ಕಾವ್ಯ ಸಂಗಾತಿ
ಲತಾ ಎ ಆರ್ ಬಾಳೆಹೊನ್ನೂರು
ನನ್ನವನು

ಕಣ್ಣಿನಲಿ ಇಳಿಸಿದೆ ಪ್ರೇಮಪತ್ರವ ಹೃದಯಕೆ
ಅರಿತು ಮನ ಸೆಳೆದಿಹುದು ಬರಹಕೆ
ಆಳದ ಮಾತು ಇಳಿಸಲಾಗದು ಕವನಕೆ
ಬಯಸಿದೆ ಜೀವ ಬಿಡಿಸದ ಬಂಧನಕೆ
ಸೆಳೆಯುತಿರುವೆ ಕನಸು ನನಸಿನಲಿ
ನೋಡ ಬಯಸಿರುವೆ ಈ ದಿನದಲಿ
ತಂಗಾಳಿ ಸುಳಿದಂತೆ ನಿನ್ನ ನೆನಪಿನಲಿ
ಚಳಿಯಲ್ಲೂ ಮೈ ನಡುಗಿದೆ ಕಂಪಿಸುತಲಿ
ನೀನೆ ಜೀವನದ ಸುಮಧುರ ಗೆಳೆಯ
ಸರಿಯುತಿದೆ ಸವಿಯಾದ ಸಮಯ
ಬರೆದು ಬಿಡು ಹೆಸರ ಸಹಿಯ
ಕಾಪಾಡುವ ಪ್ರೇಮಿಗಳಂತೆ ಪ್ರೀತಿ ನಿಧಿಯ
ನೀನೆಂದೆಂದು ನನ್ನವನು ತಿಳಿದಿರು
ನನ್ನೊಲವ ಪ್ರೇಮವ ತೊರೆಯದಿರು
ಸಪ್ತ ಸಾಗರದಾಚೆ ನನ್ನ ಕರೆಯದಿರು
ತಾಯಿ ನೆಲದ ಋಣವ ಮರೆಯದಿರು
ಲತಾ ಎ ಆರ್ ಬಾಳೆಹೊನ್ನೂರು




