ಧಾರಾವಾಹಿ ಸಂಗಾತಿ
ಕಂತು-ಒಂದು
ಜಯದೇವಿ ತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ

ಸವಿತಾ ದೇಶಮುಖ
ಲೇಖಕಿಯ ಪರಿಚಯ
ಸವಿತಾ. ನಿರಂಜನ. ದೇಶಮುಖ
ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು).
ತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)
ಕಿತ್ತೂರು ಇತಿಹಾಸದ ಮೊದಲ ಇತಿಹಾಸಕಾರರಾದ ಶ್ರೀ ದೊಡ್ಡಭಾವೆಪ್ಪ ಮೂಗಿ ಬೈಲಹೊಂಗಲ ಇವರ ಮೊಮ್ಮಗಳು.
ರಾವ್ ಬಹದ್ದೂರ್ ದಿವಾನ್ ಬಾಹಾದೂರ್ ಶಿವವಲಿಂಗರಾವ ಜಗದೇವಪ್ಪ.ದೇಶಮುಖ ಆಲಮೇಲ .ಸಮಾಜ ಸುಧಾರಕರು ವಿಜಯಪುರ ಇವರ ಸೊಸೆ .
ಶಿಕ್ಷಣ:
ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಂನಲ್ಲಿ ಎಂ.ಎ. (ಕರ್ನಾಟಕ ವಿಶ್ವವಿದ್ಯಾಲಯ)
ಮಾಸ್ ಮೀಡಿಯಾದಲ್ಲಿ ಡಿಪ್ಲೊಮಾ
ವೃತ್ತಿ:
ವಿಜಯಪುರದ ಆಲ್ ಇಂಡಿಯಾ ರೇಡಿಯೋದಲ್ಲಿ ಕಾರ್ಯಕ್ರಮ ನಿರ್ಮಾಪಕಿ.
೨೦೦೦ಕ್ಕೂ ಹೆಚ್ಚು ರೇಡಿಯೋ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡಿರುತ್ತಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು “ಹೋರಾಟದ ಹೆಜ್ಜೆಗಳು” ಎಂಬ ವಿಶೇಷ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ.
ಅನೇಕ ನೇರ ಪ್ರಸಾರ ಕಾರ್ಯಕ್ರಮಗಳು ಮತ್ತು ಫೋನ್-ಇನ್ ನೇರ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಇದಲ್ಲದೆ ವಿಜಯಪುರದ ಮಕ್ಕಳ ಶಾಲೆ “ರಘುಕುಲ”ವನ್ನು ನೋಡಿಕೊಳ್ಳುತ್ತಿದ್ದು, ಕನ್ನಡ ಲೇಖಕಿಯೂ ಆಗಿದ್ದಾರೆ.
ಹುದ್ದೆಗಳು:
ಡಾ. ಜಯದೇವಿ ತಾಯಿ ವಿದ್ಯಾವರ್ಧಕ ಸಂಘ, ವಿಜಯಪುರ – ಅಧ್ಯಕ್ಷೆ.
ಡಾ. ಜಯದೇವಿ ತಾಯಿ ಟ್ರಸ್ಟ್, ಬಸವಕಲ್ಯಾಣ – ಅಧ್ಯಕ್ಷೆ.
