ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಕಡೆ ಪರೀಕ್ಷೆಗಳ ಭರಾಟೆ ಈ ಮಧ್ಯದಲ್ಲಿ ನಮ್ಮದೊಂದು ಪುಟ್ಟ ಮನೆ ಕೊಂಡು ಅದರ ಗೃಹಪ್ರವೇಶ ನಡೆಯಿತು. ನಿಗಮದಿಂದ ಸಾಲವಾಗಿ ಕೊಟ್ಟ ಹಣ ಅರ್ಧ ಭಾಗಕ್ಕೂ ಸಾಲದೇ ಇದ್ದರೆ ಈ ಎಫ್ ಹಾಗೂ ನಮ್ಮದೇ ಆದ ಒಂದು ಸಹಕಾರಿ ಬ್ಯಾಂಕ್ ಅಲ್ಲಿಂದಲೂ ಸಾಲ ತೆಗೆದು ನನ್ನ ತಂದೆ ಮತ್ತು ತಂಗಿಯರು ಸ್ವಲ್ಪ ಹಣ ಕೊಟ್ಟಿದ್ದರು ಹೀಗಾಗಿ ಅಷ್ಟೊಂದು ತೊಂದರೆ ಆಗಿರಲಿಲ್ಲ ಆದರೂ ಕೈಗೆ ಬರುತ್ತಿದ್ದ ಸಂಬಳ ಸ್ವಲ್ಪ ಕಡಿಮೆಯೇ… ಯೋಚಿಸಿ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ.
ನನ್ನ ತಂಗಿ ಕೆ ಆರ್ ಪೇಟೆಗೆ ವರ್ಗವಾಗಿ ಹೋಗಿದ್ದರಿಂದ ನಾನು ಆಫೀಸಿಗೆ ಸಿಟಿ ಬಸ್ ನಲ್ಲಿ ಓಡಾಡುತ್ತಿದ್ದೆ. 70ನೇ ನಂಬರ್ ಬಸ್ ನಮ್ಮ ಆಂದೋಲನ ಸರ್ಕಲ್ ನಿಂದ ಹೋಗುತ್ತಿತ್ತು. ರೈಲ್ವೆ ಸ್ಟೇಷನ್ ಕಡೆಯಿಂದ ಹೋಗುತ್ತಿದ್ದರಿಂದ ನಾವು ಪೀಪಲ್ಸ್ ಪಾರ್ಕ್ ಅಥವಾ ಸಿದ್ಧಾರ್ಥ ಹೋಟೆಲ್ ಅಲ್ಲಿ ಇಳಿದುಕೊಳ್ಳುತ್ತಿದ್ದವು .ಒಮ್ಮೊಮ್ಮೆ 5-6 ಜನ ಇದ್ದರೆ ನಮ್ಮ ಆಫೀಸಿನ ಮೂಲೆಯಲ್ಲಿ ಕೆನರಾ ಬ್ಯಾಂಕ್ ಬಳಿಯೇ ಸ್ಟಾಪ್ ಕೊಡುತ್ತಿದ್ದರು.ವಾಪಾಸ್ ಬರುವಾಗ ಮಾತ್ರ
ಬಸ್ ಸ್ಟ್ಯಾಂಡಿಗೆ ಬಂದು ಹತ್ತಬೇಕಿತ್ತು. ದಿನವೂ ಓಡಾಡುತ್ತಿದರಿಂದ ಬೇರೆ ಬೇರೆ ಆಫೀಸಿನ ಕೆಲವರು ಪರಿಚಯವಾಗಿದ್ದರು. ಪ್ರಿಯದರ್ಶಿನಿ ಸಿಲ್ಕ್ಸ್ ನ ಪುಷ್ಪ ಹೈಸ್ಕೂಲ್ ಟೀಚರ್ ಲಲಿತ ಮತ್ತು ಇನ್ನೊಬ್ಬರು ಬ್ಯಾಂಕು ಉದ್ಯೋಗಿ ಅವರ ಹೆಸರು ಮರೆತು ಹೋಗಿದೆ ನಾವೆಲ್ಲ ಒಳ್ಳೆಯ ಸ್ನೇಹಿತರಾಗಿದ್ದರು ಲಲಿತ ಅವರು ಈಗಲೂ ಒಮ್ಮೆ ನಮ್ಮ ಕಚೇರಿಗೆ ಬರುತ್ತಿರುತ್ತಾರೆ. ಆ ರೀತಿ ಬಸ್ ಪ್ರಯಾಣದ ಅನುಭವ ಒಂದು ರೀತಿ ಚೆನ್ನಾಗಿತ್ತು ಕಂಪನಿ ಚೆನ್ನಾಗಿದ್ದುದರಿಂದ.

