ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳೆಯರೆ
ಸತ್ಯ ಶುದ್ಧತೆಗೆ
ಇಲ್ಲ ಬೆಲೆ ಗೌರವ
ಉಪ್ಪಿನಲ್ಲಿ ಕಾಣದ
 ಇರುವೆಗಳು
ಸಕ್ಕರೆಯಲ್ಲಿ ಮುಕ್ಕುತ್ತವೆ.
ಹಾಲು ಮಾರುವವನು
ಓಣಿ ಕೇರಿ ತಿರುಗಬೇಕು
ಹಾಲು ಕೊಳ್ಳುವವರು
 ಕೇಳುತ್ತಾರೆ
ನೀರೆಷ್ಟು ಬೆರೆಸಿದೆಯೆಂದು
ಆಲ್ಕೊಹಾಲ್ ಮಾರುವವನ
ಅಂಗಡಿಯಲ್ಲಿ ಜನ ಜಂಗುಳಿ
ಅವರೆ ಸಾರಾಯಿಯಲ್ಲಿ
ನೀರು ಸೋಡಾ ಬೆರೆಸಿ
 ಸಂಭ್ರಮಿಸುತ್ತಾರೆ
ಮನುಷ್ಯನಿಗೆ ಪಶುವೆಂದರೆ
ಎಲ್ಲಿಲ್ಲದ ಕೋಪ
ಸಿಂಹ ಹುಲಿಯೆಂದರೆ
ಹಿಗ್ಗಿ ಕುಣಿಯುತ್ತಾನೆ.
ಪಾಪ ಅವನಿಗೆ ಗೊತ್ತಿಲ್ಲ
ಅವುಗಳು ಪಶುವೆಂದು
ತಿಳಿ ನೀರಿನಲ್ಲಿ ಎಂದೂ
 ಮೀನು ವಾಸಿಸುವುದಿಲ್ಲ
ಕೊಳಚೆಯಲ್ಲಿ ಅವುಗಳ ಸಂತೆ
ಸತ್ಯ ಹೇಳುವವನಿಂದು
ಒಂಟಿಯಾಗುತ್ತಿದ್ದಾನೆ
ಸುಳ್ಳಿಗೆ ಸನ್ಮಾನದ  ಪಟ್ಟ
ನೆನಪಾಗುತ್ತಾರೆ
ಬುದ್ಧ ಬಸವ ಬಾಪು
ಸತ್ಯ ಹೇಳಿ
 ಬಿಟ್ಟು ಹೋದರು ಜಗವ


About The Author

6 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ””

  1. ಸತ್ಯ ಹೇಳುವವ ಒಂಟಿ ಯಾಗುವದು ,ಕ್ಷಣಿಕ ,ಸುಳ್ಳು ಮರೆಮಾಚಲು ,ಸತ್ಯಕೆ ಹೊಳಪು ಹೆಚ್ಚುವುದು.ನೆನಪಾಗುತ್ತಾರೆ ನೇರ,ನಿಷ್ಠುರ ವಿಡಂಬನಾತ್ಮಕ ಕವನ ಮಾರ್ಮಿಕವಾಗಿ ಬರೆದಿದ್ದೀರಿ . ಧನ್ಯವಾದಗಳು ಸರ್.

Leave a Reply

You cannot copy content of this page

Scroll to Top