******
ಮೊದಲಕಂತು
*ಕನ್ನಡದ ತಾಯಿ-“ಜಯದೇವಿತಾಯಿ- ಲಿಗಾಡೆ”
ಬದುಕು- ಬರಹ- ಬದ್ಧತೆ-(.ಜೀವನದ ವೃತ್ತಾಂತ)*

ಜಯದೇವಿತಾಯಿ ಹುಟ್ಟಿದಮನೆ
ಕೆಂಧೂಳಿ ಸಮಯ.. ತಂಪಾಗಿ ಬೀಸುವ ಗಾಳಿಯು ಮಂಗಳವಾದ್ಯದಂತೆ ಎಲ್ಲೆಡೆಯೂ ಸೂಚಿಸುತ್ತಿತ್ತು…, ಹಕ್ಕಿ- ಪಕ್ಷಿಗಳು ದೂರ ದೂರದಿಂದ ಮರಳಿ ಮನೆಗೆ ಹೋಗದೆ ” ಞಂದ್ರ ಭವನ”ದ ಸುತ್ತಲೂ ಸುತ್ತುತ ಶುಭ ಹಾರೈಸಲು ಆಗಮಿಸಿದಂತಿತ್ತು…, ” ಇಂದ್ರ ಭವನದ ಮುಂದಣದಲ್ಲಿ ಅಗ್ಗಿಬತ್ತಿಗಳ ಸುವಾಸನೆ ಹರಡಿತ್ತು. ಮನೆಯ ಗಡಿಯಾರದ ಪೆಂಡಲಂ ಕ್ಷಣದ ವಿಶೇಷತೆಯನ್ನು ಅರಿತಂತೆ ನಿಧಾನವಾಗಿ ಚಲಸಿದಂತೆ ಅನಿಸುತ್ತಿತ್ತು…… !!!! ನವ ಶಿಶುವಿನ ಅಳು ಅಂಗಳಲಿ ತೇಲಿದಾಗ …. ಎಲ್ಲೆಲ್ಲೂ ಸಂತಸ ಹರಡಿತ್ತು……
“ಅಪ್ಪಟ ಕನ್ನಡತಿಯ “ಆಗಮನದ ಘೋಷಣೆಯಾಗಿತ್ತು….!!!
ಮಹಾರಾಷ್ಟ್ರ ಸೊಲ್ಲಾಪುರದ ಹೃದಯ ಭಾಗದಲ್ಲಿ ಸ್ಥಿತಗೊಂಡ “ಇಂದ್ರ ಭವನದಲ್ಲಿ” ದಿನಾಂಕ.23- 6- 1912 ರಂದು ಜಯದೇವಿತಾಯಿಯವರ ಜನನವಾಗಿತ್ತು.
ಚಂದ್ರನ ಕಿರಣನ ಬೆಳಕಿನಂತೆ ರೂಪ ತಾಳಿದ ಅಪಾರ ಸೌಂದರ್ಯದ ಖಣಿ- ಹೆಣ್ಣು ಮಗುವಿನ ಜನನ…. ಪುಟ್ಟ ಪುಟ್ಟ ಕಣ್ಣುಗಳು ಕಿರಿದಾದ ನೀಲಿ ವರ್ಣದ ಮಿನುಗುವ ತಾರೆಯಂತಿದ್ದವು… ಸೂರ್ಯನ ಹೊಂಬೆಳಕಿನ ಮೈಬಣ್ಣ… ನಸುನಗುವ ತುಟಿಗಳು …..ಮುಂದೆ ನೂರಾರು ಜೀವಿಗಳಿಗೆ ಆಸರೆಯಾಗುವ ಆಶ್ವಾಸನೆ ಕೊಡುವ ಸಂಕೇತದ ಮಂದಹಾಸ …..!!!!!!.
ಇಂದ್ರಭವನದಲ್ಲಿ ಹೊಸ ಪ್ರಕಾಶದ ಪ್ರವಾಹ ನೋಡುತ್ತಿದ್ದಂತೆ “ವಾರದ ಮಲ್ಲಪ್ಪನವರು…” ಹೆಣ್ಣು ಜಗಕ್ಕೆ ಜಯ ತರುವ ಜಯದ -ದೇವಿಯಾಗಲಿ” ಎಂದು ಹರಿಸುತ್ತಾ … ಮುದ್ದು ಮುದ್ದಾಗಿದ್ದ ಮಗುವನ್ನು ಕೈಗೆ ಎತ್ತಿಕೊಂಡ ವಾರದ ಮಲ್ಲಪ್ಪನವರು…ತನ್ನ ಅಳಿಂದಿರಾದ “ಚನ್ನಬಸಪ್ಪರ” ಕೈಯಲ್ಲಿ ಇಡುತ್ತಾ “ಈ ಮಗೂ ದೊಡ್ಡ ವ್ಯಕ್ತಿ ಆಗುವಳು”…. ಎಂದು ಹಾರೈಸಿದರು……!!!! ಮಲ್ಲಪ್ಪನವರ ಮಾತು ಹುಸಿಯಾಗಲಿಲ್ಲ.
