ಕೈಬರಹ ಸಂಗಾತಿ
ಗಾಯತ್ರಿ ಸುಂಕದ
“ರಾಷ್ಟ್ರೀಯ ಕೈ ಬರಹ ದಿನಾಚರಣೆ”

ಕೈ ಬರಹದ ಚಿತ್ರ ರಂಗಮ್ಮ ಹೊದೇಕಲ್
ಕಂಪ್ಯೂಟರ್ ಬಂದಾಗಿನಿಂದ ಬಹುಶಃ ನಮಗೆ ಕೈ ಬರಹ ಮರೆತು ಹೋಗಿದೆ. ಆದರೂ ಚಿಕ್ಕವರಿದ್ದಾಗ ಕಾಪಿ ರೈಟಿಂಗ್ ಬುಕ್ ತಂದು ಬರೆದಿದ್ದು ಇನ್ನೂ ಹಸಿರಾಗಿದೆ.
ನಮ್ಮ ಕೈ ಬರಹ ನಮ್ಮ ವ್ಯಕ್ತಿತ್ವವನ್ನು ಕೂಡ ಸೂಚಿಸುತ್ತದೆ.
ನೀವು. ಎಡಗಡೆಗೆ ವಾಲಿಸಿ ಬರೆದರೆ ಹತಮಾರಿಗಳು, ನಿಮ್ಮದೇ ನಡೆಯ ಬೇಕೆಂಬ ಅಹಂ ಉಳ್ಳವರು.
ನೀವು ಬಲಗಡೆಗೆ ವಾಲಿಸಿ ಬರೆದರೆ ಎಲ್ಲಿ ಹೋದರೂ ಹೊಂದಿ ಕೊಳ್ಳುವ ವ್ಯಕ್ತಿತ್ವ ಉಳ್ಳವರು ಮತ್ತು ಸ್ವಭಾವತಃ ಒಳ್ಳೆಯವರು.
ನೀವು ನೇರವಾಗಿ ಬರೆದರೆ ಸದಾ ಕ್ರಿಯಾಶೀಲರು ಎಂದರ್ಥ.
ನೀವು ಎರಡು ಗೆರೆಗೆ ಹತ್ತಿಸಿ ಬರೆದರೆ ನೀವು ಸ್ವಭಾವತಃ ಯಾರೊಡನೆ ಜಾಸ್ತಿ ಬೇರೆಯದೇ ಒಬ್ಬರೇ ಇರಲಿಕ್ಕೆ ಇಚ್ಛೆ ಪಡುವರು.
ನೀವು ಎರಡು ಗೆರೆಗಳ ನಡುವೆ ಬರೆದರೆ ಹಗಲುಗನಸು ಕಾಣುವ ವ್ಯಕ್ತಿತ್ವ ಉಳ್ಳವರು.
ನೀವು ತುಂಬಾ ಜಾಗ ಬಿಟ್ಟು ಪುಟ ತುಂಬಿಸುವವರು ಇದ್ದರೆ ನೀವು ಸೋಮಾರಿ ಮತ್ತು ಟೈಮ್ ಪಾಸ್ ಮಾಡುವ ವ್ಯಕ್ತಿತ್ವ ಉಳ್ಳವರು.
ನೀವು ಸ್ವಲ್ಪವೂ ಜಾಗ ಬಿಡದೆ ಪುಟ. ತುಂಬಿಸುವವರೂ ಇದ್ದರೆ ನೀವು ಸಮಯಕ್ಕೆ ತುಂಬಾ ಮಹತ್ವ ಕೊಡುವವರು ಆಗಿರುತ್ತೀರಿ. ತಪ್ಪಾಗಿದ್ದ ಶಬ್ದವನ್ನು ತುಂಬ ಜೋರಾಗಿ ಹೊಡೆದು ಹಾಕುವವರು ಆಗಿದ್ದರೆ, ನೀವು ಇನ್ನೊಬ್ಬರಿಗೆ ಮುಖಕ್ಕೆ ಹೊಡೆಯುವಂತೆ ಮಾತನಾಡುವ ವ್ಯಕ್ತಿತ್ವ ಉಳ್ಳವರು ಆಗಿರುತ್ತೀರಾ.
ನೀವು ದುಂಡಗೆ ಅಂದವಾಗಿ ಬರೆಯುವವರು ಆಗಿದ್ದರೆ, ನೀವು ಆಲ್ರೌಂಡರ್ ಾಗಿರುತ್ತೀರಾ. ನೀವು ಗಜಿಬಿಜಿ ಬರೆಯುವವರು ಆಗಿದ್ದರೆ, ನೀವು ಮಾನಸಿಕವಾಗಿ. ಸ್ಥಿರತೆ ಇಲ್ಲದೆ ಚಂಚಲ ವ್ಯಕ್ತಿ ಆಗಿರುತ್ತೀರ.
ನಮ್ಮ ಜೀವನದಲ್ಲಿ ಬದಲಾವಣೆಗಳು ಆದರೆ, ನಮ್ಮ ಕೈ ಬರಹದಲ್ಲಿ ಕೂಡ ಬದಲಾವಣೆ. ಆಗಿರುತ್ತದೆ.
ನಮ್ಮ ಕೈ. ಬರಹ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ತುಂಬ ವೇಗವಾಗಿ ಚಿಂತಿಸಿ ಬರೆಯುವವರು ಇದ್ದರೆ, ಅವರ ಸಹಿ ರನ್ನಿಂಗ್ ಲೆಟರ್ಸ್ ಆಗಿರುತ್ತದೆ.
ಎಷ್ಟೊಂದು ಇಂಟರೆಸ್ಟಿಂಗ್ ಅಲ್ಲವೇ!
ಒಂದು ಸಾರಿ ಚೆಕ್ ಮಾಡಿ ಕೊಳ್ಳಿ.
ಗಾಯತ್ರಿ ಸುಂಕದ




