ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಸುಕನ್ಯೆ”


ಅಂದ್ಕೊಂಡು
ನಾನವಳ ಕಂಡ ಆ ದಿನ
ಪ್ರೀತಿಸ ತೊಡಗಿದೆ ಮನಸಾರೆ,!
ಅವಳ ಸೌಂದರ್ಯಕ್ಕೆ
ಮರುಳಾಗಿ ಕಿರು ನಗೆ ಸೂಸಿ ಬಿಟ್ಟೆ
ಕಣ್ಣೋಟಕೆ ಅವಳ, ಅಲ್ಲಿಂದ ಕಾಲ್ಕಿತ್ತೇ,!
ಭಯಪಟ್ಟು ಬೆವರಿಳಿಸಿದೆ
ಕೋಪಿಸುವಳೋ ಎಂಬ ಭಯದಿ
ಹೆಜ್ಜೆಯ ವೇಗ ಹೆಚ್ಚಿಸಿ,ಮುನ್ನಡೆದು ಬಿಟ್ಟೆ,!
ಮತ್ತೇ ಮತ್ತೇ….ಕಣ್ಣಾರಳಿಸಿ
ದಾರಿ ಕೇರಿಯೊಳು ಸುತ್ತಿ ಅಲೆದು
ಹೃದಯಕ್ಕೆ ಸಿಕ್ಕಿಸಲಾವಳ ಆಸೆಯ ಪಟ್ಟೆ,!
ಸುಕನ್ಯೆ ಅವಳೆಂದು….
ಪ್ರೀತಿಸಿ ಸರಸ ಅವಳ ಬಯಸಿದೆ
ಸ್ತ್ರೀ ಅವಳಲ್ಲವೆಂದು ಅರಿತಾಗ ಕೊರಗಿದೆ.!
ಮತ್ತೇ ಮತ್ತೇ ಅವಳ…
ಸೌಂದರ್ಯಕ್ಕೆ ಮರುಳಾಗಿ ನಾ
ಹುಚ್ಚನಂತೆ ತನ್ನ ತಾನು ಮರೆತು ಬಿಟ್ಟೇ.
ಹಮೀದ್ ಹಸನ್ ಮಾಡೂರು.



