ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್ ಕವಿತೆ
ಅಕ್ಷರ ಮಾತೆ


ಅಕ್ಷರದವ್ವ ನೀವು ಮಾತೆ ಸಾವಿತ್ರಿಬಾಯಿˌˌˌ
ಎಲೆ ಮರೆಯ ಗಿಣಿಯಂತಿದ್ದ ತ್ಯಾಗಮಯಿˌˌ
ನಿನ್ನ ಸೇವೆಗೆ ಸಾಟಿ ಬೇರಿಲ್ಲ ಯಾರು ˌˌˌ
ಬೇಡುವೆವು ನಿನಗೆ ಬರಲಿ ಜನ್ಮ ನೂರುˌˌ
ಬಾಲೆಯರ ಶಿಕ್ಷಣದ ಆಶಾಜ್ಯೋತಿ ನೀವುˌˌˌ
ಅಕ್ಷರದ ದೀಪ ಬೆಳಗಿದಿರಿ ಸಮಾಜದಿ ತಾವುˌˌ
ಮೌಢ್ಯತೆಯ ಮೆಟ್ಟಿನಿಂತ ಧೀಮಂತ ನಾರಿˌˌˌ
ಸಹಿಸಿದಿರಿ ನೂರೆಂಟು ಅಪಮಾನದ ದಳ್ಳುರಿˌˌˌ
ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದಿರಿ ಅಂದುˌˌˌ
ನೀವು ಹೊತ್ತಿಸಿದ ಹಣತೆಗೆ ತೈಲವೆರೆವೆವು ಇಂದುˌˌ
ಪತಿ ಫುಲೆಯ ಪ್ರೋತ್ಸಾಹವೇ ನಿಮ್ಮ ಶಕ್ತಿಯುˌˌˌ
ಆದರ್ಶ ಶಿಕ್ಷಕಿ ನಿಮ್ಮ ಜೀವನವೆ ಸ್ಫೂರ್ತಿಯುˌˌˌ
ನಿಮ್ಮ ನಿಸ್ವಾರ್ಥ ಸೇವೆಗೆ ಲೋಕವೇ ಬೆರಗುˌˌ
ಧನ್ಯತಾಭಾವ “ಪ್ರಥಮ ಶಿಕ್ಷಕಿ” ಎಂಬ ಬಿರುದಿಗೂˌˌˌˌ
ನಿಮ್ಮ ಪಡೆದ ಭಾರತಾಂಬೆ ತಾನೆಂದೂ ಮಾನ್ಯಳುˌˌ
ಅಮರವೇ ಎಂದಿಗೂ ನಿಮ್ಮ ಆದರ್ಶಗಳುˌˌˌ
———–
ಮಧುಮಾಲತಿ ರುದ್ರೇಶ್




ಧನ್ಯವಾದಗಳು ತಮಗೆ