ಈ ಮಧ್ಯೆ ವಿದ್ಯಾರಣ್ಯ ಅವರು ನಾನು ಬಂದಾಗ ಇದ್ದ ಉನ್ನತ ಶ್ರೇಣಿ ಸಹಾಯಕರು ತಕ್ಷಣವೇ ಅವರು ಪದೋನ್ನತಿ ಹೊಂದಿ ವರ್ಗವಾಗಿದ್ದರು.  ಅವರ ಜಾಗಕ್ಕೆ ಸತ್ಯನಾರಾಯಣ ಎನ್ನುವವರು ಬಂದಿದ್ದರು
 ಅವರ ಪತ್ನಿ ಸಹ ನಿಗಮದ ಉದ್ಯೋಗಿಯೇ .ಅವರು ಮಡಿಕೇರಿಯಲ್ಲಿ ಇರುತ್ತಿದ್ದರು. ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲದ್ದರಿಂದ ಆಗಾಗ ರಜೆ ಹಾಕಿ ಇರುತ್ತಿದ್ದರು. ಆಫೀಸಿನಲ್ಲಿ ಅವರ ಕೆಲಸಗಳನ್ನು ನಾವು ಸಹಾಯಕರೇ ಮಾಡಬೇಕಿತ್ತು, ರಾಮನ್ ಅವರು ವರ್ಗವಾಗಿ ಹೋದ ಮೇಲೆ ಸುಧಾ ಎನ್ನುವರು ಸಹಾಯಕಿಯಾಗಿ ನನ್ನ ಜೊತೆಗೆ ಬಂದರು ಸ್ವಲ್ಪ ಮೂಡಿ ಸ್ವಭಾವದವರು. ಒಂದು ವರ್ಷದ ನಂತರ ಮದುವೆಯಾಗಿ ಶಿವಮೊಗ್ಗ ವಿಭಾಗಕ್ಕೆ ಹೋದರು.

ಅನಾರೋಗ್ಯದಿಂದಲೇ ಇರುತ್ತಿದ್ದ ಸತ್ಯನಾರಾಯಣ ಅವರು ಇದ್ದಕ್ಕಿದ್ದಂತೆ ವಿಧಿವಶವಾದರು. ತೀವ್ರತರವಾದ ಕಾಮಾಲೆ ಆಗಿತ್ತಂತೆ .ಅವರು ಮಡಿಕೇರಿಯಲ್ಲಿ ಜನರ ಹತ್ತಿರದಿಂದ ನಾವು ಯಾರು ನೋಡಲು ಹೋಗಲಾಗಲಿಲ್ಲ .ಅವರ ಜಾಗಕ್ಕೆ ಶಾಖೆ 4 ರಿಂದ ವಿಜಯಕುಮಾರ್ ಎನ್ನುವವರು ಬಂದರು. ಅವರು ನಮ್ಮದೇ ಯೂನಿಯನ್ ಸಕ್ರಿಯ ಸದಸ್ಯ ಅಲ್ಲದೆ ಎಲ್ ಎಲ್ ಎಮ್ ಮುಕ್ತ ವಿಶ್ವವಿದ್ಯಾನಿಲಯದಿಂದ ಮಾಡುತ್ತಿದ್ದರು. ಅಸೋಸಿಯೇಟ್ ಸಹ ಮುಗಿದಿತ್ತು .ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಉಳ್ಳವರು ಹಾಗಾಗಿ ಕೆಲಸದ ಜೊತೆಗೆ ತುಂಬಾ ಸಾಹಿತ್ಯದ ಮಾತು ಕಥೆಯು ನಡೆಯುತ್ತಿತ್ತು ಲೈಬ್ರರಿಯಲ್ಲಿ ಓದಿದ ಪುಸ್ತಕಗಳ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದರು. ಈ ಮಧ್ಯೆ ಗೋಪಾಲನ್ ಅವರಿಗೆ ನಿವೃತ್ತಿಯಾಗಿ ಅವರ ಜಾಗಕ್ಕೆ ಟಿ ಎಂ ಪರಶಿವಮೂರ್ತಿ ಎನ್ನುವವರು ಆಡಳಿತಾಧಿಕಾರಿಯಾಗಿ ಬಂದಿದ್ದರು. ಇವರು ಈ ಹಿಂದೆ ಸಹಾಯಕ ಆಡಳಿತರಾಧಿಯಾಗಿದ್ದಾಗ ನಂಜನಗೂಡಿನಲ್ಲಿ ನನ್ನ ಜೊತೆ ಕೆಲಸ ಮಾಡಿದ್ದರು .ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೂ ಸಹ ಸಾಹಿತ್ಯದಲ್ಲಿ ಆಸಕ್ತಿ ಇದ್ದು ಈಗಾಗಲೇ ಒಂದು ಪುಸ್ತಕ ಸಹ ಬರೆದಿದ್ದರು ನಮ್ಮ ವಿಭಾಗ ಹೊಸ ವ್ಯವಹಾರ ವಿಭಾಗದಲ್ಲಿ ಒಂದು ರೀತಿಯ ಸಾಹಿತ್ಯ ಕ ವಾತಾವರಣ ಇತ್ತು. ತಿಂಗಳಲ್ಲಿ ಒಮ್ಮೆ ಪಾಟ್ ಲಕ್ ಎಂದರೆ ಒಬ್ಬೊಬ್ಬರು ಒಂದೊಂದು ತರಹದ ಅಡುಗೆ ಮಾಡಿಕೊಂಡು ಹೋಗಿ ವಿಭಾಗದವರೆಲ್ಲ ಒಟ್ಟಾಗಿ ಊಟ ಮಾಡುತ್ತಿದ್ದೆವು. ಆಗಾಗ ಹೊರಗಡೆ ಊಟಕ್ಕೆ ಹೋಗುತ್ತಿದ್ದೆವು. ಒಳ್ಳೆಯ ವಾತಾವರಣ.ಸುಧಾ ಅವರು ವಿವಾಹವಾಗಿ ಹೋದ ನಂತರ ಅವರ ಜಾಗಕ್ಕೆ ಪುಷ್ಪಲತಾ ಮಯ್ಯ ಎನ್ನುವವರು ಬಂದರು. ಅವರು ಹೆಚ್ಚು ದಿನ ಇರಲಿಲ್ಲ .ಮದುವೆಯಾಗಿ ಉತ್ತರ ಭಾರತಕ್ಕೆ ಹೋಗಿದ್ದರು. ಈಗ ಮತ್ತೆ ನಮ್ಮ ವಿಭಾಗಕ್ಕೆ ಅಧಿಕಾರಿಯಾಗಿ ಬಂದಿದ್ದಾರೆ. ಆಗಾಗ ಸಿಗುತ್ತಾರೆ. ಒಳ್ಳೆಯ ಸ್ನೇಹಿತೆ.

