ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
“ಪ್ರೀತಿಸಿದ ತಪ್ಪಿಗೆ..”


ಇಂದು ಈ ಮುಸ್ಸಂಜೆಯಲಿ….
ಯಾರೋ ಎಲ್ಲೋ
ಪ್ರೀತಿಸುವ ಹೃದಯಕೆ
ನೋವುಣಿಸಿರಬೇಕು…
ಅಕಾಲದಲ್ಲಿ ಆಕಾಶ್
ಆರ್ಭಟಿಸಿ ಭೋರ್ಗರೆದು
ಹೀಗೆ ಸುರಿಯಬೇಕಾದರೆ…
ಸದ್ದಿಲ್ಲದೇ ಒಡೆದ
ಎದೆ ತುಣುಕುಗಳು
ಮುಗಿಲಲಿ ಶೋಕಗೀತೆ
ನುಡಿಸುತಿವೆ….
ಯಾರೋ ಎಲ್ಲೋ
ಹೂವಂತ ಮನಸನು
ಮಾತಿನ ಮುಳ್ಳುಗಳಿಂದ
ಚುಚ್ಚಿ ನೋಯಿಸಿರಬೇಕು…
ಹೆಪ್ಪುಗಟ್ಟಿದ ದುಃಖ
ಕಪ್ಪು ಮೋಡದ ಒಡಲ
ಬಗೆದು ಭೋರೆಂದು
ಭುವಿಯ ಅಪ್ಪುತಿದೆ…
ಯಾರೋ ಎಲ್ಲೋ
ಸ್ನೇಹ ತುಂಬಿದ ಕಂಗಳಿಗೆ
ಅಪಮಾನ ಆಪಾದನೆ
ಪಟ್ಟಿ ಕಟ್ಟಿರಬೇಕು….
ಗರಬಡೆದ ಮುಗಿಲೂ ದುಃಖಿಸಿ
ಬಿಕ್ಕಿಸಳುತ ಮುತ್ತುಮಳೆ
ಸುತ್ತ ಸುರಿಸುತಿದೆ ನೋಡು..
ತಪ್ಪು ಮಾಡದ ಜೀವ
ಬಿಟ್ಟ ಬಿಸಿಯುಸಿರ ಕಾವಿಗೆ
ಸುಟ್ಟು ಸುಡುವ ಸೂರ್ಯನೇ
ನಲುಗಿ ಮರೆಯಾಗಿ ಹೋದ….
ಹೂಹೃದಯ ಒಡೆದು ಚೂರಾಗಿದೆ
ಬಿರುಮಾತಿನ ಬಾಣಗಳಿಗೆ…
ಪ್ರೀತಿಸಿದ ತಪ್ಪಿಗೆ…..
ಇಂದಿರಾ ಮೋಟೆಬೆನ್ನೂರ




ಚಂದದ ಕವಿತೆ
ಸುಮತಿ ನಿರಂಜನ
ಧನ್ಯವಾದ ಸುಮತಿ ನಿರಂಜನ್ ಅವರಿಗೆ…..
Well said mam ….nice
Thank you…….
ಒಳ್ಳೆ ಕಾವ್ಯದ ಹೆಣಿಕೆ…. ಭಾವನೆಗಳ ಸ್ಪಂದನ…. ಜೀವನದ ಕಟು ಸತ್ಯವಿದು…
ತುಂಬಾ ಚೆನ್ನಾಗಿ ಮೂಡಿ ಬಂದಿದೆ .
ಸವಿತಾ ದೇಶಮುಖ
ಕವಿತೆಯ ಹೃದಯದಾಳವ ಹೊಕ್ಕು…. ಭಾವ ಮಿಡಿತಗಳನ್ನು ಆಲಿಸಿ …. ಸ್ಪಂದಿಸಿದ ಹೂ ಮನಸಿಗೆ ವಂದನೆಗಳು…..
– *ಇಂದಿರಾ ಮೋಟೆಬೆನ್ನೂರ.ಬೆಳಗಾವಿ*.
ಭಾವನೆಗಳ ಸುಂದರ ಅಭಿವ್ಯಕ್ತಿ