ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ ಅಮ್ಮ ಸೇವಕರಲ್ಲ, ಅವರೆoದಿಗೂ  ದೇವರ ಪ್ರತಿರೂಪ, ಅವರೆಂದಿಗೂ ಕೇಳುವುದಿಲ್ಲ ದೇವರೇ
ನಮಗೆ ಒಳ್ಳೆಯದು ಮಾಡೆoದು, ಅವರು ಬೇಡುವುದು ಮಕ್ಕಳಿಗಾಗಿ ಮಾತ್ರ. ಅವರು ದೇವರಲ್ಲಿ ತಮಗಾಗಿ ಕೇಳುವುದು ಒಂದು ಮಾತ್ರ ಅದೇನು ಗೊತ್ತಾ?   ನಮ್ಮ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವವರೆಗೆ ನಮಗೆ ಆರೋಗ್ಯ ಕೊಟ್ಟು ಕಾಪಾಡು ಎಂದು ಮಾತ್ರಾವೆ……….ಅಪ್ಪ ಅಮ್ಮ ಸ್ವಾರ್ಥಿಗಳಲ್ಲ,ಅವರೆoದಿಗೂ  ನಿಸ್ವಾರ್ಥಿಗಳು,ಅವರಿಗಾಗಿ ಅವರು ಬದುಕುವುದಿಲ್ಲ.
ಅವರೆಂದಿಗೂ ಕೇಳುವರು ದೇವರೇ ನಮ್ಮ
ಮಕ್ಕಳಿಗೆ ಒಳ್ಳೆಯದು ಮಾಡೆಂದು.
 ಅಪ್ಪ ಅಮ್ಮ  ಹೊಟ್ಟೆ ಕಟ್ಟಿ ಬಟ್ಟೆ ಕಟ್ಟಿ, ಕೂಡಿಟ್ಟು ಆಸ್ತಿಯ ಮಾಡುವರು, ತಮಗಾಗಿ ಬೇಕೆಂದು ಅಲ್ಲವೇ ಅಲ್ಲ. ಅವರು ಅಂದುಕೊಳ್ಳುವರು ಮಕ್ಕಳು ಬೇರೆಯವರ  ಮುಂದೆ ಬೇಡಬಾರದೆಂದು. ನಮ್ಮ ಮಕ್ಕಳು ಎಲ್ಲರ ಮುಂದೆ ತಲೆ ಎತ್ತಿ, ಬಾಳಬೇಕು,
ದುಡಿದು ತಿನ್ನಬೇಕು, ಯಾರ ಕೈಕೆಳಗೂ ಇರಬಾರದು, ಸಂಭಂಧಿಕರು ನಿಮ್ಮನ್ನು ಬೆರಳಿಟ್ಟು ತೋರಿಸಬಾರದು,
 ಎಂದು ಹಗಲು ರಾತ್ರಿ ಶ್ರಮಿಸುವ, ಚಿoತಿಸುವ ಜೀವಗಳು ಅಂದ್ರೆ ಅಪ್ಪ ಅಮ್ಮ ಮಾತ್ರ……….
ಅಪ್ಪ ಅಮ್ಮ ಇದ್ದಾಗ ನಿಮಗೆ ಮೇಲೆ ಹೇಳಿದ ಯಾವ ಪದಗಳು, ವಾಕ್ಯಗಳು ಅರ್ಥವಾಗುವುದಿಲ್ಲ,ಅದು ನನಗೆ ಚನ್ನಾಗಿ ಗೊತ್ತು. ಆದ್ರೆ ಅವರಿಬ್ಬರೂ ಕಣ್ಮರೆ ಯಾದ ಮೇಲೆ  ಅರ್ಥ ವಾಗುತ್ತದೆ. ಆಗ ಏನೂ ಮಾಡಲು ಸಾಧ್ಯವಿಲ್ಲ.
ಆಗ ನಿನಗೆ ಯಾರೂ ಬರುವುದಿಲ್ಲ. ಸ್ನೇಹಿತರು ಸಂಭಂದಿಕರು ಯಾರೂ……… ಇಲ್ಲ.
ಅಪ್ಪ ಅಮ್ಮನೀವು ಚನ್ನಾಗಿ ದ್ರೆ ಖುಶಿಪಡುತ್ತಾರೆ, ಆದ್ರೆ ಬೇರೆಯವರು ನೋಟಕ್ಕೆ ಅಷ್ಟೇ. ಯಾರೂ ಎಷ್ಟೇ ಕಷ್ಟ ಬಂದ್ರು, ಎಷ್ಟೇ ಶ್ರೀಮoತಿಕೆ ಬಂದ್ರು ವೃದ್ಧಾಶ್ರಮಕ್ಕೆ ಸೇರಿಸಬೇಡಿ.   ಮಕ್ಕಳೇ ನನ್ನ ಕಳಕಳಿಯ ಮನವಿ.


About The Author

Leave a Reply

You cannot copy content of this page

Scroll to Top