ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು.
“ವರುಷ ತಂದಿತ್ತೇ ಹರುಷ?”


ಹೊಸತಾದರೇನು-
ಬರುವ ಹೊಸ ವರುಷ,
ಹಳೇತಾದರೇನು-
ಕಳೆದೋದ ಪ್ರತಿ ನಿಮಿಷ,
ಹೊತ್ತು ತರಲಾರದೆಂದು-
ನಿಮಗದು,ಹೊಸ ಹೊಸ ಹರುಷ,!
ಬೇವರ ಇಳಿಸಿ ಮೈ ಬಗ್ಗಿಸಿ-
ದುಡಿಯಲಾಗದವನೇ ಮಹಾ ದಡ್ಡ
ಬಡಿಸಲಾರದವನು ಅನ್ನ-
ಹಸಿವು ನೀಗಿಸಲಾರದ ಶತ ಹೆಡ್ಡ,
ಮಸ್ತಕದೊಳು ಏನಿಲ್ಲ ಖಾಲಿ-
ಬೆಳೆಸಿದರೇನು ದೇಹ ಗಾತ್ರ ದೊಡ್ಡ.!?
ಹಮೀದ್ ಹಸನ್ ಮಾಡೂರು.