ವಿಭಾಗೀಯ ಕಚೇರಿಯಲ್ಲಿ ಪ್ರತಿ ವರ್ಷವೂ ಶಾಖೆಯ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿನ ಉದ್ಯೋಗಿಗಳಿಗೆ ಒಂದು ತರಬೇತಿ ಶಿಬಿರ ನಡೆಸಬೇಕಾಗುತ್ತದೆ.  ಅಲ್ಲಿ ಹೊಸ ಬದಲಾವಣೆಗಳು ಏನಾದರೂ ಇದ್ದಲ್ಲಿ ಮತ್ತು ದಿನನಿತ್ಯದ ಕೆಲಸಗಳಲ್ಲಿ ವಹಿಸಬೇಕಾದ ಜಾಗರೂಕತೆ ಈ ಎಲ್ಲ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಹಾಗೆಯೇ ಹೊಸ ವ್ಯವಹಾರ ವಿಭಾಗದ ವರ್ಕ್ಶಾಪ್ಗಳು ಸಹ ಪ್ರತಿ ವರ್ಷವೂ ನಡೆಯುತ್ತಿತ್ತು. ಆ ವರ್ಕ್ ಶಾಪ್ಗಳಲ್ಲಿ ಮಾಹಿತಿಗಳನ್ನು ಕೊಡಲು ಮೆಟೀರಿಯಲ್‌ಗಳನ್ನು ಸಿದ್ಧ ಮಾಡಬೇಕಿತ್ತು ಎಲ್ಲರೂ ಸೇರಿ ಅದನ್ನು ಮಾಡುತ್ತಿದ್ದೇವೆ ಅಲ್ಲದೆ ಒಂದೊಂದು ಗಂಟೆಯ ಕಾಲ ಯಾವುದಾದರೂ ವಿಷಯದ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು ಅದನ್ನು ಸಹ ಮಾಡುತಿದ್ದೆವು. ಆ ರೀತಿ ಕ್ಲಾಸ್ ಗಳನ್ನು ತೆಗೆದುಕೊಳ್ಳಲು ನನಗೆ ತುಂಬಾ ಖುಷಿ ಇರುತ್ತಿತ್ತು ಅದೇ ರೀತಿ ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿನಿಧಿಗಳಿಗೆ ಅವರ ಸಭೆ ನಡೆದಾಗಲೂ ವಿಷಯಗಳನ್ನು ತಿಳಿಸಲು ಕರೆ ಬರುತ್ತಿತ್ತು ಆಗಲು ಹೋಗಿ ಮಾತನಾಡಿ ಬರುತ್ತಿದ್ದೆ. ಅಧ್ಯಾಪನ ವೃತ್ತಿ ನನಗೆ ಇಷ್ಟವಿದ್ದದ್ದು ಸ್ವಲ್ಪ ಮಟ್ಟಿಗಾದರೂ ಈ ರೀತಿ ನನ್ನ ಆಸೆ ಈಡೇರಿತು.

ಹಾಗೆಯೇ ಎರಡು ವರ್ಷಕ್ಕೆ ಒಮ್ಮೆ ಹೊಸ ವ್ಯವಹಾರ ವಿಭಾಗದಿಂದ ನಮಗೆ ಸೇವೆ ನೀಡುತ್ತಿದ್ದ ವೈದ್ಯರ ಸಮಾವೇಶ ನಡೆಸಬೇಕಿತ್ತು ಉದ್ಯೋಗಿಗಳಿಗೆ ವರ್ಕ್ ಶಾಪ್ ವಿಭಾಗಿಯ ಕಚೇರಿಯ ಸಮಾವೇಶ ಕೊಠಡಿಯಲ್ಲೇ ನಡೆಯುತ್ತಿತ್ತು ಆದರೆ ಡಾಕ್ಟರುಗಳಿಗೆ ಯಾವುದಾದರೂ ಹೋಟೆಲ್ ಸಭಾಂಗಣದಲ್ಲಿ ಈ ರೀತಿಯ ಸಮಾವೇಶ ಆಗಬೇಕಿತ್ತು ಆಗಲು ಅಷ್ಟೇ ಎಲ್ಲ ರೀತಿಯ ತಯಾರಿಗಳು ನಮ್ಮ ವಿಭಾಗದಲ್ಲೇ ನಡೆಯುತ್ತಿತ್ತು ಒಂದು ರೀತಿ ಸೃಜನಾತ್ಮಕತೆಗೆ ಅವಕಾಶ ದೊರಕುತ್ತಿತ್ತು. ಬೇರೆ ಬೇರೆ ಹುದ್ದೆಗಳಿಗೆ ಪದವನ್ನತಿಗಾಗಿ ಸಂದರ್ಶನಗಳು ನಡೆಯುತ್ತಿದ್ದವು ಆಗ ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಂಬಂಧಿಸಿದಂತೆ ಕೇಳಬಹುದಾದ ಪ್ರಶ್ನೆಗಳ ಒಂದು ಪಟ್ಟಿ ತಯಾರು ಮಾಡಿ ಸಂದರ್ಶನಾಧಿಕಾರಿಗಳಿಗೆ ಕೊಡುತ್ತಿದ್ದೆವು. ಪ್ರತಿ ವರ್ಷವೂ ಹೆಚ್ಚು ಕಡಿಮೆ ಅದು ನನ್ನದೇ ಕೆಲಸ ಎನ್ನುವಂತೆ ಆಗಿತ್ತು . ಒಂದು 50 60 ಪ್ರಶ್ನೆಗಳ ಪಟ್ಟಿ ಮಾಡಿ ಕೊಟ್ಟಿರುತ್ತಿದ್ದೆ.

