ಕಾವ್ಯ ಸಂಗಾತಿ
ವಾಣಿ ಯಡಹಳ್ಳಿ ಮಠ
“ಮುಲಾಮು” ಕವಿತೆ


ಕೆಲ ನೋವುಗಳ ಗಾಯ ಕಾಣಿಸುವುದಿಲ್ಲ
ಕೆಲ ಶಿಕ್ಷೆಗಳಿಗೆ ಕಾರಣಗಳಿರುವುದಿಲ್ಲ
ಪ್ರೀತಿ ಹುಟ್ಟಲು ನೆಪವು ಬೇಕಿಲ್ಲದ ಹಾಗೆಯೇ
ಅಗಲಿಕೆಗೆ ಯಾವ ತಪ್ಪುಗಳೂ ಕಾರಣವಾಗುವುದಿಲ್ಲ
ಕೆಲವರು ಜೀವನ ಪರ್ಯಂತ ಜೊತೆಗುಳಿಯುವುದಿಲ್ಲವಷ್ಟೇ
ಅವರ ನೆನಹು ಮುಲಾಮಿನಂತಿರುತ್ತದೆಯಷ್ಟೇ
ವಾಣಿ ಯಡಹಳ್ಳಿ ಮಠ



