ಕಾವ್ಯ ಸಂಗಾತಿ
ಶಾಲಿನಿ ರುದ್ರಮುನಿ ಹುಬ್ಬಳ್ಳಿ
“ಜನವರಿ ಒಂದರ ಬೆಳಿಗ್ಗೆ”


ಜನವರಿ ಒಂದರ ಬೆಳಗ್ಗೆ
ಕನ್ನಡಿಯೇ ಮೊದಲು ಪ್ರಶ್ನಿಸಿತು
“ಈ ವರ್ಷ ಏನು ಬದಲಾವಣೆ?”
ನಾನು ಉತ್ತರಿಸಿದೆ,
“ಮೊದಲು ನಗು, ಉಳಿದದ್ದು ನೋಡೋಣ ಬಿಡು!”
ಕ್ಯಾಲೆಂಡರ್ ಹೊಸದು,
ಪೆನ್ನು ಹಳೆಯದು,
ಸಂಕಲ್ಪಗಳು ಮಾತ್ರ
ಪ್ರತಿವರ್ಷದಂತೆ
ಫ್ರೆಶ್ ಪ್ಯಾಕೆಟ್!
ನಿನ್ನೆ ತನಕ
ಸೋಮಾರಿತನಕ್ಕೆ ಬೈದವರು
ಇಂದು ಅದನ್ನೇ ಹೇಳ್ತಾರೆ,
“ರಿಲ್ಯಾಕ್ಸ್, ವರ್ಷ ಇನ್ನೂ ಚಿಕ್ಕದು
ಈಗಷ್ಟೇ ಹುಟ್ಟಿದೆ!”
ಧ್ಯಾನ, ಯೋಗ, ಆರೋಗ್ಯ
ಎಲ್ಲವೂ ಲಿಸ್ಟ್ನಲ್ಲಿ ಇದೆ,
ಆದ್ರೆ ಈಗ ಕೈಲಿರುವ
ಒಂದು ಚಹಾನೇ,
ಜೀವನದ ತತ್ವ ಅನ್ಸತಿದೆ ,
ಜೀವನ ಅಂದ್ರೆ
ಎಲ್ಲವನ್ನೂ ಸರಿಪಡಿಸೋ ಪ್ರಯತ್ನವಲ್ಲ,
ಸ್ವಲ್ಪ ತಪ್ಪು, ಸ್ವಲ್ಪ ತತ್ವ,
ಮಧ್ಯೆ ಮಧ್ಯೆ ಜೋರಾದ ನಗು ಅಷ್ಟೇ
ಕ್ಷಣದ ಬದುಕ ಅನುಭವಿಸಲು,
ಜನವರಿ ಒಂದೆಂದರೆ
ಪರಿಪೂರ್ಣ ಆರಂಭವಲ್ಲ,
ಅಪೂರ್ಣ ಬದುಕಿನೊಂದಿಗೆ
ಸ್ನೇಹ ಮಾಡಿಕೊಂಡ ದಿನ,
ಈ ಹೊಸ ಕ್ಯಾಲೆಂಡರ್ ವರ್ಷದಲ್ಲಿ
ಖುಷಿ ಜಾಸ್ತಿ ಸಂಭ್ರಮಿಸೋಣ
ಗಂಬೀರವಾಗಿರೋದನ್ನ ಕಡಿಮೆ ಮಾಡಿ,
ಬದುಕು
ಸ್ವಲ್ಪ ಇನ್ನೂ ಚೆಂದವಾಗಿಸೋಣ…,
ಶಾಲಿನಿ ರುದ್ರಮುನಿ ಹುಬ್ಬಳ್ಳಿ