ಹೀಗೆ ಎಲ್ಲಾ ಸುಗಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಜೀವ ವಿಮಾ ರಂಗಕ್ಕೆ ಒಂದು ರೀತಿಯ ಹೊಸ ಬದಲಾವಣೆ ತಂದದ್ದು ಮಲ್ಹೋತ್ರ ಕಮಿಟಿಯ ಸ್ಥಾಪನೆ. ಅದರ ಬಗ್ಗೆ ಹೀಗಂತೆ ಹಾಗಂತೆ ಎಂಬ ವಿವರಗಳು ಹೊರ ಬರುತ್ತಿದ್ದಂತೆಯೇ ನಿಗಮದಲ್ಲಿ ತೆಗೆದುಕೊಂಡ ಕಂಪ್ಯೂಟರಿಕರಣದ ನಿರ್ಧಾರ ಜಾರಿಗೆ ಬಂತು.  ಯಾವ ಕಾರ್ಮಿಕ ಸಂಘವು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದನ್ನು ವಿರೋಧಿಸಿ ಒಂದು ಎರಡು ದಿನ ಸ್ಟ್ರೈಕ್ ಸಹ ಮಾಡಿದ ನೆನಪು .ಆದರೂ ನಿಗಮದಲ್ಲಿ ಕಂಪ್ಯೂಟರಿಕರಣ ನಡೆದೇ ಬಿಟ್ಟಿತು.

1994ರಲ್ಲಿ ಎಲ್‌ಐಸಿ (LIC) ಕೈಗೊಂಡ ಕಂಪ್ಯೂಟರೀಕರಣದ ಪ್ರಕ್ರಿಯೆಯು ಕೇವಲ ತಾಂತ್ರಿಕ ಬದಲಾವಣೆಯಾಗಿರದೆ, ಭಾರತೀಯ ವಿಮಾ ಕ್ಷೇತ್ರದಲ್ಲಿನ ಒಂದು ದೊಡ್ಡ ‘ಡಿಜಿಟಲ್ ಕ್ರಾಂತಿ’ಯಾಗಿತ್ತು1994ರ ಸುಮಾರಿಗೆ ಎಲ್‌ಐಸಿ ತನ್ನ ವ್ಯವಹಾರ ಪ್ರಕ್ರಿಯೆಗಳನ್ನು ವೇಗಗೊಳಿಸಲು ನಿರ್ಧರಿಸಿತು. ಅಲ್ಲಿಯವರೆಗೆ ಹೆಚ್ಚಿನ ಕೆಲಸಗಳು ಹಸ್ತಪ್ರತಿಯಲ್ಲಿ (Manual) ನಡೆಯುತ್ತಿದ್ದವು. 1994ರಲ್ಲಿ ಪ್ರಮುಖವಾಗಿ ಮೈಕ್ರೋಪ್ರೊಸೆಸರ್ ಆಧಾರಿತ ಸಿಸ್ಟಮ್‌ಗಳನ್ನು ಪರಿಚಯಿಸಲಾಯಿತು.. ಇದರ ಬಗ್ಗೆ ಇನ್ನಷ್ಟು ಆಳವಾದ ವಿವರಗಳು ಇಲ್ಲಿವೆ:
​ ಮುಂಬೂತ ವ್ಯವಹಾರದ ಕಂಪ್ಯೂಟರೀಕರಣ (Front-end Business Computerization)
​1994-95ರ ಅವಧಿಯಲ್ಲಿ ಎಲ್‌ಐಸಿ ತನ್ನ ಶಾಖಾ ಕಚೇರಿಗಳಲ್ಲಿ (Branch Offices) ಕಂಪ್ಯೂಟರ್‌ಗಳನ್ನು ಅಳವಡಿಸಲು ಆದ್ಯತೆ ನೀಡಿತು.
