, ನಿನ್ನ ಭಾದ್ಯತೆಗಳೇಸುಕಾಯ್ದು ಕೊಲ್ಲುವ ಹಾಗೇ ನೆನಪು ಅಧಿಕನೀನಿತ್ತ ಉಡುಗೊರೆಯು, ನಿನ್ನ ಹೊಳಪಿನ ಹಾಗೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕುತ್ತಿಗೆಯ ಸುತ್ತ ನನ್ನ ಬಾಹುವಿನ ಹಾರಯಮುನಾ ತಟದಲೆಗಳಲ್ಲೆಲ್ಲ ಮಧು ರಾಶಿಹರಿವ ನೀರಲ್ಲೂ ಅರಳಿರುವ ಹೂವಲ್ಲೂ ನೀನೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೋಪಿಕೆಯರೆಲ್ಲ (ನಿನ್ನ) ಲೀಲೆಗೆ ಮಣಿದುಕೂಡಿದ್ದು ಏನು ಬಿಟ್ಟದ್ದು ಏನುಕಂಡದ್ದು ಏನು, ವಿನೀತನಾಗಿ ಬೇಡಿದ್ದು ಏನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೆಳೆಯರೊಡಗೂಡಿ ರಾಸುಗಳನೊಟ್ಟಿದ್ದುಬೆತ್ತ ಬೀಸದೆಯೂ ಜಾನುವಾರು ಹೆಚ್ಚಿದ್ದುಕಾಯುವಿಕೆಗೊಳಗಾಗಿ ಪರಿಪಕ್ವವಾದದ್ದುಸವಿಯರಸನೇ ನೀನು, ಸಕಲವೂ ಸಿಹಿ ಜೇನು. *********************************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟಯನ್ಸ್ ಡೇ ಸ್ಪೆಶಲ್

ಪ್ರೇಮದ ಹನಿಗಳು ಎ.ಹೇಮಗಂಗಾ ಯಾವ ಆಚರಣೆಯೂ ನಮ್ಮ ಪ್ರೇಮಕ್ಕೆ ಬೇಕಿಲ್ಲ ಕಾರಣ, ನಾನೂ ನೀನೂ ಪ್ರೇಮಿಸದ ದಿನವೇ ಇಲ್ಲ ! ಆದ ನನ್ನ ಇನಿಯ ನೊಂದ ಬಾಳಿಗೆ ಒತ್ತಾಸೆ ನನಗೋ ಅವನ ಕೆನ್ನೆಗೆ ಕೆನ್ನೆ ಒತ್ತುವ ಆಸೆ ! ಸ್ವಭಾವದಲ್ಲಿ ನನ್ನ ನಲ್ಲ ನಿಜಕ್ಕೂ ವಾಚಾಳಿ ಬಿಡುವುದಿಲ್ಲ ಪರಿಪರಿಯಾಗಿ ನನ್ನ ಕಾಡಿಸುವ ಚಾಳಿ ಹೆದರುವುದಿಲ್ಲ ನಾನು ದಿನವೂ ಬರುವ ಇರುಳಿಗೆ ಇದೆಯಲ್ಲಾ ಪ್ರಿಯಸಖನ ಕಣ್ಬೆಳಕಿನ ದೀವಿಗೆ ! ಬೇಕಿಲ್ಲ ನನಗೆಂದಿಗೂ ಮಧುಶಾಲೆಯ ಮಧುಪಾತ್ರೆ ನೀಡು ಕೊನೆತನಕ ನಿನ್ನಧರದ ಮಧುವಿನ ಅಕ್ಷಯಪಾತ್ರೆ ! *******

ವ್ಯಾಲಂಟಯನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ಕಾವ್ಯಯಾನ

ಹೆಂಗಳೆಯರ ತರಲೆ ಹಾಡು ಅವ್ಯಕ್ತ ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ರಾತ್ರಿಗ ಬಾರೇ ಅನ್ನುತಾರಾ, ಹಗಲಲಿ ಬೇರೆ ಹೆಣ್ಣಿಗ ಹಲ್ಕಿರಿತಾರಾ ಕಾಪಿ ತಿಂಡಿ ಎಂದು ಕೂಗುತಾರ ನಿನ್ನ, ಚಡ್ಡಿಇಂದ ಟೈವರೆಗೂ ಕೂತಲ್ಲಿ ತರಿಸುತಾರ , ನಿನ್ನ ಪ್ರಾಣ ತಿನ್ನುತಾರಾ!!! ನಿನ್ನ ಗೇಲಿ ಮಾಡುತ್ತಾರಾ!!! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ವಾರಪೂರ್ತಿ ಉಣ್ಣಾಕ ನೀನೇ ಮಾಡಬೇಕಾ ನಿನ್ನನೀ ಮರೆತು ಅವರಿಷ್ಟದ್ ಕಾಳಜಿ ವಹಿಸಬೇಕ, ಶಾಪಿಂಗ್ ಎಲ್ಲರದ ನೀ ಒಬ್ಬಾಕಿ ಮಾಡಬೇಕ, ಆಫೀಸಿಗೂ ಹೋಗಿ ನೀನು ಕೆಲಸ ಮುಗಿಸೀ ಮುಂದಾ.. ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ! ಆಫೀಸಿಗೂ ಹೋಗಿ ನೀನು ಕೆಲಸ ಮುಗಿಸೀ ಮುಂದಾ.. ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ! ನೀನು ಈಗಿರೋದು ಬಾಡಿಗೆ ಮನೆಯೊಳಗೆ, ಸ್ವಂತ ಮನೆಯ ಕನಸ ನನಸ ಮಾಡಬೇಕು ನೀನೇ.! ಗಂಡ ಬ್ಯಾoಕು ಸಾಲ ತಂದ, ತೀರ್ಸಕ್ಕೆ ಆಗ್ದೆ ನಿಂದ! ಹೊಟ್ಟೆ ಬಟ್ಟೆ ಕಟ್ಟಿ ಕಷ್ಟ ಸೆರಗಲಿ ಬಚ್ಚಿಟ್ಟಿ ಸಾಲ ತೀರಿಸ ಬೇಕ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ! ಇಲ್ಲೇ ಕಾಣುಸ್ತಾರ ಮದವ್ಯಾದ ಮರು ನಿಮಿಷಾಕ! ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ! ಇಲ್ಲೇ ಕಾಣುಸ್ತಾರ ಮದವ್ಯಾದ ಮರು ನಿಮಿಷಾಕ! ಮದುವೆ ಮದುವೆ ಎಂದು ನೀ ಮುಲುಕಬ್ಯಾಡ ಮೂಢಿ! ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ! ಮದುವೆ ಮದುವೆ ಎಂದು ನೀ ಮುಲುಕಬ್ಯಾಡ ಮೂಢಿ! ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ! ಪ್ರೀತಿಯ ಕೆಡ್ಡವಿದು ತಾಯಿ ಬೀಳುವ ಮುನ್ನ ತಿಳಿದಿರು ಇದರ ಮಾಯೆ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ!😆😆 ಎಲ್ಲಾ ಹೆಂಗಳೆಯರಿಗೆ, ಹಾಗು ಫನ್ಲವಿಂಗ್ ಗಂಡಸರಿಗೆ!! ****** ಅವ್ಯಕ್ತ…

ಕಾವ್ಯಯಾನ Read Post »

You cannot copy content of this page

Scroll to Top