ಇವರ ಮಾತು ಕೇಳಿದ ತಾಯಿ “ಸಂಗವ್ವ”ರಿಗೆ ಹೃದಯ ತುಂಬಿ ಬಂದಿತು. ಈ ಮಾತನ್ನು ಜಯದೇವಿ ತಾಯಿಯವರ ತಾಯಿ ಸಂಗವ್ವನವರು ಆಗಾಗ ಹೇಳುತ್ತಿದ್ದರು.

ವಾರದ ಮಲ್ಲಪ್ಪನವರು,ಸೊಲ್ಲಾಪುರ
ಭಾರತ ಸ್ವಾತಂತ್ರ್ಯದ ಪೂರ್ವದಲ್ಲಿ ಅತ್ಯಂತ ಹೆಸರುವಾಸಿಯಾದ ಆಗರ್ಭ ಶ್ರೀಮಂತ ವಾರದ ಮನೆತನ, ಭಾರತ ದೇಶದ 10 ಶಿರಿತನದ ಮನೆತನದಲ್ಲಿ ಒಂದಾಗಿತ್ತು. ವಾರದ ಮನೆತನ ವಿಕ್ಟೋರಿಯಾ ರಾಣಿಯ ಆಹ್ವಾನಿತ ಅತಿಥಿಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದರು . ಅನೇಕ ಸಂಸ್ಕೃತ-ಕನ್ನಡ ಪಾಠ ಶಾಲೆಗಳನ್ನು ತೆಗೆದು ಶರಣ ಸಂಸ್ಕೃತಿಯನ್ನು ಬೆಳಸುತ……ಉಚಿತ ಪ್ರಸಾದ- ಜ್ಞಾನ ದಾಸೋಹದಲ್ಲಿ ನಿರತರಾದವರು.
ಇವರ ಮೊದಲನೆಯ ಹೆಂಡತಿಗೆ ಮಕ್ಕಳಾಗಲಿಲ್ಲ ಅವರ ಸೋದರನಾದ “ಚನ್ನಬಸಪ್ಪ ಮಡಿಕಿ” ಇವರನ್ನು ಮಗನಂತೆ ಜೋಪಾನ ಮಾಡಿದರು. ವಾರದ ಮನೆತನದ ವ್ಯವಹಾರಗಳೆಲ್ಲಾ ಚನ್ನಬಸಪ್ಪನವರು ನೋಡಿಕೊಂಡು ಹೋಗುತ್ತಿದ್ದರು. ಅತ್ಯಂತ ಪ್ರಾಮಾಣಿಕ ಸುಶೀಲ ಸುಸಂಸ್ಕೃತರು ಆಗಿದ್ದ ಚೆನ್ನಬಸಪ್ಪನವರಿಗೆ ೧೩ಜನ ಮಕ್ಕಳಾದರು.
ಎರಡು ಗಂಡು ಮಕ್ಕಳ ನಂತರ ಮೂರನೇ ಹೆಣ್ಣು ಮಗು “ಜಯದೇವಿ ತಾಯಿ “ಜನಿಸಿದ್ದು ಅತ್ಯಂತ ಸಂತಸವನ್ನು ತಂದಿತ್ತು ದಂಪತಿಗಳಿಗೆ….
‘ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ‘ಎನ್ನುವ ಕಾಲವು ಅದಾಗಿತ್ತು … ಆದರೆ ಜಯದೇವಿಯವರ ತಂದೆ ತಾಯಿಯಂದಿರು ಹೆಣ್ಣು ಹುಟ್ಟಿತೆಂದು ಸಂಭ್ರಮಿಸಿದ ಸಂದರ್ಭವನ್ನು ನೆನೆಯಬಹುದಾಗಿದೆ.
