ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಬದುಕಿನ ಬಂಡಿಯ ಬರಹಗಾರ” ಕವಿತೆ ಜಯಶ್ರೀ.ಭ.ಭಂಡಾರಿ

ಕಾವ್ಯಸಂಗಾತಿ “ಬದುಕಿನ ಬಂಡಿಯ ಬರಹಗಾರ” ಜಯಶ್ರೀ.ಭ.ಭಂಡಾರಿ ಕನಸು ಕಂಗಳ ಹುಡುಗಿ ಕವಿತೆ ನಾನುಮನವ ಕದ್ದು ಮಧುವ.ತಂದವ ನೀನುಹೇಗೋ ಬಂದೆ ಮೆದುವಾದೆ ನಾನುಅಮೃತ ಧಾರೆ ಎರೆದು ಬಂಧುವಾದೆ ನಯನದಲಿ ನಿನ್ನದೇ ಹೊನ್ನ ಬೆಳಕುಕೆನ್ನೆಯ ರಂಗಿನಲಿ ಹೊಳಪಿನ ತಳುಕುಮುಂಗುರುಳಿಗೆ ಸೋತ ಮಾಯಗಾರಮನದ ಬೇಗೆ ನೀಗಿ ನಿಧಿಯಾದವನು. ಬಾಳಪಥಕೆ ಮುನ್ನುಡಿ ಬರೆದು ಜೊತೆಯಾದೆಭರವಸೆ ತುಂಬುತ ಬದುಕಿನ ಬವಣೆ ನೀಗಿದೆ.ಒಲವು ಗೆಲುವುಗಳ ಸರಸ ಸರದಾರ ನೀನಾದೆದಿನದ ಕಾವ್ಯ ರಾಣಿಗೆ ಮಧುರ ಸಾಹಿತ್ಯವಾದೆ ನೀನೆಲ್ಲೋ ನಾನಲ್ಲೆ ರಾಗವಾಗಿ ಬಳಿ ಬಂದೆಮೈಮರೆತು ಬರೆಯುವ ಪರಿಕಂಡು ಬೇಸರಿಸಿದೆಮುಂಗುರುಳ ಸರಿಸಿ ಮುತ್ತ ನೀಡಲು ಅವಸರಿಸಿದೆಕವಿತೆ ಹುಟ್ಟುವ ಹೊತ್ತು ಕಾಡದೆ ದೂರ ಇರಬಾರದೆ ನೀನೆ ನನ್ನ ಪಾಲಿನ ಕವಿತೆ ಬೇರೆ ಏನು ಬೇಕಿಲ್ಲಮಡಿಲಲ್ಲಿ ತಲೆ ಇಟ್ಟು ಮಲಗುವೆ ಯಾರ ಹಂಗಿಲ್ಲದಿನವೂ ಅದೇ ಹಾಡು ಅದೇ ಕಥೆ ದೂರ ನೂಕೆಲ್ಲನಿನಗೆ ನಾನು ನನಗೆ ನೀನು ಸಂಸಾರ ನೊಗಕ್ಕೆ ಸಾಕಲ್ಲ ರಾತ್ರಿ ರಾಣಿ ಅರಳಿ ಘಮಿಸುತ್ತಿದೆ ನೋಡಬಾರದೇಸುಂದರ ಮೋಹಕ ಕ್ಷಣಕ್ಕೆ ಮುಖ ತಿರುಗಲಾರದೇ ನಕ್ಷತ್ರಗಳು ಮುಸಿ ಮುಸಿ ನಗುತಿವೆ ಕೇಳಬಾರದೇಬರೆದು ಮುಗಿಸುವ ಮುನ್ನ ಹೇ ಗೆಳತಿ ನಗಬಾರದೆ ಜಯಶ್ರೀ.ಭ.ಭಂಡಾರಿ.

“ಬದುಕಿನ ಬಂಡಿಯ ಬರಹಗಾರ” ಕವಿತೆ ಜಯಶ್ರೀ.ಭ.ಭಂಡಾರಿ Read Post »

ಕಾವ್ಯಯಾನ

“ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಗೊರೂರು ಅನಂತರಾಜು

ಕಾವ್ಯ ಸಂಗಾತಿ ಗೊರೂರು ಅನಂತರಾಜು “ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಹನಿಮೂನ್ ನನಗೆ ಸಿಹಿಯಲ್ಲಏಕೆಂದರೆ ನಮ್ಮೂರ ಕೆರೆಬಾವಿಯಲ್ಲಿ ಹನಿ ನೀರಿಲ್ಲ ಮಳೆ ಬರಲೆಂದು ನಮ್ಮೂರ ಮಂದಿಕಡಿದರು ಮಾರಿಗೆ ನೂರಾರುಕುರಿ ಕೋಳಿ ಹಂದಿಹರಿದ ರಕ್ತ ನೋಡಿಸುರಿಸಿದ ಮಳೆರಾಯ ಕಣ್ಣೀರ ಕೋಡಿ ನಮ್ಮೂರ ಕೆರೆಗೆ ಮಳೆಯ ಹನಿಗಳು ಸೇರಿತುಂಬಿದ ಒಡಲಲ್ಲಿನವಮಾಸಗಳ ಸಿರಿ ಮಳೆ ಬಿದ್ದಲ್ಲಿ ನದಿ ಉಕ್ಕಿಜಲಾಶಯಕ್ಕೆ ಒಳ ಹರಿವು ಹೆಚ್ಚುಹಸಿರು ಕ್ರಾಂತಿಗೆ ಕೆರೆ ಕಟ್ಟೆ ಕಟ್ಟಿಸಿಒಳ ಅರಿವು ಹೆಚ್ಚು ಗೊರೂರು ಅನಂತರಾಜು

“ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಗೊರೂರು ಅನಂತರಾಜು Read Post »

ಇತರೆ

ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ

ಮಕ್ಕಳ ಸಂಗಾತಿ ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ “ಭೈರ” ಮಕ್ಕಳ ಕಾದಂಬರಿಯು ಮನೆ ಮಾತಾಗಿದೆ. ಈ ಕಾದಂಬರಿಯು ವಿಶೇಷ ಕಥಾವಸ್ತುವನ್ನುಳ್ಳ ಕಾದಂಬರಿಯಾಗಿದೆ. ಬಳಸಿದ ಭಾಷೆ ಸರಳವಾಗಿದ್ದು, ಎಲ್ಲ ವಯೋಮಾನದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. 74 ಪುಟಗಳ ಕತೆಯನ್ನು ಹೊಂದಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ಈ “ಭೈರ” ಕಾದಂಬರಿಯು ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. * ಶಿವಮೊಗ್ಗದ ಕರ್ನಾಟಕ ಸಂಘದಿಂದ 2024 ನೇ ಸಾಲಿನ ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ• ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ• ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024 ನೇ ಸಾಲಿನ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ಪುಸ್ತಕದತ್ತಿ ಪ್ರಶಸ್ತಿ ರಸಪ್ರಶ್ನೆ ಸ್ಪರ್ಧೆಯ ನಿಯಮಗಳು • ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳ ವಯಸ್ಸಿನ ಮಿತಿ 6 ರಿಂದ 16 ವರ್ಷ ಮಾತ್ರ• 120=00 ಹಣ ಸಂದಾಯ ಮಾಡಿ “ಭೈರ” ಮಕ್ಕಳ ಕಾದಂಬರಿ ಪುಸ್ತಕವನ್ನು ಪಡೆಯಬೇಕು.• ಪುಸ್ತಕ ಓದಲು 15 ರಿಂದ 20 ದಿನಗಳ ಸಮಯದ ಅವಕಾಶ ಇರುತ್ತದೆ.• ಪುಸ್ತಕಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ 20-04-2026• ಸ್ಪರ್ಧೆ ನಡೆಯುವ ದಿನಾಂಕ 30-04-2026• ಮೊಬೈಲ್ ಆಪ್ ಮೂಲಕ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರಶ್ನೆಗಳು ಭೈರ ಕಾದಂಬರಿಯನ್ನು ಕುರಿತಾಗಿಯೇ ಇರುತ್ತವೆ. ನೀವು ಉತ್ತರಿಸುವಾಗ ಸಮಯ ಕೂಡ ರೆಕಾರ್ಡ್ ಆಗುವುದರಿಂದ ಸ್ಪರ್ಧೆ ಪ್ರಾಮಾಣಿಕವಾಗಿಯೇ ನಡೆಯುತ್ತದೆ.• ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ.• ಪ್ರಥಮ ಬಹುಮಾನ 750=00 ರೂ   ದ್ವಿತೀಯ ಬಹುಮಾನ 600=00 ರೂ   ತೃತೀಯ ಬಹುಮಾನ 450=00 ರೂ   ಸಮಾಧಾನಕರ 300=00 ರೂ• ಭಾಗವಹಿಸುವ ಸ್ಪರ್ಧಿಯು ಮೊದಲೇ ನಮಗೆ ತಿಳಿಸಿದಂತಹ ಫೋನ್ ನಂಬರ್ ದಿಂದ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದು.• ಒಂದು ಸಾರಿ ಉತ್ತರಗಳನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ಅವಕಾಶವಿಲ್ಲ.• ಪ್ರಶ್ನೆಗಳು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸರಳವಾಗಿರುತ್ತವೆ.• ಫಲಿತಾಂಶ ಘೋಷಣೆ : 05-05-2026• ಬಹುಮಾನದ ಹಣವನ್ನು ಫೋನ್ ಪೇ ಮಾಡಲಾಗುವುದು. ಜೊತೆಗೆ ಆಕರ್ಷಕ ಪ್ರಮಾಣ ಪತ್ರ ನೀಡಲಾಗುವುದು.• ರಸಪ್ರಶ್ನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಡಲಾಗುವುದು.• ಸಂಪರ್ಕಿಸಿ : 9945095539, 9972932126 ಆದಕಾರಣ ತಾವುಗಳು ತಮ್ಮ ಮನೆಯ ಮಕ್ಕಳಿಗೆ ಕಾದಂಬರಿ ಓದಿಸಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ. ಸ್ಪರ್ಧೆಯ ಆಯೋಜಕರು+6ಭುವನೇಶ್ವರಿ ರು. ಅಂಗಡಿನರಗುಂದ (9945095539)

ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ Read Post »

You cannot copy content of this page

Scroll to Top