ಮಾಧ್ಯಮ ಸಂಗಾತಿ
ವನಜ ಮಹಾಲಿಂಗಯ್ಯ .
“ಮೊಬೈಲ್ ನಿಂದ ಆಗುತ್ತಿರುವ ಅನಾಹುತ”

ಈಗ ಏಳೆಂಟು ವರ್ಷಗಳ ಹಿಂದೆ ಹೋಗಿ ನೋಡಿ, ಮೊಬೈಲ್ ಗಳನ್ನಿಡಿದು ರಸ್ತೆಗಳಲ್ಲಿ ಹುಚ್ಚರಂತೆ ಒಬ್ಬೊರೇ ಮಾತನಾಡುತ್ತಾ, ಕಿವುಡರು ಹಾಕಿಕೊಳ್ಳುವ ಮಿಷನ್ಗಳಂತೆ ಇಯರ್ ಪೋನ್, ಬ್ಲೂಟೂತ್ ಹಾಕಿಕೊಂಡು ಓಡಾಡುವವರನ್ನು ನೋಡಿ ಏನಪ್ಪ ಇದು ಅನ್ನೋ ತರ ಆಗಿತ್ತು.
ಇತ್ತೀಚೆಗಂತೂ ಮೊಬೈಲ್ ನ ಹಾವಳಿ ಬೇರೆ ತರ ಆಗಿದೆ.
watsapp , F b, insta ದಲ್ಲಿ ಪರಿಚಯವಾದವರ ಜೊತೆಯಲ್ಲಿ ಚಾಟಿಂಗ್ ಮಾಡ್ತಾ ಮಾಡ್ತಾ ಮನೆಯ ಪ್ರತಿಯೊಂದು ವಿಷಯಗಳನ್ನು ವಿವರವಾಗಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಮಕ್ಕಳು ಹೆಚ್ಚಾಗಿಯೇ ಬೆಳಸಿಕೊಳ್ಳುತ್ತಿದ್ದಾರೆ.ಇದನ್ನೇ ಬಳಸಿಕೊಂಡು ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡುತ್ತಾ ಅವರನ್ನು ಸಂತೈಸುತ್ತ ನಾಟಕವಾಡುವ ಮಂದಿ ಜಾಸ್ತಿಯಾಗುತ್ತಿದ್ದಾರೆ.
ಆದರೆ ಮಕ್ಕಳು ತಂದೆ ತಾಯಂದಿರ ಪ್ರೀತಿ ಅವರ ಜವಾಬ್ದಾರಿಗೆ ಬೆಲೆ ಕೊಡದೇ ಮೂರು ದಿನದ ಪರಿಚಯಸ್ಥರಿಗೆ ತಮ್ಮೆಲ್ಲಾ ಗುಟ್ಟನ್ನು ಬಿಟ್ಟುಕೊಟ್ಟು ಮೂರ್ಖರಾಗುತ್ತಿದ್ದಾರೆ. ಎಷ್ಟೇ ಆಗಲಿ ನನ್ನ ಅಪ್ಪ ಅಮ್ಮ ಹೆತ್ತು ಹೊತ್ತು ಸಾಕಿ ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಕಾಳಜಿ ವಹಿಸಿದ್ದಾರೆ ಎನ್ನುವ ಅರಿವಿಲ್ಲದೆ ಮನೆಯ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಎಷ್ಟು ಸರಿ?
ಮೊನ್ನೆ ಇದೇ ತರಹದ ಒಂದು ದೂರು ನನಗೆ ಬಂದಿತ್ತು.
ಅಪ್ಪ ಅಮ್ಮನಿಗೆ ಮಗಳಿಂದ ತುಂಬಾ ಕಿರುಕುಳ, ಮಾತೇ ಕೇಳುವುದಿಲ್ಲ, ಪಿ ಜಿ ಗೆ ಸೇರಿಸಿ ಎಂದು ಒತ್ತಾಯ ಮಾಡುತಿದ್ದಾಳೆಂದು. ನಾನು ಹೋದೆ ಅಲ್ಲಿ ಅವಳ ತಂದೆ ತಾಯಿ ಅವಳ ಬಗ್ಗೆ ಏನು ಹೇಳಲು ಹುಡುಗಿ ಬಿಡುತ್ತಿಲ್ಲ.
