ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗೊರೂರು ಅನಂತರಾಜು

“ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು”

ಹನಿಮೂನ್ ನನಗೆ ಸಿಹಿಯಲ್ಲ
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ

ಮಳೆ ಬರಲೆಂದು ನಮ್ಮೂರ ಮಂದಿ
ಕಡಿದರು ಮಾರಿಗೆ ನೂರಾರು
ಕುರಿ ಕೋಳಿ ಹಂದಿ
ಹರಿದ ರಕ್ತ ನೋಡಿ
ಸುರಿಸಿದ ಮಳೆರಾಯ
 ಕಣ್ಣೀರ ಕೋಡಿ

ನಮ್ಮೂರ ಕೆರೆಗೆ ಮಳೆಯ ಹನಿಗಳು ಸೇರಿ
ತುಂಬಿದ ಒಡಲಲ್ಲಿ
ನವಮಾಸಗಳ ಸಿರಿ

ಮಳೆ ಬಿದ್ದಲ್ಲಿ ನದಿ ಉಕ್ಕಿ
ಜಲಾಶಯಕ್ಕೆ ಒಳ ಹರಿವು ಹೆಚ್ಚು
ಹಸಿರು ಕ್ರಾಂತಿಗೆ ಕೆರೆ ಕಟ್ಟೆ ಕಟ್ಟಿಸಿ
ಒಳ ಅರಿವು ಹೆಚ್ಚು



ಗೊರೂರು ಅನಂತರಾಜು

About The Author

Leave a Reply

You cannot copy content of this page

Scroll to Top