ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನಿವಾರ್ಯ ಇದ್ದರೆ
ಅತ್ತು ಬಿಡು
ಮನದ ಭಾವಗಳ
ಅದೆಷ್ಟು ಹೊತ್ತು‌ಹಿಡಿದಿಡುವಿ

ಇಲ್ಲಿ ಒಲವೆಂಬುದು
ಅಳುವ ಕಲಿಸುವ
ಪಾಠಶಾಲೆ
ಒಲವಿನಲಿ‌ ಇದ್ದವರನು
ಎಲ್ಲರೂ
ಕೊನೆಗೆ ಹೆತ್ತವರೂ
ಅಳಿಸುವವರೇ

ಅದಾವ ಕಾಲದ ದುರ್ದೈವವೋ
ದೇವರುಗಳ   ಶಾಪವೋ
ಇಲ್ಲಿನ ದೇವರುಗಳೂ
ನೂರೊ ,ಹತ್ತೋ‌, ಕನಿಷ್ಠ
ಇಬ್ಬಿಬ್ಬರನ್ನಾದರೂ
ಮದುವೆಯಾಗುವದನ್ನು
ಒಪ್ಪಿವೆ

ಮನದಲಿ ಒಲಿದವರನ್ನು
ಮೆಚ್ಚುವದು ಎದೆಯಲಿಟ್ಟು
ಪ್ರೀತಿಸುವದನು
ತಿರಸ್ಕರಿಸಿವೆ

ಒಲಿದ ಕಾರಣಕ್ಕಾಗಿ
ಹೆತ್ತ ಮಕ್ಕಳನ್ನೇ
ನೇಣಿಗೆ ಹಾಕುವವರು
ಮರ್ಯಾದಾ ಹತ್ಯೆಯ
ಹೆಸರಲ್ಲಿ ಕೊಲ್ಲುವವರೂ
ಇದ್ದಾರೆ
ಜೀವ ಕೊಟ್ಟಾದರೂ
ಜಾತಿ ಉಳಿಸುತ್ತಾರೆ
ಜೀವ ಇಲ್ಲವಾಗಿಸುತ್ತಾರೆ

ಈ ದೇಶ ಮನುಷ್ಯ
ಮನುಷ್ಯರನ್ನು
ಪ್ರೀತಿಸುವ, ಒಲಿಯುವ
ಕಲೆಯ ಕಲಿಸಲೇ ಇಲ್ಲ


About The Author

Leave a Reply

You cannot copy content of this page

Scroll to Top