ಒಂದು ಕಡೆ ಜಯದೇವಿ ತಾಯಿಯವರು ತಮ್ಮ ತ್ರಿಪದಿಯಲಿ ಬರೀತಾರೆ….
ಹೆಣ್ಣು ಹುಟ್ಟಿತೆಂದು ಕಣ್ಣೀರ ಕರಿಬ್ಯಾಡ
ಸಣ್ಣಗಾಗಬ್ಯಾಡ ಮನದಾಗ -ತಾಯವ್ವ
ಹೆಣ್ಣೇನ ಜಗದ ಕಣ್ಣೇನ.
ತಂದೆ ತಾಯಿಯರು-ಶರಣ ಸಂಸ್ಕೃತಿಯ ಬಧ್ಧತೆಯಲ್ಲಿ ಬೆಳೆದ ಜಯದೇವಿ ತಾಯಿಯವರು ಕನ್ನಡಿಗರಿಗೆ ತಾಯಿಯಾದರು. ನಿರ್ಗತಿಕರಿಗೆ ಶಾಶ್ವತ ಗತಿಯ ತೋರಿದರು .
….ಸಂಗವ್ವನವರು(ತಾಯಿ) ಸಮಾಜಪರ ಕೆಲಸ ಮಾಡುವ ಪ್ರವೃತ್ತಿಯು ತಂದೆಯ ಪ್ರೋತ್ಸಾಹದಲ್ಲಿ ಮುಂದುವರೆದಿತ್ತು. ವಾರದ ಮಲ್ಲಪ್ಪನವರು ತೀರಿದ ಮೇಲೆ ಮನೆಯ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡರು ಚನ್ನಬಸಪ್ಪನವರ.ಅವರು ಕೇವಲ ವ್ಯಾಪಾರ ಅಷ್ಟೇ ನೋಡಿಕೊಳ್ಳದೆ ಮೆಜಿಸ್ಟ್ರರೆಟ ಆಗಿಯು ಕಾರ್ಯನಿರ್ವಹಿಸಿದರು. ಅತ್ಯಂತ ನ್ಯಾಯಪರರು ,ಸೌಮ್ಯವಾದಿಗಳು ,ಪ್ರಗತಿಪರ ವ್ಯಚಾರಿಕತೆಯಲ್ಲಿ ವಾರದ ಮನೆತನವನ್ನು ತನ್ನ ಕುಟುಂಬವನ್ನು ನಡೆಸಿಕೊಂಡು ಹೋದರು. ತನ್ನ ಮಕ್ಕಳಲ್ಲಿ ನೈತಿಕತೆಯ ದೃಷ್ಟಿಯನ್ನು ಬೆಳೆಸಿದರು. ಅವರ ಹೆಂಡತಿ ಸದಾ ಸಮಾಜ ಸೇವೆಯಲ್ಲಿಯೇ ತೊಡಗಿದ್ದರಿಂದ ಹೆಚ್ಚಿನ ಕಾಲ ಮನೆಯ ಹೊರಗಡೆ ಕಳಿಯುತ್ತಿದ್ದ ಸಂದರ್ಭಗಳನ್ನು ಜಯದೇವಿ ತಾಯಿಯವರು ನೆನೆಯುತ್ತಿದ್ದರು.
ಅದನ್ಕೇನು ಕೇಳಿ ಬಹಳ ಆಶ್ಚರ್ಯವಾಗುತ್ತಿತ್ತು …..!!