ಒಂದೇ ಹಠ ನನ್ನ ಪಿಜಿಗೆ ಕಳಿಸಿ ಮೇಡಂ ನಾನು ಮನೆಯಲ್ಲಿರುವುದಿಲ್ಲ. ನನಗೆ ತುಂಬಾ ಕಿರುಕುಳ ಕೊಡುತ್ತಾರೆ ನಾನು ಪಿ ಜಿಯಲ್ಲಿರುತ್ತೇನೆ ಎಂದು. ಯಾಕೆ ಇಂತಹ ತೀರ್ಮಾನವೆಂದು ಕೆಳಿದರೆ ನನಗೆ ಮನೆಯಲ್ಲಿರಲು ಇಷ್ಷವಿಲ್ಲ.ಒಂದೇ ಉತ್ತರ. ನಾನಾಗ ನಿನ್ನ ಮೊಬೈಲ್ ಕೊಡು ಎಂದು ಕೇಳಿದೆ. ಇಲ್ಲ ಮೇಡಂ ನನ್ನ ಹತ್ತಿರ ಮೊಬೈಲ್ ಇಲ್ಲ
ಅಂದಳು .ಇದೆ ಎಂದು ಅವರ ತಾಯಿ ಹೇಳಿದರು..ಕೊಡು ಎಂದೆ ತಂಬಾ ಜೋರುಮಾಡಿದ ಮೇಲೆ ಸ್ವಿಚ್ ಆಫ್ ಮಾಡಿ ಬಚ್ಚಿಟ್ಟ ಮೊಬೈಲ್ ಕೊಟ್ಟಳು. ಲಾಕ್ ಓಪನ್ ಮಾಡೆಂದರೆ ಮಾಡಲೇ ಇಲ್ಲ ಗೊತ್ತಿಲ್ಲ, ಮರೆತೋಗಿದೆ ಅಂದಳು. ಸಿಟ್ಟು ಬಂದು ಎರಡು ಬಿಟ್ಟೆ.ಆಗ ಆನ್ ಮಾಡಿದಳು.ನಾನು ತೆಗೆದು ನೋಡ್ತಿನಿ ಮನೆಯಲ್ಲಿ ನಡೆಯೋದನ್ನೆಲ್ಲ ಒಬ್ಬ ಹುಡುಗನಿಗೆ ಮೆಸೇಜ್ ಮಾಡಿದಾಳೆ. ಅವನ್ಯಾರೆಂದು ಕೇಳಿದೆ , f b ಸ್ಹೇಹಿತ ತುಂಬಾ ಒಳ್ಳೆಯವನು ಅಂದಳು. ಸರಿ ಅಂದು ಅವನಿಗೆ ಕಾಲ್ ಮಾಡಿದೆ.ಯಾರೆಂದು ವಿಚಾರಿಸಿದೆ, ಅವನು ಬೇಂಗಳೂರಿನಲ್ಲಿ ಕೋರಿಯರ್ ಬಾಯ್. ಅಂತೆ , ಏನಪ್ಪ ನೀನು ನಮ್ಮ ಹುಡುಗಿಗೆ ಇಷ್ಷವಾಗಿದಿಯಂತೆ ಇವಳಿಗೆ ಮದುವೆ ಮಾಡ್ಕೋತಿಯಾ? ಅಂತ ಕೇಳಿದೆ. ಸ್ಪೀಕರ್ ಅನ್ ಮಾಡಿದ್ದೆ ನಾನ್ಯಾಕರಿ ಅವಳನ್ನ ಮದುವೆಯಾಗಲಿ ಟೈಂಪಾಸಿಗೆ ಅವಳ ಹತ್ತಿರ ಮಾತಾಡ್ತಿದ್ದೆ , ನನಗೆ ಲವ್ವರ್ ಇದಾಳೆ ಅಂದ. ಹುಡುಗಿ ಶಾಕ್! ಅವಳು ಪಿ ಜಿ ಗೆ ಹೊರಟಿದ್ದು ಅವನ ಜೊತೆ ಚಾಟಿಂಗ್ ಮಾಡಲಿಕ್ಕೆ.ಅವನು ಹೇಳಿದ್ದು ಕೇಳಿದ ನಂತರ ನಾನು ಎಲ್ಲಿಗೂ ಹೊಗಲ್ಲ. ಮನೆಯಲ್ಲಿಯೆ ಇರುತ್ತೇನೆ ಅಂದಳು. ಅಂದರೆ ಅರ್ಥ ಮಾಡಿಕೊಳ್ಳಿ ಮೊಬೈಲ್ನಿಂದ ತಾಯಿ ತಂದೆಯನ್ನು ದೂರಮಾಡಿಕೊಂಡು ಹೋಗುವ ಕೆಟ್ಟ ನಿರ್ಧಾರಕ್ಕೆ ಬರುವ ಈ ಮಕ್ಕಳು ಎಂತಹ ವಿದ್ಯಾವಂತರು? ಪೋನಿಂದ ಪರಿಚಯವಾದ ತಕ್ಷಣ ಮನೆಯ ವಿಷಯವನ್ನೆಲ್ಲ ಹೇಳಿಕೊಳ್ಳುವುದು ಎಷ್ಟು ಸಮಂಜಸ? ಬೇಡ ಮಕ್ಕಳೇ ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಹೆತ್ತವರನ್ನು ನೋಯಿಸಬೇಡಿ. ಜೀವ ಜೀವನ ಹೋದರೆ ಮತ್ತೆ ಸಿಗುವುದಿಲ್ಲ. ತಂದೆ ತಾಯಿಯ ಮರ್ಯಾದೆಯನ್ನು ಕಳೆದು ಯಾರನ್ನೋ ನಂಬಿ ಹಾಳಾಗಬೇಡಿ.
ಮೊಬೈಲನ್ನು ಒಳ್ಳೆಯದಕ್ಕೆ ಉಪಯೋಗಿಸಿ ಎಂದಷ್ಟೆ ನನ್ನ ಕಾಳಜಿ
ವನಜ ಮಹಾಲಿಂಗಯ್ಯ




