ಕಾವ್ಯ ಸಂಗಾತಿ
“ಹೊಸ ವರುಷ ತರಲಿ ಹರುಷ”
ಎಮ್ಮಾರ್ಕೆ


ಹೊಸ ವರುಷ ತರಲಿ ಹರುಷ
ಎಂದೆಂದೂ ನಿಮ್ಮ ಬಾಳಿನಲಿ
ಎಲ್ಲೇ ಇರಲಿ ಹೇಗೆ ಇರಲಿ
ಬಾಳು ಬಂಗಾರವಾಗಿರಲಿ
ಒಂದಾಗಿ ಎಲ್ಲರೂ ಬೆರೆತು
ನಮ್ಮೆಲ್ಲ ನೋವನು ಮರೆತು
ಸಿಹಿಯಾದ ಮಾತನು ಆಡಿ
ಎಲ್ಲರ ಜೊತೆ ಒಡಗೂಡಿ
ಹಾಡಿ ಕುಣಿಯುತ
ಮೈ ಮರೆಯುತ
ಈ ಬಾಳ ಸವಿಯೋಣ…
ಕಳೆದಾಯ್ತು ಎಲ್ಲ ಇರುಳು
ಹಿಡಿದಾಯ್ತು ನೂರು ಬೆರಳು
ಮರೆತಾಯ್ತು ಎಲ್ಲ ನೋವು
ನಾವಿಂದು ಅರಳಿದ ಹೂವು
ಘಮ ಸೂಸುತ
ಹೂ ಹಾಸುತ
ಸ್ವಾಗತ ಕೋರುವೆನು..
ಹಳೆಬೇರ ಜೊತೆ ಹೊಸಚಿಗುರು
ಬೆರೆತಾಗಲೇ ಬಾಳು ಹಸಿರು
ನಿನ್ನೆಯ ಕ್ಷಣಗಳ ನೆನೆದು
ನಾಳೆಗೆ ಮನವನು ತೆರೆದು
ಇಂದು ಹಾಡುತ
ಕುಣಿದಾಡುತ
ಮೈ ಮರೆಯುವೆನು….
ಮಹಾಂತೇಶ ಆರ್ ಕುಂಬಾರ (ಎಮ್ಮಾರ್ಕೆ)



