ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಕೆ ಹಂಗರಗಿ
“ಸಾಧಿಸುವ ಛಲವೊಂದೇ”


ಸಾಗುವ ಜಗದಲಿ
ಹಲವು ಟೀಕೆಗಳಿರಲಿ
ಕೆಲವು ತಪ್ಪುಒಪ್ಪುಗಳಿರಲಿ
ನಡೆಯಬೇಕು ನಮ್ಮತನದಲಿ//
ಏನೇ ಬರಲಿ ಕಷ್ಟ
ಹೇಗೆ ಬರಲಿ ಸುಖ
ಹಿಗ್ಗದೆ ಕುಗ್ಗದೆ
ಮುನ್ನುಗ್ಗಿ ಸಾಗು //
ಸಾಕಿ ಸಲುಹಲು
ಯಾರಿಲ್ಲ ಜೊತೆಯಲಿ
ಕೊರಗದಿರು ಮನದಲಿ
ಬೆಳೆಯೋಣ ನಮಗೆ ನಾವೇ
ಜೀವನ ಪಯಣದಲಿ//
ಛಲಬೇಕು ಬೆಳೆಯಲು
ಮನದಲಿ ಬರಬೇಕು
ಸ್ವಲ್ಪ ಅವಕಾಶ ಸಿಕ್ಕರೂ
ಹಿಡಿದು ಮುನ್ನುಗ್ಗಬೇಕು//
ನಿನ್ನ ಒಲವು ನಿನಗೆ
ನಿನ್ನ ಗುರಿ ನಿನಗೆ
ನಿನ್ನ ನೋಟವೊಂದೇ
ಸಾಧಿಸಿ ನಗುವ ಛಲವೊಂದೇ//
ವಿಜಯಲಕ್ಷ್ಮಿ ಕೆ ಹಂಗರಗಿ




Good Poem