ಕಾವ್ಯ ಸಂಗಾತಿ
ಎಮ್ಮಾರ್ಕೆ
“ಹುಬ್ಬಳಿಯಾಂವ”


ಈ ಭೂಮಿಗಿ ಬಿದ್ದಾಂವ
ಆ ಬಾನಿಗಿ ಎದ್ದಾಂವ,
ಇದ್ದುದೆಲ್ಲಾನು ಗೆದ್ದಾಂವ
ನೀ ಹುಬ್ಬಳಿಯಾಂವ
ಪದ ಪದವ ಕುಣಿಸಾಂವ
ಮುದದಿ ಉಣಿಸಾಂವ,
ಎದಿಗುದಿಯ ತಣಿಸಾಂವ
ಅಂದತ್ತನ ನೆನೆಸಾಂವ
ಬ್ಯಾನಿ ಹೊತ್ತ ನಡದಾಂವ
ಜ್ಞಾನಪೀಠ ಪಡದಾಂವ,
ಮೂಗುದಾನ ಹಿಡದಾಂವ
ಬಿಗುಮಾನ ಬಿಡದಾಂವ
ನಿದ್ದಿ ನೀರಡಿಕಿ ಕೆಡಸಾಂವ
ಗಾರುಡಿಯ ನಡಸಾಂವ
ಹಾಳು ಹಂಗು ಬಿಡಸಾಂವ
ಗುಂಗೊಂದ ಹಿಡಸಾಂವ
ಬಾಳಿನುದ್ದಕೂ ಬೆಂದಾಂವ
ಬೆಂದ ಬೇಂದ್ರೆಯಾದಾಂವ,
ದತ್ತ ಅಂದತ್ತನೇ ಆದಾಂವ
ಇಂದೆತ್ತ ಎದ್ದ ಹೋದಾಂವ
ಎಮ್ಮಾರ್ಕೆ