ಜಯದೇವಿ ತಾಯಿ ಜನಿಸಿದ ಕೋಣೆ
ತಾಯಿಯ ಸಂಸ್ಕಾರದಲ್ಲಿ ಬೆಳೆದ ಜಯದೇವಿ ಯವರು ಪ್ರಗತಿಪರ ವಿಚಾರವನ್ನು ಹೊಂದಿದ್ದರು. ಮನೆಯಲ್ಲಿ ಶರಣ ತತ್ವ-ಬಸವ ಧರ್ಮದ ಪರಿಪಾಲಕರಾಗಿದ್ದರು.ಶರಣರ ಮೌಲ್ಯವನ್ನು ಮಕ್ಕಳಲ್ಲಿ ಬಿತ್ತಿದ್ದರು….. ಮುಖ್ಯವಾಗಿ ಹೆಣ್ಣು ಮಕ್ಕಳಗೆ ವಿಶೇಷವಾದ ಪ್ರಾಧ್ಯಾನತೆಯನ್ನು ಕೊಡಲಾಗಿತ್ತು. ಹೆಣ್ಣು ಮಕ್ಕಳು ಧೈರ್ಯ ಸ್ಥೈರ್ಯದಲಿ ಬದುಕನ್ನು ಬದುಕುವ ರೀತಿಯನ್ನು ಕಲಿಸಿದ್ದವರೇ….ತಂದೆಯವರು ಎನ್ನುವಂತಿದ್ದರು ಜಯದೇವಿ ತಾಯಿಯವರು….!!
ಲೋಕದ ಆಗುಹೋಗುಗಳ ಬಗ್ಗೆ ,ಮಹಿಳಾ ಸುಧಾರಣೆಯ ಕುರಿತು ಪತ್ರಿಕೆಗಳಲ್ಲಿ ಬರುವ ಎಲ್ಲ ಘಟನೆಗಳ ಕುರಿತು ಮಕ್ಕಳೊಂದಿಗೆ ಚರ್ಚಿಸುತ್ತಿದ್ದರು. ಹಾಗೆ ಮಕ್ಕಳಿಗೆ ಭಾಷಣ ಮಾಡುವದನ್ನು, ಬರೆಯುವುದನ್ನು ಕಲಿಸುತ್ತಿದ್ದರು. ತಂದೆಯ ಸಮಾಜ ಪರಕಾಳಜಿ ,ಸಹನ ಶೀಲತೆ, ಶಾಂತಚಿತ್ತತೆ…. ವ್ಯವಹಾರದ ಚಾತುರ್ಯತೆ ಜಯದೇವಿ ಯವರನ್ನು ವೈಚಾರಿಕ ಅಧ್ಯಯನ ಶೀಲತೆಗೆ ಅನುವು ಮಾಡಿಕೊಟ್ಟಿತು.
ತಂದೆಯ…. ಮಹಿಳಾ ಸ್ವಾತಂತ್ರ್ಯ ಪರವಾದ ಚಿಂತನೆಗಳು ಜಯದೇವಿಯವರನ್ನು ಬಹಳ ಆಳವಾಗಿ ಪ್ರಭಾವ ಬೀರಿದವು .ಮಹಿಳೆಯರ ಬಗ್ಗೆ ಯೋಚಿಸುವಂತೆ ಮಾಡಿತು.ಜಯದೇವಿಯವರ ತಾಯಿ ಸಂಗವ್ವ ಸೊಲ್ಲಾಪುರದ “ಗಾಬಣೆ “ಮನೆತನದವರು. ಮದುವೆಯಾದ ಮೇಲೆ ಅವರಿಗೆ ಸಂಗವ್ವ ಅಂತ ಕರೆಯಲಾಯಿತು ಏಕೆಂದರೆ ವಾರದ ಮಲ್ಲಪ್ಪನವರ ಮೊದಲ ಹೆಂಡತಿಯ ಹೆಸರು ಸಂಗವ್ವ ಆಗಿತ್ತು ಸಂಗವ್ವನನ್ನು ವಾರದ ಮಲ್ಲಪ್ಪನವರು ಸಾಕು ಮಗಳಾಗಿ ಬೆಳೆಸಿದರು.
