ಮಕ್ಕಳ ಸಂಗಾತಿ
ಮಕ್ಕಳಿಗಾಗಿ ಬೇಸಿಗೆ ರಜೆಯ
ಸಂಭ್ರಮಕ್ಕೊಂದು ಕಾದಂಬರಿ
ರಸಪ್ರಶ್ನೆ ಸ್ಪರ್ಧೆ


ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ
ಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ “ಭೈರ” ಮಕ್ಕಳ ಕಾದಂಬರಿಯು ಮನೆ ಮಾತಾಗಿದೆ. ಈ ಕಾದಂಬರಿಯು ವಿಶೇಷ ಕಥಾವಸ್ತುವನ್ನುಳ್ಳ ಕಾದಂಬರಿಯಾಗಿದೆ. ಬಳಸಿದ ಭಾಷೆ ಸರಳವಾಗಿದ್ದು, ಎಲ್ಲ ವಯೋಮಾನದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. 74 ಪುಟಗಳ ಕತೆಯನ್ನು ಹೊಂದಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ಈ “ಭೈರ” ಕಾದಂಬರಿಯು ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
* ಶಿವಮೊಗ್ಗದ ಕರ್ನಾಟಕ ಸಂಘದಿಂದ 2024 ನೇ ಸಾಲಿನ ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ
• ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ
• ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024 ನೇ ಸಾಲಿನ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ಪುಸ್ತಕದತ್ತಿ ಪ್ರಶಸ್ತಿ
ರಸಪ್ರಶ್ನೆ ಸ್ಪರ್ಧೆಯ ನಿಯಮಗಳು
• ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳ ವಯಸ್ಸಿನ ಮಿತಿ 6 ರಿಂದ 16 ವರ್ಷ ಮಾತ್ರ
• 120=00 ಹಣ ಸಂದಾಯ ಮಾಡಿ “ಭೈರ” ಮಕ್ಕಳ ಕಾದಂಬರಿ ಪುಸ್ತಕವನ್ನು ಪಡೆಯಬೇಕು.
• ಪುಸ್ತಕ ಓದಲು 15 ರಿಂದ 20 ದಿನಗಳ ಸಮಯದ ಅವಕಾಶ ಇರುತ್ತದೆ.
• ಪುಸ್ತಕಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ 20-04-2026
• ಸ್ಪರ್ಧೆ ನಡೆಯುವ ದಿನಾಂಕ 30-04-2026
• ಮೊಬೈಲ್ ಆಪ್ ಮೂಲಕ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರಶ್ನೆಗಳು ಭೈರ ಕಾದಂಬರಿಯನ್ನು ಕುರಿತಾಗಿಯೇ ಇರುತ್ತವೆ. ನೀವು ಉತ್ತರಿಸುವಾಗ ಸಮಯ ಕೂಡ ರೆಕಾರ್ಡ್ ಆಗುವುದರಿಂದ ಸ್ಪರ್ಧೆ ಪ್ರಾಮಾಣಿಕವಾಗಿಯೇ ನಡೆಯುತ್ತದೆ.
• ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ.
• ಪ್ರಥಮ ಬಹುಮಾನ 750=00 ರೂ
ದ್ವಿತೀಯ ಬಹುಮಾನ 600=00 ರೂ
ತೃತೀಯ ಬಹುಮಾನ 450=00 ರೂ
ಸಮಾಧಾನಕರ 300=00 ರೂ
• ಭಾಗವಹಿಸುವ ಸ್ಪರ್ಧಿಯು ಮೊದಲೇ ನಮಗೆ ತಿಳಿಸಿದಂತಹ ಫೋನ್ ನಂಬರ್ ದಿಂದ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದು.
• ಒಂದು ಸಾರಿ ಉತ್ತರಗಳನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ಅವಕಾಶವಿಲ್ಲ.
• ಪ್ರಶ್ನೆಗಳು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸರಳವಾಗಿರುತ್ತವೆ.
• ಫಲಿತಾಂಶ ಘೋಷಣೆ : 05-05-2026
• ಬಹುಮಾನದ ಹಣವನ್ನು ಫೋನ್ ಪೇ ಮಾಡಲಾಗುವುದು. ಜೊತೆಗೆ ಆಕರ್ಷಕ ಪ್ರಮಾಣ ಪತ್ರ ನೀಡಲಾಗುವುದು.
• ರಸಪ್ರಶ್ನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಡಲಾಗುವುದು.
• ಸಂಪರ್ಕಿಸಿ : 9945095539, 9972932126
ಆದಕಾರಣ ತಾವುಗಳು ತಮ್ಮ ಮನೆಯ ಮಕ್ಕಳಿಗೆ ಕಾದಂಬರಿ ಓದಿಸಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ.
ಸ್ಪರ್ಧೆಯ ಆಯೋಜಕರು+6
ಭುವನೇಶ್ವರಿ ರು. ಅಂಗಡಿ
ನರಗುಂದ (9945095539)



