ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನನಗೂ ನಿನಗೂ ಎಷ್ಟೊಂದು ನಂಟು
ಬಿಡದ ಬಾಂಧವ್ಯಕ್ಕೆ ಬೆಸೆದ ಗಂಟು
ನನಗೀಗ ವಯಸ್ಸು ಐವತ್ತು
ಅರವತ್ತಕ್ಕೆ ಅರಳು ಮರಳು
ಆಗಿಲ್ಲ ಬಿಡು
ತೆರೆದ ಕಂಗಳಲ್ಲಿ ದಿನವೂ ಓದುವೆ
ಅದು ಬಿಡುವು ಇದ್ದಾಗ
ನೀನೋ ಮೌನ
ಎಲ್ಲವನ್ನೂ ಓದಿ ಅರ್ಥೈಸಿಕೊಂಡು
ಸಾಗಬೇಕು ಹೊತ್ತಿಗೆ
ಅದೆಷ್ಟು ನಿನಗೆ ಕುತೂಹಲ
ನನಗೂ ಕೂಡಾ
ಕ್ಷಣ ಹೊತ್ತು ಕೈಯಲ್ಲಿ ಅಗಲಿದರೆ ಸಾಕು
ಹುಡುಕಾಟ ಜೀವ ಹೋದಂತೆ
ಭಯ ಬೇರೆ
ಎಲ್ಲವನ್ನೂ ಹಿಡಿದಿಟ್ಟಿರುವ
ಹೆಸರು ಅವರ ನಂಬರು
ಯಾವಾಗಲೋ ಒಮ್ಮೆ ಅಗಲಿ
ಮರೆಯಾಗಿದ್ದೆ ನೋಡು
ನನ್ನ ಫಜಿತಿ
ಕರೆಗಳ ಮೇಲೆ ಕರೆ
ಎಲ್ಲಿರ್ರಿ ?ಮೆಡಂ
ಏನ್ ಇದು ?ಎತ್ತುದೇ ಇಲ್ಲ ನೋಡ್ರಿ !
ಮೆಸೆಜ್ ನೋಡಲಾಕ್ ಆಗುದಿಲ್ಲ ಎನ್ರಿ? ನಾವ್ ನಿಮಗ್ ಕರೆ ಮಾಡಿ
ತಿಳಿಸಬೇಕ್ ಎನ್ರಿ ?
ಒಂಚೂರು ನಿಮಗ್ ಬುದ್ಧಿ ಇಲ್ಲ ಏನ್ರೀ ?
ನೋಡಿ ಅದೆಷ್ಟು ನನಗೂ ನಿನಗೂ ಬಿಟ್ಟಿರಲಾರದ ನಂಟು
ಬೆಸೆದುಕೊಂಡು ಬಿಟ್ಟಿದೆ ಅಂಟು
ನಮ್ಮ ಮನಿಯಾಗ ನಮ್ಮ ಅವ್ವ ಒಂದು ಸಲ ಬೈದು
ಕೊಳ್ಳಾಗ ಗಂಟು ಹಾಕೋಂಡ್ ಬಿಡು
ಇಪ್ಪತ್ನಾಲ್ಕು ತಾಸು ಬರೀ ಕೈಯ್ಯಾಗ ಬೇಕು ನಿನಗ
ಜನರಾದರೂ ಏನಾಂದರು?
 ಅದಕ್ಕಂತಲೇ
ಹೆಸರ್ ಬಂದಿರಬೇಕ್ ನೋಡ್ರಿ
ಜಂಗಮವಾಣಿ
ಬಾಳ್ ಶ್ಯಾನಾಕಿರೀ ನಮ್ಮ ಜಂಗಮವಾಣಿ
ತಡ್ರಿ ಮತ್ ಒಂದು ಕರೆ ಬಂತು
ಎತ್ತ ಲಿಲ್ಲ ಅಂದ್ರ ಕಾಲ ಕೆದರಿ
ಜಗಳಕ್ಕ ಬಂದಾರು
ಹುಷಾರ್ ರೀ !ನನ್ನಂಗ ಆಗಬ್ಯಾಡ್ರಿ
ಬುದ್ಧಿ ಐತೋ ಇಲ್ಲೋ ಅಂತಾರಿ..


About The Author

Leave a Reply

You cannot copy content of this page

Scroll to Top