ಮಲ್ಲಪ್ಪನವರ ಎರಡನೇ ಮತ್ತು ಮೂರನೇ ಹೆಂಡಂದಿರಾದ ಬಸವ್ವ ಮತ್ತು ಗೌರವ್ವ ಅವರು “ಸರಸ್ವತಿ ಸದನಕ್ಕೆ ” ಹೋಗುತ್ತಿದ್ದರು. ಅವರೊಂದಿಗೆ ಸಂಗವ್ವರನ್ನು ಕರೆದುಕೊಂಡು ಹೋಗುವ ರೂಢಿ ಇತ್ತು. ಅಲ್ಲಿ ಜಯದೇವಿತಾಯಿಯವರು ಬಹಳ ಚಿಕ್ಕ ಮಗು ಇದ್ದಾಗ “ಮಹಿಳಾದ ಜ್ಞಾನ “ಮಂದಿರದಲ್ಲಿ ಹೋಗಲು ಶುರು ಮಾಡಿದ್ದರು .
ಅಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಹಸ್ತಕಲಾ ಪ್ರದರ್ಶನ ,ಚಿತ್ರಕಲಾ ಪ್ರದರ್ಶನ , ಹಾಡು ಭಾಷಣ ವಚನಗಳ ಪ್ರದರ್ಶನಗಳನ್ನು ಅಲ್ಲಿ ಏರ್ಪಡಿಸಲಾಗುತ್ತಿತ್ತು.
ತಾಯಿ ಸಂಗವ್ವನವರು ಭಾಷಣ ಮಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಶ್ರಾವಣ ಮಾಸದಲ್ಲಿ ಶರಣರ ಪುರಾಣವನ್ನು ಹೇಳುತ್ತಿದ್ದರು .ಹೆಣ್ಣನ್ನು ಕೇವಲ ನಾಲ್ಕು ಗೋಡೆಗಳಲಿ ಕೂಡಿ ಇಡುವ ಕಾಲ ಅದಾಗಿತ್ತು . ಹೆಣ್ಣು ಕೇವಲ ಮಕ್ಕಳನ್ನು ಹೆತ್ತು ಗಂಡನನ್ನು ನೋಡಿಕೊಳ್ಳುವ ಜವಾಬ್ದಾರಿ ಅಷ್ಟೇ ಅವಳದು ಅನ್ನುವ ಪದ್ಧತಿ ಇತ್ತು. ಆ ಕಾಲದಲ್ಲಿ ಸಂಗವ್ವನವರು ಮತ್ತು ತಂದೆ ಚನ್ನಬಸಪ್ಪನವರು ಸಮಾಜಮುಖಿ ಕೆಲಸಗಳನ್ನು ಮಾಡುವುದರಲ್ಲಿ ತೊಡಗಿಸಿದ್ದರು .
ಇವರು ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು ….ಈ ಹೊತ್ತಿನಲ್ಲಿ ಅತ್ಯಂತ ಪ್ರಚಲಿತವಾದ ನಾಲ್ಕು ಮನೆತನಗಳು ಅಂದರೆ ವಾರದ ,ಮಡಕಿ ,ಲಿಗಾಡೆ ,ಕಾಡಾದಿ… ಮನೆತನಗಳು ಹೆಚ್ಚು ಸಾಮಾಜಿಕ ಕಾರ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದವು.
(ಮುಂದಿನ ಶುಕ್ರವಾರಕ್ಕೆ ಮುಂದುವರಿಯುವದು)
ಸವಿತಾ ದೇಶಮುಖ

ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು).ತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ಕಿತ್ತೂರು ಇತಿಹಾಸದ ಮೊದಲ ಇತಿಹಾಸಕಾರರಾದ ಶ್ರೀ ದೊಡ್ಡಭಾವೆಪ್ಪ ಮೂಗಿ ಬೈಲಹೊಂಗಲ ಇವರ ಮೊಮ್ಮಗಳು.ರಾವ್ ಬಹದ್ದೂರ್ ದಿವಾನ್ ಬಾಹಾದೂರ್ ಶಿವವಲಿಂಗರಾವ ಜಗದೇವಪ್ಪ.ದೇಶಮುಖ ಆಲಮೇಲ .ಸಮಾಜ ಸುಧಾರಕರು ವಿಜಯಪುರ ಇವರ ಸೊಸೆ .
