ಅಂಕಣ ಸಂಗಾತಿ
ಭಾರತದ ಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ಉಮಾ ಭಾರತಿ
ಮಧ್ಯಪ್ರದೇಶದ ಮೊದಲ ಮಹಿಳಾ ಮುಖ್ಯಮಂತ್ರಿ
ಅವಧಿ: ಡಿಸೆಂಬರ ೨೦೦೩ ರಿಂದ ೨೩ ಅಗಸ್ಟ್ ೨೦೦೪, (೨೫೯ ದಿನಗಳು)

ಉಮಾಭಾರತಿಯವರು ೩ ಮೇ ೧೯೫೯ರಂದು ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯ ದುಂಡಾದಲ್ಲಿ ಜನಿಸಿದರು. ಇವರು ರೈತ ಕುಟುಂಬದಲ್ಲಿ ಜನಿಸಿದರು. ಇವರು ಬಾಲ್ಯದಿಂದಲೇ ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥವನ್ನು ಆಸಕ್ತಿಯಿಂದ ಓದುತ್ತಿದ್ದರು. ಅಷ್ಟೇಅಲ್ಲದೆ ಆಧ್ಯಾತ್ಮದ ಕಡೆ ಆಸಕ್ತಿಯನ್ನು ವಹಿಸಿದರು. ಇವರು ಬಾಲ್ಯದಿಂದಲೇ ಧಾರ್ಮಿಕ ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಇವರ ನಂತರದ ದಿನಗಳಲ್ಲಿ ವಿಜಯರಾಜೆ ಸಿಂದ್ಯಾಯ ಅವರ ಸಂಪರ್ಕಕ್ಕೆ ಒಳಪಟ್ಟು, ತಮ್ಮ ೨೦ನೇ ವಯಸ್ಸಿನಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸೇರಿಕೊಂಡರು. ಬಿಜೆಪಿಗೆ ಸೇರಿಕೊಂಡ ನಂತರ ೧೯೮೪ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ೧೯೮೯ ರಲ್ಲಿ ಖಜುರಾಹೋ ಲೋಕಸಭಾ ಕ್ಷೇತ್ರದಿಂದ ಗೆದ್ದರು. ೧೯೯೧, ೧೯೯೬ ಮತ್ತು ೧೯೯೮ರ ಚುಣಾವಣೆಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡು ಬಂದರು. ೧೯೯೯ರಲ್ಲಿ ಭೋಪಾಲ್ನಿಂದ ಮತ್ತು ೨೦೧೪ರಲ್ಲಿ ಝಾನ್ಸಿಯಿಂದ ಲೋಕಸಭೆಗೆ ಆಯ್ಕೆಯಾದರು. ಇವರು ೧೯೯೯ ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಬದಲಾಯಿಸಿ, ಭೋಪಾಲನಿಂದ ಗೆದ್ದರು. ಇವರು ವಾಜಪೇಯಿ ಆಡಳಿತಾವಧಿಯಲ್ಲಿ ಕ್ಯಾಬಿನೆಟ್ ಸದಸ್ಯರಾದರು. ಇವರು ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರವಾಸೋದ್ಯಮ, ಯುವ ವ್ಯವಹಾರಗಳು ಮತ್ತು ಕ್ರಿಡೆಗಳು ಮತ್ತು ಕಲ್ಲಿದ್ದಲು ಮತ್ತು ಗಣಿಗಳ ಹೀಗೆ ವಿವಿಧ ರಾಜ್ಯ ಮತ್ತು ಕ್ಯಾಬಿನೆಟ್ ಮಟ್ಟದ ಖಾತೆಗಳನ್ನು ನಿರ್ವಹಣೆ ಮಾಡಿರುವರು.

೨೦೦೩ರಲ್ಲಿ ಮಧ್ಯಪ್ರದೇಶದ ವಿಧಾನಸಭಾ ಚುಣಾವಣೆಯಲ್ಲಿ ಭಾರತಿಯವರನ್ನು ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಇವರು ಆ ಸಮಯದಲ್ಲಿ ಪಕ್ಷದ ಪ್ರಚಾರವನ್ನು ಅಬ್ಬರವಾಗಿ ಮಾಡಿ, ಶಾಸಕಾಂಗದ ಒಟ್ಟು ೨೩೦ ಸ್ಥಾನಗಳಲ್ಲಿ ೧೭೩ ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದರು. ಕೇವಲ ಒಂದು ವರ್ಷದ ಅವಧಿಯಲ್ಲಿ ಕೆಲ ರಾಜಕೀಯ ಕಾರಣಗಳಿಂದ ರಾಜನಾಮೆಯನ್ನು ನೀಡಿದರು. ನಂತರ ೨೦೦೪ರಲ್ಲಿ ಭಾರತೀಯ ಜನಶಕ್ತಿ ಪಕ್ಷವನ್ನು ಸೇರಿಕೊಂಡರು. ಮತ್ತೆ ೨೦೧೧ರಂದು ಬಿಜೆಪಿಗೆ ಪುನಃ ಸೇರಿಕೊಂಡರು. ೨೦೧೨ರಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಪುನರುಜ್ಜಿವನಗೊಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು, ಆ ಸಮಯದಲ್ಲಿ ಚಾರ್ಖಾರಿ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನಸಭೇಗೆ ಆಯ್ಕೆಯಾದರು. ೨೦೧೪ರ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿಗೆ ಮಾರ್ಗದರ್ಶನ ನೀಡಲು ರಚಿಸಲಾದ ಹನ್ನೇರಡು ಜನರ ತಂಡದಲ್ಲಿ ಉಪಾಧ್ಯಕ್ಷೆಯ ಸ್ಥಾನವನ್ನು ಪಡೆದರು. ಈ ಸಮಯದಲ್ಲಿ ಝಾನ್ಸಿಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೨೬ ಮೇ ೨೦೧೪ ರಿಂದ ೧ ಸೆಪ್ಟೆಂಬರ್ ೨೦೧೭ರ ವರೆಗೆ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನದ ಸಚಿವರಾಗಿ ಸೇವೆ ಸಲ್ಲಿಸಿದರು. ೩ ಸೆಪ್ಟೆಂಬರ್ ೨೦೧೭ ರಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು
ಸುರೇಖಾ ರಾಠೋಡ್