​ಮೊದಲು ಪ್ರೀಮಿಯಂ ಪಾವತಿಸಿದ ನಂತರ ರಸೀದಿ ಪಡೆಯಲು ದಿನಗಟ್ಟಲೆ ಕಾಯಬೇಕಿತ್ತು. ಆದರೆ 1994ರ ನಂತರ ಕೌಂಟರ್‌ನಲ್ಲಿ ಕುಳಿತ ತಕ್ಷಣ ಕಂಪ್ಯೂಟರ್ ಮೂಲಕ ರಸೀದಿ ನೀಡುವ ವ್ಯವಸ್ಥೆ ಜಾರಿಗೆ ಬಂತು.
​ನಿಖರತೆ: ಪಾಲಿಸಿ ಸಾಲ (Policy Loan) ಮತ್ತು ಸರೆಂಡರ್ ಮೌಲ್ಯದ ಲೆಕ್ಕಾಚಾರಗಳನ್ನು ಹಸ್ತಚಾಲಿತವಾಗಿ ಮಾಡುವ ಬದಲು ಸಾಫ್ಟ್‌ವೇರ್ ಮೂಲಕ ನಿಖರವಾಗಿ ಲೆಕ್ಕ ಹಾಕಲು ಆರಂಭಿಸಲಾಯಿತು.
​2. ತಾಂತ್ರಿಕ ಹಿನ್ನೆಲೆ (Technical Infrastructure)
​ಆ ಕಾಲದಲ್ಲಿ ಇಂಟರ್ನೆಟ್ ಇಂದಿನಂತೆ ಸುಲಭವಾಗಿರಲಿಲ್ಲ. ಎಲ್‌ಐಸಿ ಬಳಸಿದ ತಂತ್ರಜ್ಞಾನಗಳು ಹೀಗಿದ್ದವು:
​UNIX ಆಧಾರಿತ ಸಿಸ್ಟಮ್: ಹೆಚ್ಚಿನ ಶಾಖೆಗಳಲ್ಲಿ UNIX ಆಪರೇಟಿಂಗ್ ಸಿಸ್ಟಮ್ ಅಳವಡಿಸಲಾಗಿತ್ತು. ಇದು ಏಕಕಾಲದಲ್ಲಿ ಅನೇಕ ಬಳಕೆದಾರರು ಕೆಲಸ ಮಾಡಲು ಅನುವು ಮಾಡಿಕೊಟ್ಟಿತು.
​COBOL ಭಾಷೆ: ವಿಮಾ ದತ್ತಾಂಶಗಳನ್ನು (Data) ನಿರ್ವಹಿಸಲು COBOL ನಂತಹ ಪ್ರೋಗ್ರಾಮಿಂಗ್ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.
​ಲೋಕಲ್ ಏರಿಯಾ ನೆಟ್‌ವರ್ಕ್ (LAN): ಶಾಖೆಯೊಳಗಿನ ಕಂಪ್ಯೂಟರ್‌ಗಳನ್ನು ಪರಸ್ಪರ ಸಂಪರ್ಕಿಸಲು LAN ವ್ಯವಸ್ಥೆಯನ್ನು ಅಳವಡಿಸಲಾಯಿತು.
​3. ಕಾರ್ಯಕ್ಷಮತೆಯಲ್ಲಿ ಬದಲಾವಣೆ
​ಕಂಪ್ಯೂಟರೀಕರಣದಿಂದ ಎಲ್‌ಐಸಿಯ ಕಾರ್ಯವೈಖರಿಯಲ್ಲಿ ಆದ ಪ್ರಮುಖ ಸುಧಾರಣೆಗಳು:
​ನವೀಕರಣ ನೋಟಿಸ್ (Renewal Notices): ಪಾಲಿಸಿದಾರರಿಗೆ ಪ್ರೀಮಿಯಂ ಕಟ್ಟುವ ಸಮಯದ ಬಗ್ಗೆ ಮುಂಚಿತವಾಗಿ ನೋಟಿಸ್ ಕಳುಹಿಸುವ ಪ್ರಕ್ರಿಯೆ ಸ್ವಯಂಚಾಲಿತವಾಯಿತು.
