ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸುಗಳನ್ನು ಮಾರಿದ್ದೇನೆ ಆದರೆ ಕೊಳ್ಳುವವರಿಲ್ಲ
ಮೂಕವಾಗಿ ರೋದಿಸುತ್ತಿದೆ ಮನ ಸಾಂತ್ವಾನ ಹೇಳುವವರಿಲ್ಲ
ನನ್ನೊಡಲು ಬರಿದಾಗಿದೆ ಹೇಗೆಂದು ಅರ್ಥೈಸಲಾಗುತ್ತಿಲ್ಲ.
ಜಗತ್ತಿನ ನಿಯತ್ತಿನ ಬಾಗಿಲು ತೆರೆಯುತ್ತಿದೆ ಯಾರಿಗೆ ಯಾರಿಲ್ಲ ಎಂಬುದು ಒಳ ಮನಸು ಕೇಳುತ್ತಿದೆ. ಎಲ್ಲವ ತಿಳಿಯುವುದು ತಡವಾಗಿದೆ
ಆದರೂ ಬದುಕಲ್ಲಿ ಬದುಕುವ ಆಸೆ ಅವಮಾನಿಸಿದವರ ಮುಂದೆ
ಅಭಿಮಾನದಿಂದ ಬೆಳೆವ ಬಯಕೆ ಚಿಗುರೋಡೆಯುತ್ತಿದೆ.
ಕರ್ತವ್ಯ ನಿಭಾಯಿಸುವ ಭರದಲ್ಲಿ ದೇಹದ ಶಕ್ತಿ ಕುಂದುತ್ತಿದೆ ಆತ್ಮದಲ್ಲಿ ನೀನಿನ್ನು ಜೀವಂತ ವಾಗಿರುವೆ ಫಿನಿಕ್ಸ್ ಹಕ್ಕಿಯಂತೆ
ಮರುಜನ್ಮ ಪಡೆಯುವ ಹೊಸ ಬಾಳಿನ ಹೊಂಗನಸಿನತ್ತ ವಾಸ್ತವತೆಯ ಲೋಕದಲಿ
ನಿನ್ನ ಅಳಲು ಕೇಳುವವರಿಲ್ಲ
ನಿನ್ನೊಲವು ಬೇಕಿಲ್ಲ ಯಾರಿಗೂ
ಬರಡು ಭೂಮಿಯಂತಿರದೇ
ಹೊಸತನದ ಹೊಸತರಲ್ಲಿ ಬದುಕಾಗಲಿ ಹಸನು ಹೊಸ ಹೂಗಳ ಚೆಲುವಂತೆ ಅರಳಲಿ ದಿಟ್ಟತನ ಸವೆಸಿದ ಕೆಟ್ಟ ಘಟನೆಗಳ ದಾರಿ ಮರೆತು
ಹೊಂಗಿರಣಗಳ ಬೆಳಕಾಗಲಿ ಮಧುರತೆಯ ಜೀವನ
“ಓ ಹೃದಯವೇ ನೀ ಪರರಿಗಾಗಿ ಮಿಡಿದು ಸೋತಿರುವೆ ಕ್ಷಮಿಸಿ ಬಿಡು ನನ್ನನ್ನು “……. ನನಗಾಗಿ ನೀ ಮಿಡಿಯುತ್ತಿರು ಎಂದೆಂದಿಗೂ ನೀ ನಿಲ್ಲುವವರೆಗೂ…….


About The Author

Leave a Reply

You cannot copy content of this page

Scroll to Top