ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು


ಮಳೆ ಹೊಯ್ದ ವರುಣ
ಸೂರ್ಯನ ಕಳಿಸಿದ
ಹಸಿಯಾದ ಭೂಮಿಯು
ಹದವಾಗಿದೆನೆಂದ?
ಬಿಸಿ ಕೊಟ್ಟ ರವಿಯು
ಹೂವು ಅರಳಿಸಿದ
ಸಂಜೆ ಹೊತ್ತಾಗುತಾ
ತಾನೇ ನಾಚಿ ಕೆಂಪಾದ.
ಮಳೆ ಸುರಿಸಿ ಬಾನು
ಇಳೆಗೆ ಇಣುಕಿತು
ಚಿಗುರೊಡೆದ ಭೂಮಿ
ಧನ್ಯವಾದ ಹೇಳಿತು.
ಹುಲುಸಾದ ಭೂಮಿಗೆ
ಸಂಕ್ರಾಂತಿಯೇ ಸೀಮಂತ
ಸಲಹುವ ಭೂತಾಯಿ
ಕಕ್ಕುಲಾತಿ ಹೃದಯಿ.
ಕೀಟವ ತಿಂದ ಹಕ್ಕಿ
ಬೆಳೆಯ ರಕ್ಷಿಸಿತು
ಮಾಗಿದ ತೆನೆ ತುಂಬಿ
ಮೃಷ್ಟಾನ್ನಪಡೆಯಿತು.
ಬೆವರು ಸುರಿಸುತ
ಕಷ್ಟಪಡೋ ರೈತನು
ಸಾಲ-ಶೂಲವಾದರೂ
ಅನ್ನ ಕೊಡೋ ದಾತನು.
ವ್ಯಾಸ. ಜೋಶಿ.