ಶಿಕ್ಷಣ:ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಂನಲ್ಲಿ ಎಂ.ಎ. (ಕರ್ನಾಟಕ ವಿಶ್ವವಿದ್ಯಾಲಯ)
ಮಾಸ್ ಮೀಡಿಯಾದಲ್ಲಿ ಡಿಪ್ಲೊಮಾ ವೃತ್ತಿ:ವಿಜಯಪುರದ ಆಲ್ ಇಂಡಿಯಾ ರೇಡಿಯೋದಲ್ಲಿ ಕಾರ್ಯಕ್ರಮ ನಿರ್ಮಾಪಕಿ.೨೦೦೦ಕ್ಕೂ ಹೆಚ್ಚು ರೇಡಿಯೋ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡಿರುತ್ತಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು “ಹೋರಾಟದ ಹೆಜ್ಜೆಗಳು” ಎಂಬ ವಿಶೇಷ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ.
ಅನೇಕ ನೇರ ಪ್ರಸಾರ ಕಾರ್ಯಕ್ರಮಗಳು ಮತ್ತು ಫೋನ್-ಇನ್ ನೇರ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಇದಲ್ಲದೆ ವಿಜಯಪುರದ ಮಕ್ಕಳ ಶಾಲೆ “ರಘುಕುಲ”ವನ್ನು ನೋಡಿಕೊಳ್ಳುತ್ತಿದ್ದು, ಕನ್ನಡ ಲೇಖಕಿಯೂ ಆಗಿದ್ದಾರೆ.
ಹುದ್ದೆಗಳು:ಡಾ. ಜಯದೇವಿ ತಾಯಿ ವಿದ್ಯಾವರ್ಧಕ ಸಂಘ, ವಿಜಯಪುರ – ಅಧ್ಯಕ್ಷೆ.ಡಾ. ಜಯದೇವಿ ತಾಯಿ ಟ್ರಸ್ಟ್, ಬಸವಕಲ್ಯಾಣ – ಅಧ್ಯಕ್ಷೆ.




ಚೆನ್ನಾಗಿ ಮೂಡಿ ಬಂದಿದೆ mam.
ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು ತಾವು ಎಂಬುದೇ ಒಂದು ಹೆಮ್ಮೆಯ ವಿಷಯ. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು ತಮಗೆ.
ಜಯದೇವಿ ತಾಯಿಯವರ ಬಗ್ಗೆ ಮೂಡಿ ಬರುತ್ತಿರುವ ಅಂಕಣ ಬಹಳ ಸಂತಸ ತಂದಿದೆ
Excellent article Madam
ಸವಿತಾ ಅವರೇ.. ನಿಮ್ಮ ಲೇಖನಿಯಿಂದ ಬಹಳ ಉತ್ಕೃಷ್ಟ ಪರಿಚಯಾತ್ಮಕ ಲೇಖನ ಮೂಡಿಬಂದಿದೆ…
ತಾಯಿ ಜಯದೇವಿ ತಾಯಿ ಲಿಗಾಡೆಯವರ ಕುರಿತು….
ಮುಂದಿನ ಕಂತಿಗಾಗಿ ಕಾಯುತಿರುವೆ….
– *ಇಂದಿರಾ ಮೋಟೆಬೆನ್ನೂರ.ಬೆಳಗಾವಿ*
ತುಂಬು ಹೃದಯದ ಧನ್ಯವಾದಗಳು
ಶ್ರೀ ಮತಿ ಜಯದೇವಿ ತಾಯಿ ಲಿಗಾಡೆ ಕನ್ನಡ ಕವಯಿತ್ರಿ, ಗಡಿನಾಡ ಪ್ರದೇಶದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಜೀವನಪೂರ್ತಿ ಹೋರಾಟ ಮಾಡಿದವರು ಅವರ ಬದುಕಿನ ಪರಿಚಯ ಲೇಖನ ತುಂಬಾ ಚೆನ್ನಾಗಿ ಬಂದಿದೆ.
Thank you
Nice article madam,All the best