ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್

ಬೆಳದಿಂಗಳ ನಗು ನೀನಾಗಿರುವೆ
ಬದುಕಿನ ಬೆಳಗು ನೀನಾಗಿರುವೆ
ಸಾವಿರಾರು ವೇದನೆ ತುಂಬಿವೆ
ನಲಿವಿನ ಗುನುಗು ನೀನಾಗಿರುವೆ
ಸುಂದರ ಕನಸಿನ ಹೂದೊಟದಲ್ಲಿ
ಸುಗಂಧದ ಸೊಬಗು ನೀನಾಗಿರುವೆ
ಹಚ್ಚ ಹಸಿರಿನ ಬದುಕು ಇದಲ್ಲವೇ
ಪ್ರಕೃತಿಯ ಬೆರಗು ನೀನಾಗಿರುವೆ
ಮಾಜಾಳ ಹೃದಯ ನೀಲಾಕಾಶದಂತೆ
ನಕ್ಷತ್ರಗಳ ಮಿನುಗು ನೀನಾಗಿರುವೆ
ಮಾಜಾನ್ ಮಸ್ಕಿ




