ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರಬಹುದೇ ಇಂಥ
ಕ್ಯೂ ಆರ್ ಕೋಡ್ ಗಳು –
ಮುಖಕ್ಕೆ ಹಿಡಿದಾಗ ನಿನ್ನ ನಖಶಿಖಾಂತ ಹೇಳುವ ಜಾತಕಗಳು.
 
ನಿನ್ನ ಜೋಳಿಗೆಯಲ್ಲಿಯ ಹಣ ಪ್ರಪಂಚಕ್ಕೆ ಇಟ್ಟಿರುವ ಪಣ,  
ನಿನ್ನ ಹಿಂದು ಮುಂದಿನವರ  
ಆಸೆ ದುರಾಸೆಗಳ ಕ್ಷಣ.

ಕಾಯುತ್ತಿದ್ದೇನೆ ಆ ಕೋಡಿಗೆ
ನಿನ್ನ ನೈತಿಕದ ಭೌತಿಕದ
ಇಹ ಪರ ಆಸ್ತಿಗಳ ಮುತ್ತಿಗೆಗೆ
ದುರಾಸೆಗೆ ದುರ್ದಾನಕ್ಕೆ!

ಸಿಗುವುದು ಯಾವಾಗಲೋ
ತೀರದ ದಾಹಕ್ಕೆ
ಎಲ್ಲರ ಮುಖ ಕೈ ಕಾಲು ದೇಹಕ್ಕೆ ಮರ್ಜಿ ಹಿಡಿಯುವ
ಹೊತ್ತು ಗೊತ್ತಿಗೆ

ಒಳಗೆಲ್ಲ ಹೊರಗೆ
ಹೊರಗೆಲ್ಲ ಒಳಗೆ,
ಬರಲಿದೆಯೇ ಇಂಥ ಕೋಡು
ಸ್ವಿಚ್ ಆಫ್ ಮಾಡಲಿದೆಯೇ
ಎಲ್ಲರ ಮೂಡು!


ಡಾ ಡೋ ನಾ ವೆಂಕಟೇಶ

About The Author

1 thought on “ಡಾ ಡೋ ನಾ ವೆಂಕಟೇಶ ಕವಿತೆ “ಕೋಡು””

Leave a Reply

You cannot copy content of this page

Scroll to Top