​ಕ್ಲೈಮ್‌ಗಳ ಇತ್ಯರ್ಥ: ಮರಣದ ನಂತರದ ಅಥವಾ ಅವಧಿ ಮುಕ್ತಾಯದ (Maturity) ಹಣವನ್ನು ಪಾವತಿಸುವ ಪ್ರಕ್ರಿಯೆಯ ವೇಗ ಹೆಚ್ಚಾಯಿತು.
​ಮಾಹಿತಿ ಶೇಖರಣೆ: ದೊಡ್ಡ ದೊಡ್ಡ ರಿಜಿಸ್ಟರ್ ಬುಕ್‌ಗಳ ಬದಲಿಗೆ ಚಿಕ್ಕ ಡಿಸ್ಕ್‌ಗಳಲ್ಲಿ ಲಕ್ಷಾಂತರ ಜನರ ಮಾಹಿತಿ ಸಂಗ್ರಹಿಸುವುದು ಸಾಧ್ಯವಾಯಿತು.
​ಉದ್ಯೋಗಿಗಳಿಗೆ ತರಬೇತಿ
​1994ರಲ್ಲಿ ಎಲ್‌ಐಸಿ ತನ್ನ ಸಾವಿರಾರು ಸಿಬ್ಬಂದಿಗೆ ಕಂಪ್ಯೂಟರ್ ಸಾಕ್ಷರತೆ ನೀಡಲು ಬೃಹತ್ ತರಬೇತಿ ಶಿಬಿರಗಳನ್ನು ಆಯೋಜಿಸಿತ್ತು. ಇದು “ಕಂಪ್ಯೂಟರ್ ಬಂದರೆ ಉದ್ಯೋಗ ನಷ್ಟವಾಗುತ್ತದೆ” ಎಂಬ ಭೀತಿಯನ್ನು ಹೋಗಲಾಡಿಸಿ, ಉದ್ಯೋಗಿಗಳು ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವಂತೆ ಮಾಡಿತು.

ಅದರ ಪರಿಣಾಮ ತಕ್ಷಣದಲ್ಲಿ ತಿಳಿಯದಿದ್ದರೂ ಮುಂದೆ ನೇಮಕಾತಿಗಳು ನಡೆಯದೆ ಸ್ಥಗಿತವಾಗಿದ್ದು ಇದರದೇ ಒಂದು ಪರಿಣಾಮ. ಆದರೆ ತ್ವರಿತ ಸೇವೆ ಸಲ್ಲಿಸಿ ಬದಲಾಗುತ್ತಿರುವ ಕಾಲದಲ್ಲಿ ಮುಂದೆ ನಡೆದು ಪ್ರಗತಿ ಸಾಧಿಸಲು ಕಂಪ್ಯೂಟರೀಕರಣ ಒಂದು ಅತ್ಯಗತ್ಯ ಅವಶ್ಯಕತೆ ಆಗಿತ್ತು .ನಿಗಮ ತನ್ನ ಎಲ್ಲಾ ಉದ್ಯೋಗಿಗಳಿಗೂ ಕಂಪ್ಯೂಟರಿಕರಣದ ಪರಿಹಾರಾರ್ಥವಾಗಿ ಒಂದು ಇಂಕ್ರಿಮೆಂಟ್ ಸಹ ಕೊಟ್ಟಿತು.

ಕಂಪ್ಯೂಟರಿಕರಣದ ಬದಲಾವಣೆಗಳು ಶಾಖಾ ಕಚೇರಿಗಳಲ್ಲಿ ತುಂಬಾ ಬದಲಾವಣೆಗಳನ್ನು ತಂದಿತ್ತಾದರೂ ನಮ್ಮ ವಿಭಾಗಿಯ ಕಚೇರಿಯ ಕೆಲಸಗಳಲ್ಲಿ ಅಷ್ಟೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ ಹೆಚ್ಚಿನ ಕಂಪ್ಯೂಟರ್ಗಳು ಇನ್ನು ವಿಭಾಗಿಯ ಕಚೇರಿಗೆ ಬಂದಿರಲಿಲ್ಲ.


About The Author

Leave a Reply

You cannot copy content of this page

Scroll to Top