ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಮೇಷ್ಟ್ರು


ನಿಮ್ಮಂತ ಮೇಷ್ಟ್ರು ನಂಗೆ ಸಿಕ್ಕರೆ
ಕನ್ನಡ ಕಲಿಯಲು ನನಗೆ ಬಲು ಅಕ್ಕರೆ
ನಮ್ಮ ಕನ್ನಡವೆಂದರೆ ಸಿಹಿ ಸಕ್ಕರೆ
ಅ ಆ ಅಕ್ಷರಗಳೆಂದರೆ ಅರಳಿದ ತಾವರೆ//
ನೀವಂದ್ರೆ ತಾಯ್ನುಡಿ ಭಾಷೆಯಲ್ಲೆ ಬರೆ
ತಾಯ್ನುಡಿ ಸಿರಿಯಲ್ಲೇ ಮೈಮರೆ
ಸಿರಿಗನ್ನಡ ನುಡಿ ಸವಿಗನ್ನಡ ನುಡಿ
ಎನ್ನುತಾ ಎಲ್ಲರ ಕೈಮಾಡಿ ಕರೆವೆ//
ನೀವು ಪಾಟೀ ಬಳಪ ಹಿಡಿ ಎಂದರೆ
ಕುಣಿ ಕುಣಿದು ಬರೆವೆ ಇಲ್ಲಾ ತೊಂದರೆ
ಸಹ್ಯಾದ್ರಿ ಬೆಟ್ಟ ಕೊಡಚಾದ್ರಿ ಕಣಿವೆ
ಮೈಸೂರು ಚಾಮುಂಡಿ ಬೆಟ್ಟ ಸುತ್ತಿ ಬರುವೆ//
ನಗುನಗುತ ಓದು ಅಂತಾ ಹೇಳಿದರೆ
ಚಟ ಪಟ ಎಣಿಸಿ ಹೇಳುವೆ ಚುಕ್ಕಿ ತಾರೆ
ಕಾವೇರಿ ನದಿ ಜೋಗದ ಝರಿಯ ಸಿರಿ
ಎಲ್ಲಾ ಬಣ್ಣಿಸಿ ಹೊಗಳಿ ಹೊಗಳಿ ಹಾಡುವೆ//
ಪದ್ಯಪಾಠ ಬಾಯಿಪಾಠ ಮಗ್ಗಿ ಹೇಳಿದರೆ
ಜಿಗಿಜಿಗಿದು ಹೇಳುವೆ ನೀವು ಮುಂದಿದ್ದರೆ
ಶಿಲ್ಪಕಲೆ ಸಂತಸದ ಹೊನ್ನ ಮಣ್ಣ ಮೇಲೆ
ಹಾಯಾಗಿ ನಿದಿರಿಸಿ ಕನಸಲ್ಲೂ ಕನ್ನಡ ಕಾಣುವೆ//
ಡಾ ಅನ್ನಪೂರ್ಣ ಹಿರೇಮಠ



