ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಒಲುಮೆಯ ಕಾಣಿಕೆಯಂತೆ
ಬಂದೆ ಅಪ್ಪ ನೀ ನನ್ನ ಬಾಳಿಗೆ!
ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..
ತುಂಬಿ ನನ್ನ ಸಂತಸದ ಜೋಳಿಗೆ!!

ನಿನ್ನ ನೆನೆಯದೇ ಇನಿತೂ
ಕಳೆಯದು ಈ ಬದುಕು!
ನಿನ್ನ ಸವಿನೆನಪಿನ ಕ್ಷಣಗಳೆ..
ಈ ಮಗಳಿಗೆ ಹಸಿರ ಬೆಳಕು!!

ಮನದಂತರಾಳದ ಬೆಚ್ಚನೆಯ ಕಾವಲಲಿ
ನಿನ್ನದೇ ಒಲವದು ಅಡಗಿದೆ!
ಸಂತಸದಿ ಮಿಡಿದ ಕಂಬನಿಯಲೂ..
ಅಳಿಯದ ನಿನ್ನ ಭಾವವಿದೆ!!

ಪಡೆದ ಸಂತಸದ ಎಣಿಕೆಯಿರದು
ನಿನ್ನ ಪ್ರೀತಿಯ ಸಿಂಚನದಲಿ!
ಹನಿಯೊಂದು ತಾ ಜಿಗಿಯಲು
ತವಕಿಸಿದಂತೆ
ಮೋಡದಂಚಿನಲಿ!!


About The Author

1 thought on “ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ””

  1. ಒಲುಮೆಯ ಕಾಣಿಕೆಯಂತೆ ನೀ ಬಂದೆ ಅಪ್ಪ ನನ್ನ ಬಾಳಿಗೆ ಅದ್ಭುತ ಕವನಗಳ ಸಾಲುಗಳು ಮೇಡಂ

Leave a Reply

You cannot copy content of this page

Scroll to Top