ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ನಾ ಕಂಡ ಐರಲ್ಯಾಂಡ”


ಐರಲ್ಯಾಂಡದಲ್ಲಿ ಕಾಲಿಟ್ಟಾಗ ನಾವು
ಫ್ರಿಡ್ಜನಲ್ಲಿ ಹೋಗುತ್ತಿದ್ದಂತೆ ಭಾಸವು
ಮೋಡ ಕವಿದ ವಾತಾವರಣವು
ಜಿಟಿಜಿಟಿ ಮಳೆ ಗಾಳಿಯ ಅನುಭವವು
ಹೊರಗಡೆ ಹೊರಟರೆ ನೋ ಡೌಟ್
ಎರಡು ಪ್ಯಾಂಟ್ ಎರಡು ಶರ್ಟ್
ಶೂಸ್ ಮತ್ತು ಸಾಕ್ಸ್ ಒಂದು ಜಾಕೆಟ್
ನಮ್ಮ ಧಿರಿಸಿನಿಂದ ನಾವು ಸ್ಮಾರ್ಟ್
ತೆಗ್ಗುದಿನ್ನಿ ಇಲ್ಲದ ಸರಳ ದಾರಿಗಳು
ಮನುಷ್ಯರಿಗಿಂತ ಹೆಚ್ಚು ಕಾರುಗಳು
ದೊಡ್ಡ ಪ್ರಮಾಣದ ಮಾಲ್ ಕಟ್ಟಡಗಳು
ಒಂದೇ ತರಹದ ಮನೆಯ ವಿನ್ಯಾಸಗಳು
ಚೆಂದ ಚೆಂದ ಉದ್ಯಾನವನಗಳು
ಹಚ್ಚಹಸಿರು ಹುಲ್ಲಿನ ಹಾಸಿಗೆಗಳು
ಅಲ್ಲಲ್ಲಿ ಕೂಡಲು ಕಲ್ಲಿನ ಆಸನಗಳು
ಹಸಿಯಿರಲು ನಿಂತು ಸೋತವು ಕಾಲುಗಳು
ಶಿಸ್ತು ಸ್ವಚ್ಛತೆಗೆ ಪ್ರಾಮುಖ್ಯತೆ ಇದೆ
ತಾಳ್ಮೆ ಪ್ರೀತಿ ಪರಸ್ಪರ ಸಹಕಾರವಿದೆ
ನೀತಿ ನಿಯಮಗಳ ಪಾಲನೆಯಿದೆ
ಪ್ರಾಣಿ ಪಕ್ಷಿಗಳಿಗೆ ಬಲು ಕಾಳಜಿಯಿದೆ
ಪ್ರಕೃತಿಯ ಸೌಂದರ್ಯ ಅತಿ ಸುಂದರ
ಧೂಳಿಲ್ಲದ ಸ್ವಚ್ಛ ಶುದ್ಧ ಪರಿಸರ
ವಿವಿಧ ಬಣ್ಣದಲಿ ಕೆರೆ ನದಿ ಸಾಗರ
ದಾರಿಯುದ್ದ ಚೆಂದದ ಕ್ರಿಸ್ಮಸ್ ಮರ
ಜನರ ಮಾತಿನಲ್ಲಿ ಇಲ್ಲ ಧ್ವನಿ ಏರು
ಮಕ್ಕಳ ಮೇಲೆ ಮಾಡೋಹಾಗಿಲ್ಲ ಜೋರು
ತಮ್ಮ ಕೆಲಸ ತಾವೇ ಮಾಡುವ ಜಾಣರು
ನಿಯಮಪಾಲನೆಯಿಂದ ಚೆಂದ ಈ ಊರು
ಜಯಶ್ರೀ ಎಸ್ ಪಾಟೀಲ,ಧಾರವಾಡ




Excellent madam